November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

SYS ಈಶ್ವರ ಮಂಗಳ ಸರ್ಕಲ್ ಮಹಾ ಸಭೆ ಹಾಗೂ ಸಮಿತಿ ಪುನರಚನೆ

ಈಶ್ವರ ಮಂಗಳ: ಕರ್ನಾಟಕ ರಾಜ್ಯ ಯುವಜನ ಸಂಘ SჄS ಈಶ್ವರ ಮಂಗಳ ಸರ್ಕಲ್ ಮಹಾ ಸಭೆಯು ಉಮರ್ ಸ ಅದಿಯವರ ಅಧ್ಯಕ್ಷತೆಯಲ್ಲಿ ಈಶ್ವರ ಮಂಗಳ ತ್ವೈಬ ಸೆಂಟರ್ ನಲ್ಲಿ ನಡೆಯಿತು. SჄS ಪುತ್ತೂರು ಝೋನ್ ನಾಯಕರಾದ ಅಬ್ದುಲ್ ಜಲೀಲ್ ಸಖಾಫಿ ಉದ್ಘಾಟಿಸಿ ಆತ್ಮೀಯ ಸಂದೇಶವನ್ನು ನೀಡಿದರು. ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಹಾಗೂ ಝೋನ್ ನಾಯಕರಾದ ಹಮೀದ್ ಕೊಯಿಲರವರು ಸಂಘಟನಾ ತರಗತಿ ನಡೆಸಿದರು. ಶರೀಫ್ ಪಿ.ಎಚ್. ವರದಿ ಹಾಗೂ ಸಂಶುದ್ದೀನ್ ಹನೀಫಿ ಲೆಕ್ಕ ಪತ್ರ […]

News

ವರ್ಷಕ್ಕೆರಡು ಸಲ 10ನೇ ತರಗತಿ ಪರೀಕ್ಷೆಯನ್ನು ನಡೆಸಲು ಸಿಬಿಎಸ್‌ಇ ಯೋಜನೆ

ಹೊಸದಿಲ್ಲಿ: 2026ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ವರ್ಷಕ್ಕೆರಡು ಸಲ ಪರೀಕ್ಷೆ ಬರೆಯಲು ಅವಕಾಶ ನೀಡುವ ಯೋಜನೆಯೊಂದನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ರೂಪಿಸುತ್ತಿದ್ದು, ಫೆಬ್ರವರಿ ಮತ್ತು ಮೇ ತಿಂಗಳುಗಳಲ್ಲಿ ಈ ಪರೀಕ್ಷೆಗಳು ನಡೆಯುವ ನಿರೀಕ್ಷೆಯಿದೆ. ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೂ, ತನ್ನ ಸಚಿವಾಲಯವು ಶೈಕ್ಷಣಿಕ ವರ್ಷದಲ್ಲಿ ಎರಡು ಸಲ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಶಾಲಾ ಶಿಕ್ಷಣ ಕಾರ್ಯದರ್ಶಿ, ಸಿಬಿಎಸ್‌ಇ ಅಧ್ಯಕ್ಷ ಮತ್ತು ಸಚಿವಾಲಯದ ಇತರ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸಿದೆ […]

News

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಪ್ರಯುಕ್ತ ಕೊಂಕಣಿ ವೊವಿಯೊ – ವೇರ್ಸ್ ಕೊಂಕಣಿ ಕ್ರಿಶ್ಚಿಯನ್ ಭಾಶಿಗರ ಮದುವೆ ಹಾಡುಗಳ ಕಾರ್ಯಾಗಾರ

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ ಕೊಂಕಣಿ ವಿಭಾಗ ಮತ್ತು ಕೊಂಕಣಿ ಸಂಘ ಹಾಗೂ CASK ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಪ್ರಯುಕ್ತ ಕೊಂಕಣಿ ವೊವಿಯೊ – ವೇರ್ಸ್ ಕೊಂಕಣಿ ಕ್ರಿಶ್ಚಿಯನ್ ಭಾಶಿಗರ ಮದುವೆ ಹಾಡುಗಳ ಕಾರ್ಯಾಗಾರವನ್ನು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಡಾ. ಆಲ್ವಿನ್ ಡೆಸಾ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವರು ಈ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಮಾತೃ ಭಾಷೆ ಕೊಂಕಣೆಯಲ್ಲೇ ಮಾತನಾಡಿ ಉದ್ಘಾಟಿಸಿದರು.  ಹಾಗೆಯೇ CASK […]

