November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಇದರ ಆಡಳಿತ ಮಂಡಳಿಗೆ ಆಯ್ಕೆ

ಬಂಟ್ವಾಳ ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಇದರ ಆಡಳಿತ ಮಂಡಳಿಗೆ ಮುಂದಿನ ಐದು (2025-30) ವರ್ಷಗಳ ಅವಧಿಗೆ ಜನವರಿ 18ರಂದು ಶನಿವಾರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 14 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿ.ಸಿ. ರೋಡ್ ನಲ್ಲಿರುವ ಲಯನ್ಸ್ ಕ್ಲಬ್ ನಲ್ಲಿ ಮತದಾನ ನಡೆದಿದ್ದು, ಮಂಗಳೂರು ಸಹಕಾರಿ ಸಂಘಗಳ ಉಪ ನಿಬಂಧಕರ ಕಚೇರಿಯ ಬಂಟ್ವಾಳ ಸಹಕಾರಿ ಅಭಿವೃದ್ದಿ ಅಧಿಕಾರಿ ಡಾ. ಜ್ಯೋತಿ ಡಿ. ಚುನಾವಣಾಧಿಕಾರಿಯಾಗಿದ್ದು, ಚುನಾವಣಾ ಪ್ರಕ್ರಿಯೆ ನಡೆಸಿದರು. ಬಂಟ್ವಾಳ ಕ್ಯಾಥೋಲಿಕ್ […]

News

ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನ

ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಫೆಬ್ರವರಿ 4ರಂದು ಮಂಗಳವಾರ ಮಿಲಾಗ್ರಿಸ್ ಕಾಲೇಜು ಆಫ್  ನರ್ಸಿಂಗ್ ಇದರ  ಪ್ರಥಮ ವರ್ಷದ‌‌ 35 ವಿದ್ಯಾರ್ಥಿಗಳು ಬೀದಿ ನಾಟಕವನ್ನು ಪ್ರದರ್ಶಿಸಿದರು. ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್‌ ದಿನವನ್ನು  ಮನುಷ್ಯನನ್ನು ಶತ್ರುವಾಗಿ ಕಾಡುವ ಕ್ಯಾನ್ಸರ್‌ ರೋಗದ ಬಗ್ಗೆ ಜನರಲ್ಲಿ ಸರಿಯಾಗಿ ಜಾಗೃತಿ ಮೂಡಿಸಲು  ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಕಾರಣಗಳು, ಅದರ‌ ಎಚ್ಚರಿಕೆಯ ಚಿಹ್ನೆಗಳು ಹಾಗೂ ಅದನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.  ಪ್ಲಾಸ್ಟಿಕ್ […]

News

ಉದ್ಯಮಿ ಉದಯ ಶೆಟ್ಟಿ ಮುನಿಯಾಲು ಗುರುವಾಯನಕೆರೆ ಅರಮಲೆ ಬೆಟ್ಟಕ್ಕೆ ಭೇಟಿ

ಬೆಳ್ತಂಗಡಿ : ಬಂಟರ ಸಂಘದ ಅಧ್ಯಕ್ಷರು ಹಾಗೂ ಖ್ಯಾತ ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಇವರು ಗುರುವಾಯನಕೆರೆಯ ಕಾರಣಿಕ ಕ್ಷೇತ್ರ ಅರಮಲೆ ಬೆಟ್ಟ ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿ ನೀಡಿ ಕೊಡಮಣಿತ್ತಾಯ ದೈವದ ಅನುಗ್ರಹ ಪಡೆದರು. ಅವರು ಅರಮಲೆ ಬೆಟ್ಟದ ಶ್ರೀ ಕೊಡಮಣಿತ್ತಾಯ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಜಾತ್ರಾ ಮಹೋತ್ಸವದ ವಿಸ್ತ್ರತ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಸಮಿತಿಯವರ ಯೋಜನೆ ಮತ್ತು ಅಭಿವೃದ್ಧಿಯ ಕಾರ್ಯಗಳನ್ನು ಮೆಚ್ಚಿ ಬ್ರಹ್ಮಕುಂಭಾಭಿಷೇಕಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ […]

