November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಕಾಶ್ಮೀರ್ ಮಿನೇಜಸ್ ಇನ್ನಿಲ್ಲ

ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ಡಾ. ಜೆ.ಬಿ. ಸಲ್ಡಾನ್ಹಾ ಹಾಗೂ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರಿಂದ ತೀವ್ರ ಸಂತಾಪ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 1991-93 ಅವಧಿಯ ಕೇಂದ್ರೀಯ ಮಾಜಿ ಅಧ್ಯಕ್ಷ, ಸಮಾಜ ಸೇವಕ, ಸಂಘಟನಾ ಚತುರ ಹಾಗೂ ನಿವೃತ್ತ ಶಿಕ್ಷಕ ಬೆಳ್ತಂಗಡಿ ನಿವಾಸಿ 79 ವರ್ಷ ಪ್ರಾಯದ ಕಾಶ್ಮೀರ್ ಮಿನೇಜಸ್ ರವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 12ರಂದು ಬುಧವಾರ ನಿಧನ ಹೊಂದಿದರು. ಉಜಿರೆಯ ರತ್ನಮಾನಸದ ಮುಖ್ಯ ಪಾಲಕರಾಗಿ 1972 ರಿಂದ 2012 ಕಾರ್ಯನಿರ್ವಹಿಸಿರುವ […]

News

ಸತತ 5ನೇ ಬಾರಿಗೆ ನರಿಕೊಂಬು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ರವಿ ಅಂಚನ್ ಅಬೆರೊಟ್ಟು ಆಯ್ಕೆ

ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇದರ ನೂತನ ಅಧ್ಯಕ್ಷರಾಗಿ 5ನೇ ಬಾರಿಗೆ ರವಿ ಅಂಚನ್ ಅಬೆರೊಟ್ಟು ಆಯ್ಕೆಯಾಗಿದ್ದಾರೆ. ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಶಾಲಾ ಪೋಷಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.  ಉಳಿದಂತೆ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಲಕ್ಷ್ಮಿ ಪ್ರಕಾಶ್, ಸದಸ್ಯರುಗಳಾಗಿ  ದಾಮೋದರ್, ಕಮಲಾಕ್ಷ, ನವೀನ್, ಪ್ರಮೋದ್, ಜಯಪ್ರಕಾಶ್, ಶಶಿಕಲಾ, ಜಯಶ್ರೀ, ಪ್ರಿಯಾ, ಸುಂದರಿ, ತ್ರಿವೇಣಿ, ಮೀನಾಕ್ಷಿ, ಚಿತ್ರಾಕ್ಷಿ, ದಿವ್ಯಾ ಕೆ., ಮೇಘಶ್ರೀ, ಜಯಶ್ರೀ ಶೆಟ್ಟಿ ಮತ್ತು […]

News

ಪತ್ರಕರ್ತ – ನಿರೂಪಕ ಶಂಶೀರ್ ಬುಡೋಳಿ ಇವರು ‘ಸ್ವಾಭಿಮಾನಿ ಕ‌ನ್ನಡಿಗ’ ಪ್ರಶಸ್ತಿಗೆ ಆಯ್ಕೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಾಧಕರಿಗೆ ನೀಡಲ್ಪಡುವ ‘ಸ್ವಾಭಿಮಾನಿ ಕನ್ನಡಿಗ’ ಪ್ರಶಸ್ತಿಗೆ ಪತ್ರಕರ್ತ, ನಿರೂಪಕ, ಕವಿ, ಲೇಖಕ, ಪಿ.ಎಚ್.ಡಿ. ಸ್ಕಾಲರ್ ಶಂಶೀರ್ ಬುಡೋಳಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಫೆಬ್ರವರಿ 16ರಂದು ಆದಿತ್ಯವಾರ ಪೆರಾಜೆಯಲ್ಲಿ ನಡೆಯಲಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ 50ರ ಸಂಭ್ರಮ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ […]

News

ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್ ರೈ ಮಾಣಿ ಇವರ ಮಗಳು ವೆನ್ಯ ರೈ ನಾಯಕಿಯಾಗಿ ನಟಿಸಿದ ‘ಆರಾಟ’ ಕನ್ನಡ ಸಿನಿಮಾ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

ಬೆಂಗಳೂರಿನಲ್ಲಿ ಮಾರ್ಚ್ 1ರಿಂದ 8ರ ತನಕ ನಡೆಯಲಿರುವ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್ ರೈ ಮಾಣಿ ಇವರ ಮಗಳು ವೆನ್ಯ ರೈ ನಾಯಕಿಯಾಗಿ ನಟಿಸಿದ ಆರಾಟ ಕನ್ನಡ ಸಿನಿಮಾ ಆಯ್ಕೆಯಾಗಿದೆ. ಅದರಂತೆಯೇ ಪಿದಾಯಿ ಹಾಗೂ ದಸ್ಕತ್ ಎನ್ನುವ ತುಳು ಸಿನಿಮಾಗಳೂ ಆಯ್ಕೆಯಾಗಿವೆ. ಈ ಮೂರೂ ಚಲನಚಿತ್ರಗಳ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರು ತುಳುನಾಡಿನವರಾಗಿರುವುದು ನಮ್ಮ ಮಂಗಳೂರು ಜನರಿಗೆ ಹೆಮ್ಮೆಯ ವಿಚಾರ. ಈ […]