News

ಅಡ್ಡೂರು ಕಾಂಜಿಲಕೋಡಿ ನವೀಕೃತ ಬದ್ರುಲ್ ಹುದಾ ಜುಮಾ ಮಸೀದಿ ಉದ್ಘಾಟನೆ

ಅಡ್ಡೂರು ಇಲ್ಲಿನ ಕಾಂಜಿಲಕೋಡಿಯ ನವೀಕೃತ ಬದ್ರುಲ್ ಹುದಾ ಜುಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮ ಇಂದು ಫೆಬ್ರವರಿ 21ರಂದು ಶುಕ್ರವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನವೀಕೃತ ಮಸೀದಿ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಅವರು ವಕ್ಫ್ ನಿರ್ವಹಣೆ ಮಾಡಿ ಖುತುಬಾ ನಿರ್ವಹಿಸಿದರು. ಇಬ್ರಾಹೀಂ ಬಾತಿಷಾ ತಂಙಳ್ ಜುಮಾ ನಮಾಝಿಗೆ ನೇತೃತ್ವ ನೀಡಿದರು. ಖತೀಬ್ ಯಾಕೂಬ್ ಫೈಝಿ ಸ್ವಾಗತಿಸಿದರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನಸಭಾ ಅಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್, ಉಲೆಮಾಗಳ […]

News

ದೀನ್ ವಿಕೃತಗೊಳಿಸುವವರ ಮುಖವಾಡ ಕಳಚುವುದರಲ್ಲಿ ಸಂಘಟನಾ ಚಟುವಟಿಕೆ ಪ್ರಮುಖ ಪಾತ್ರ ವಹಿಸುತ್ತಿದೆ – ಬಹು| ಬದ್ರುಲ್ ಮುನೀರ್ ಹನೀಫಿ ಅರಿಕ್ಕಿಲ

ಎಸ್‌ವೈ‌ಎಸ್ ಮಾಣಿ ಸರ್ಕಲ್ ಸಮಿತಿಯ ಮಹಾಸಭೆ ಕಾರ್ಯಕ್ರಮ ರಫೀಕ್ ಮದನಿ ಪಾಟ್ರಕೋಡಿ ಫಾರೂಕ್ ಹನೀಫಿ ಪರ್ಲೊಟ್ಟು ಸಂಶುದ್ದೀನ್ ಮಿತ್ತೂರು ಮಾಣಿ : ಅಹ್ಲ್ ಸುನ್ನತ್ ವಲ್ ಜಮಾ‌ಅತ್ ಎಂಬ ಅಲ್ಲಾಹನ ದೀನನ್ನು ವಿಕೃತ ವಾದಗಳ ಮೂಲಕ ನಾಶ ಪಡಿಸುತ್ತಿರುವ ನೂತನವಾದಿಗಳ ಎಲ್ಲಾ ಮುಖವಾಡ ಕಳಚುವಲ್ಲಿ ಸುನ್ನೀ ಸಂಘಟನಾ ಕಾರ್ಯ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದೆ ಬಡ ಸುನ್ನೀಗಳು ಈಮಾನ್ ತಪ್ಪದಂತೆ ಭದ್ರವಾಗಿ ನೆಲೆ ನಿಲ್ಲುವಲ್ಲಿಯೂ ಸಹಕಾರಿಯಾಗುತ್ತಿದೆ ಎಂದು ಝೋನ್ ನಾಯಕರಾದ ಬಹು|ಬದ್ರುಲ್ ಮುನೀರ್ ಹನೀಫಿ ಅರಿಕ್ಕಿಲ, ಮಾಡಾವು […]

News

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆಯವರಿಗೆ ಯುನಿವರ್ಸಲ್‌ ಮೀಡಿಯಾ ಅವಾರ್ಡ್

ಮಂಗಳೂರು : ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಯುನಿವರ್ಸಲ್ ಮೀಡಿಯಾ ಅವಾರ್ಡ್ 2025 ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಭಾಜನರಾಗಿದ್ದಾರೆ. ಮಾಧ್ಯಮ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ದುಬೈನಲ್ಲಿ ಫೆಬ್ರವರಿ 24ರಂದು ನಡೆಯುವ 47ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಹಾಗೂ ಸಾಂಸ್ಕೃತಿಕ ವಿನಿಮಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ […]