News

HISTORIC DAY FOR CRI MANGALORE UNIT

February 2nd marked a momentous occasion for the Conference of Religious India (CRI) Mangalore unit, as they celebrated the Day of the Consecrated in a grand style. A total of 675 men and women religious from various Congregations participated in the joyous celebration, which commenced with a solemn Eucharistic Celebration. Rev. Fr Daniel, Episcopal Vicar […]

News

ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಗೆ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವತಿಯಿಂದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಇವರ ನೇತೃತವದಲ್ಲಿ ಬೃಹತ್ ನೋಂದಾವಣೆ ಕಾರ್ಯಕ್ರಮ

ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾರವರ ಮಹಾನಗರ ಪಾಲಿಕೆ ಕಚೇರಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮೋಟಾರು ಸಾರಿಗೆ ಸಾಮಾಜಿಕ ಭದ್ರತೆ ಕ್ಷೇಮಾಭಿವೃದ್ದಿ ಮಂಡಳಿಯಿಂದ ರಿಕ್ಷಾ ಚಾಲಕರಿಗೆ ವೀಲ್ ಬ್ಯಾಲೆನ್ಸಿಂಗ್ ಆಲೈನ್ಮೆಂಟ್ ಘಟಕಗಳಲ್ಲಿ, ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ ಕೆಲಸ ಮಾಡುವವರು, ಮೋಟಾರ್ ಗ್ಯಾರೆಜ್ ಗಳಲ್ಲಿ, ಟಯರ್ ಜೋಡಿಸುವವರು, ಬುಕ್ಕಿಂಗ್ ಗುಮಾಸ್ತರು, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಚಾಲಕ ನಿರ್ವಾಹಕ ಹೀಗೆ ಸುಮಾರು 500 ಮಂದಿಗೆ ನೋಂದಾವಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ […]

News

ಕುಲಶೇಖರದ ಕೊರ್ಡೆಲ್ ಪವಿತ್ರ ಶಿಲುಬೆ ಚರ್ಚ್‌ನಲ್ಲಿ ಫೆಬ್ರವರಿ 8 ಮತ್ತು 9ರಂದು ‘ಕೊರ್ಡೆಲ್‌ ಖೇಳ್-ಮೇಳ್’ ಕಾರ್ಯಕ್ರಮ

ಮಂಗಳೂರಿನ ಕುಲಶೇಖರದ ಕೊರ್ಡೆಲ್ ಪವಿತ್ರ ಶಿಲುಬೆ ಚರ್ಚ್‌ನಲ್ಲಿ ಫೆಬ್ರವರಿ 8 ಮತ್ತು 9ರಂದು ‘ಕೊರ್ಡೆಲ್‌ ಖೇಳ್-ಮೇಳ್’ ಆಯೋಜಿಸಲಾಗಿದೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಇಂದು ಫೆಬ್ರವರಿ 3ರಂದು ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವಿಧ ರೀತಿಯ ಆಹಾರ ಮಳಿಗೆಗಳು ಹಾಗೂ ಮನೋರಂಜನಾ ಆಟಗಳ ಸ್ಟಾಲ್‌ಗಳು ಒಳಗೊಂಡಿವೆ ಎಂದರು. ಫೆಬ್ರವರಿ 8ರಂದು ಶನಿವಾರ ಸಂಜೆ 8 ಗಂಟೆಗೆ ಉದ್ಘಾಟನಾ […]

News

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕನ್ಯಾಡಿ ಶ್ರೀಗಳವರಿಗೆ ಮಹಾಮಂಡೇಶ್ವರ ಮಹೋನ್ನತ ಪದವಿ

ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಉತ್ತರ ಭಾರತದ ನಾಗಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜನವರಿ 31ರಂದು ಜುನಾ ಅಖಾಡದ ಮೂಲಕ ನೆರವೇರಿತು. ಇದು ಕರ್ನಾಟಕಕ್ಕೆ ಒಲಿದ ಮೊದಲ ಮಹಾಮಂಡಲೇಶ್ವರ ಪದವಿಯಾಗಿದೆ. ಈ ಪದವಿಯನ್ನು ಧಾರ್ಮಿಕ, ಆದ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪ್ರಧಾನ ಮಾಡುವುದು […]

