“ಮುಮ್ತಾಜ್ ಅಲಿ, ಆಯಿಷಾ ರೆಹಮತ್ ಪರಿಚಯ ನನಗಿಲ್ಲ, ಆದರೂ ಕೇಸಲ್ಲಿ ಫಿಕ್ಸ್ ಮಾಡಿದ್ರು!” -ಶಾಫಿ ನಂದಾವರ ಆರೋಪ
ಮಂಗಳೂರು: “ನಾನು ಹಲವು ವರ್ಷಗಳಿಂದ ಪರವಾನಿಗೆ ಹೊಂದಿದ ಮರಳು ಮತ್ತು ಹಳೆ ವಾಹನಗಳ ಖರೀದಿ ಮತ್ತು ಮಾರಾಟದ ವ್ಯವಹಾರ ಮಾಡುತ್ತಾ ಬಂದಿದ್ದೇನೆ. ಧಾರ್ಮಿಕ ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದೇನೆ. ಧಾರ್ಮಿಕವಾಗಿ ನಂದಾವರ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿಯೂ, ಪ್ರತಿಷ್ಠಿತ ಸಮಸ್ತ ಸಂಘಟನೆ ಅಧೀನದ ಸಜಿಪ ರೇಂಜ್ ಮದ್ರಸಾ ಮೆನೇಜ್ ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಯಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಶಂಶುಲ್ ಉಲಮಾ ಎಜ್ಯುಕೇಶನ್ ಟ್ರಸ್ಟ್ (ರಿ.) ನಂದಾವರ […]