News

 ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪ್ರಾತಃ ಕಾಲ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡಂತಹ ಕಾರ್ಯಕ್ರಮವು ನಂತರ ಕಲ್ಮಂಜ ಗ್ರಾಮದ ಆಯ್ದ ಭಜನಾ ತಂಡಗಳಿಂದ ಭಜನಾ ಸೇವೆಯು ಜರುಗಿತು. ನಂತರ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ವಿವಿಧ ಜಾನಪದ ನೃತ್ಯ ತಂಡಗಳೊಂದಿಗೆ ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಭಾರತೀಯ ಸೇನೆಯ ನಿವೃತ್ತ ವೀರ ಯೋಧ ಮಂಜುನಾಥ ನಾಯ್ಕರವರನ್ನು ಹಾಗೂ […]

News

ಅಳದಂಗಡಿ ಸತ್ಯದೇವತೆ ದೈವದ ಕಾರ್ಣಿಕ – ಕಳೆದುಹೋದ ಚಿನ್ನದ ಬ್ರೆಸ್ ಲೆಟ್ ಪತ್ತೆ

ಬೆಳ್ತಂಗಡಿ : ಅಳದಂಗಡಿಯ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಫೆಬ್ರವರಿ 7ರಂದು ಮುಂಡೂರು ನಿವಾಸಿ ರಮಣಿ ಯವರ ಚಿನ್ನದ ಬ್ರೆಸ್ ಲೆಟ್ ಕಳೆದು ಹೋಗಿದ್ದು ಫೆ.9 ರಂದು  ಅಳದಂಗಡಿ ಸತ್ಯದೇವತೆ ದೈವದ ಕಾರ್ಣಿಕದಿಂದ ಮೇಲಂತಬೆಟ್ಟು ಬಳಿ ಪತ್ತೆಯಾಗಿದೆ. ರಮಣಿಯವರು ಅಳದಂಗಡಿ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ತನ್ನ ಚಿನ್ನವನ್ನು ಕಳೆದುಕೊಂಡಿದ್ದರು. ಅದು ಎಷ್ಟು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ವೇಳೆ ಚಿನ್ನದ ಬ್ರೆಸ್ ಲೆಟ್ ಸಿಕ್ಕಿದರೆ ಅಳದಂಗಡಿ ಸತ್ಯದೇವತೆ ದೈವಸ್ಥಾನಕ್ಕೆ ಹೋಗಿ ಅಗೇಲು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದರು. […]

News

ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವ

ಬೆಳ್ತಂಗಡಿ : ಅರಮಲೆಬೆಟ್ಟ  ಕೊಡಮಣಿತ್ತಾಯ ಕ್ಷೇತ್ರದಲ್ಲಿ ಅದ್ಭುತ ಕೆಲಸವಾಗಿದ್ದು, ಉತ್ತಮ ವ್ಯವಸ್ಥೆಯನ್ನು ಭಕ್ತರ ಸಹಕಾರದಲ್ಲಿ ಆಡಳಿತ ಮಂಡಳಿ ಮಾಡಿದೆ. ಬಹಳಷ್ಟು ಕಾಮಗಾರಿ ನಡೆದಿದ್ದು ಕೊಡಮಣಿತ್ತಾಯ ದೈವದ ಸಂಪೂರ್ಣ ಆಶೀರ್ವಾದ ಕಡಂಬು ಮನೆತನದವರಿಗೆ ಮತ್ತು ಊರಿನ ಜನರಿಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಉಗ್ರಾಣ ಮುಹೂರ್ತ […]

News

ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಹಬ್ಬ 2025

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಸೃಜನಶೀಲತೆ ಪ್ರತಿಭೆ ಹಾಗೂ ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಲು ಫೆಬ್ರವರಿ 10ರಂದು ಕಲಾ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಚಾಲಕರಾದ ವಂದನೀಯ ಫಾದರ್ ಅಬೆಲ್ ಲೋಬೊ ಹಾಗೂ ಪ್ರಾಂಶುಪಾಲರಾದ  ವಂದನೀಯ ಫಾದರ್ ವಿಜಯ್ ಲೋಬೊ ಇವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಚಾಲಕರು ಕಲೆಯು ಮಕ್ಕಳಲ್ಲಿ ಅಭಿರುಚಿಯನ್ನು ಬೆಳೆಸುತ್ತದೆ. ಅದನ್ನು ಪೋಷಿಸುವ ಕಾರ್ಯ ನಮ್ಮ ಶಿಕ್ಷಣ ಸಂಸ್ಥೆಯಿಂದ ಆಗುತ್ತಿದೆ. ಮಕ್ಕಳ ಕಲಾ ಪ್ರತಿಭೆಗೆ ವೇದಿಕೆಯನ್ನು ಸಲ್ಲಿಸಿದ […]

News

158 ಸಿವಿಲ್ ಜಡ್ಜ್ ಹುದ್ದೆಗೆ ನೇರ ನೇಮಕಾತಿ – ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ – ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 158 ಸಿವಿಲ್ ಜಡ್ಜ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 ಮತ್ತು ಅದರ ತಿದ್ದುಪಡಿ ಮಾಡಲಾದ ನಿಯಮಗಳು 2011. 2015, 2016 ಮತ್ತು 2024 ಮತ್ತು ಸರ್ವೋಚ್ಚ ನ್ಯಾಯಾಲಯದ SMW (C) No. 2/2024 ದಿನಾಂಕ 07.11.2024ರ ಆದೇಶದನ್ವಯ, ಕರ್ನಾಟಕ […]

You cannot copy content of this page