News

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಪಾದಾಭಿಷೇಕ

ದಯೆಯೇ ಧರ್ಮದ ಮೂಲವಾಗಿದ್ದು ದಯೆ ಇದ್ದಲ್ಲಿ ಧರ್ಮ ಇರುತ್ತದೆ ಎಂದು ಕ್ಷುಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು ಹೇಳಿದರು. ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ನಡೆದ ಪಾದಾಭಿಷೇಕ ಸಂದರ್ಭದಲ್ಲಿ ಅವರು ಮಂಗಲ ಪ್ರವಚನ ನೀಡಿದರು. ಉತ್ತಮ ಸಂಸ್ಕಾರ ಮತ್ತು ಧರ್ಮದ ಮರ್ಮವನ್ನರಿತು ಅನುಷ್ಠಾನದಿಂದ ಆತ್ಮಕಲ್ಯಾಣವಾಗುತ್ತದೆ. ನಾವು ಧರ್ಮವನ್ನು ಕಾಪಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು. ಕ್ಷುಲ್ಲಕ ದರ್ಶನಕೀರ್ತಿ ಮುನಿಮಹಾರಾಜರು ಮಾತನಾಡಿ ಚತುರ್ವಿಧ ದಾನಗಳಲ್ಲಿ ಆಹಾರದಾನ ಅತ್ಯಂತ ಶ್ರೇಷ್ಠವಾಗಿದೆ. ಸತ್ಕಾರ್ಯಗಳಿಂದ ಪುಣ್ಯ ಸಂಚಯವಾಗುತ್ತದೆ ಎಂದರು. ಕಾರ್ಕಳ ಜೈನಮಠದ ಪೂಜ್ಯ […]

News

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಪನ್ನ

ಬೆಳ್ತಂಗಡಿ : ಗೇರುಕಟ್ಟೆ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವವು ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಯರವರ ಮಾರ್ಗದರ್ಶನದಲ್ಲಿ, ವೇ.ಮೂ. ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜನವರಿ 24ರಿಂದ 30ರ ತನಕ ಧಾರ್ಮಿಕ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರೆಯು ಯಶಸ್ವಿಯಾಗಿ ನಡೆಯಿತು. ಜನವರಿ 24ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಮಧ್ಯಾಹ್ನ ಅನ್ನಂತರ್ಪಣೆ, ರಾತ್ರಿ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಮಹಾಪೂಜೆ – ನಿತ್ಯ […]

News

ಮಂಗಳೂರಿನ ಕುಲಶೇಖರದ ಪ್ರತಿಭಾನ್ವಿತ ಯುವ ಗಾಯಕಿ ರೀಷಲ್ ಮೆಲ್ಬಾ ಕ್ರಾಸ್ತಾ ಇವರಿಗೆ ‘ಸೂಪರ್ ಸಿಂಗರ್ 5’ ರಲ್ಲಿ ಪ್ರಥಮ ಸ್ಥಾನ

ರೂಪಾಯಿ ಒಂದು ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಬೆಂಗಳೂರಿನ ಗೋಪಾಲನ್ ಮಾಲ್ ಇವರು ಜನವರಿ 26ರಂದು ಬೆಂಗಳೂರಿನಲ್ಲಿ ಆಯೋಜಿಸಿದ ‘ಸೂಪರ್ ಸಿಂಗರ್ 5’ ಇದರಲ್ಲಿ ಮಂಗಳೂರಿನ ಕುಲಶೇಖರದ ಪ್ರತಿಭಾನ್ವಿತ ಯುವ ಗಾಯಕಿ ರೀಷಲ್ ಮೆಲ್ಬಾ ಕ್ರಾಸ್ತಾ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರು ರೂಪಾಯಿ ಒಂದು ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಝೀ ಕನ್ನಡ ಹಾಗೂ ಸಂಗೀತ ದಿಗ್ಗಜರ  ಸಮ್ಮುಖದಲ್ಲಿ ಈ ಸನ್ಮಾನ ನೀಡಲಾಗಿದೆ. ಮಂಗಳೂರಿನ […]

You cannot copy content of this page