News

ದೇರಳಕಟ್ಟೆಯ ನರ್ಸಿಂಗ್ ಕಾಲೇಜ್ ಒಂದರಲ್ಲಿ ಚಡ್ಡಿ ಬಿಚ್ಚುವಂತೆ ವಿದ್ಯಾರ್ಥಿಗೆ ರ್‍ಯಾಗಿಂಗ್

ಬೆಚ್ಚಿ ಬೀಳಿಸುವ ತೀವ್ರ ಅಮಾನುಷ ಘಟನೆ ಮಂಗಳೂರು ನಗರದ ಹೊರವಲಯದ ದೇರಳಕಟ್ಟೆಯಲ್ಲಿರುವ ಪ್ರತಿಷ್ಠಿತ ಕಾಲೆಜೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿಯೋರ್ವನಿಗೆ ಹಿರಿಯ ವಿದ್ಯಾರ್ಥಿಗಳು ಸೇರಿ ರ್‍ಯಾಗಿಂಗ್ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ನರ್ಸಿಂಗ್ ವಿದ್ಯಾರ್ಥಿಯನ್ನು ಡ್ಯಾನ್ಸ್ ಮಾಡಲು ಹೇಳಿದ ಹಿರಿಯ ವಿದ್ಯಾರ್ಥಿಗಳು ಬಳಿಕ ಚಡ್ಡಿ ಬಿಚ್ಚುವಂತೆ ಹೇಳಿ ತೀರಾ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ರ್‍ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಹಾಗೂ ಕಾಲೇಜಿನ ಕೆಲ ವಿದ್ಯಾರ್ಥಿಗಳು ಸೇರಿ ದೂರು ನೀಡಿದ್ದಾರೆ. ಇದಾದ […]

News

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಬೆಳ್ತಂಗಡಿ : ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಂದಿನ 3 ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕಗೊಳಿಸಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿಗಳು, ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಬೆಂಗಳೂರು ಇವರು ಆದೇಶಿಸಿದ್ದಾರೆ. ಸಾಮಾನ್ಯ ಸ್ಥಾನದಿಂದ ವಿಶ್ವನಾಥ ಕೆ. ಕೊಲ್ಲಾಜೆ, ಸುಬ್ರಹ್ಮಣ್ಯ ಶಬರಾಯ ಕೆ., ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು, ಗಣೇಶ್ ಕಾಶಿ, ಉದಯ ಶಂಕರ ಶೆಟ್ಟಿ ಆರಿಯಡ್ಕ, […]

News

ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮ

ಮಾಣಿ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಜಂಟಿ ಆಶ್ರಯ ಮಾಣಿ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಜಂಟಿ ಆಶ್ರಯದಲ್ಲಿ ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಹಾಗೂ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ ಕಾರ್ಮಿಕರ ಹಿತರಕ್ಷಣೆಯ ದೃಷ್ಟಿಯಿಂದ ನಡೆಯುತ್ತಿರುವ ಕಾರ್ಯಕ್ರಮ. ಕಾರ್ಮಿಕರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಈ ರೀತಿಯ ಶಿಬಿರದ […]

News

ಸಾರಿಗೆ ಇಲಾಖೆ ಮಕ್ಕಳ ಸ್ನೇಹಿ ಸಾರಿಗೆ ಇಲಾಖೆಯಾಗಬೇಕು – ಡಾ. ತಿಪ್ಪೇಸ್ವಾಮಿ ಕೆ.ಟಿ.

ಮಂಗಳೂರು ಫೆಬ್ರವರಿ 20 :- ಶಾಲಾ ಮಕ್ಕಳ ಶಿಕ್ಷಣದಲ್ಲಿ ಸಾರಿಗೆ ಇಲಾಖೆಯು ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದ್ದು, ಸಾರಿಗೆ ಇಲಾಖೆಯನ್ನು ಮಕ್ಕಳ ಸ್ನೇಹಿಯಾಗಿ ರೂಪುಗೊಳಿಸಿ ಸಾರಿಗೆ ಇಲಾಖೆಯಲ್ಲಿನ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಹೇಳಿದರು. ಅವರು ಫೆಬ್ರವರಿ 19ರಂದು ಬುಧವಾರ ಮಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016 […]

You cannot copy content of this page