ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಸಂಭ್ರಮದಿಂದ ಚರ್ಚ್ ಸಮುದಾಯ ದಿನ ಆಚರಣೆ
ಒಬ್ಬರು ಎಲ್ಲರಿಗೋಸ್ಕರ, ಎಲ್ಲರೂ ಒಬ್ಬರಿಗೋಸ್ಕರ ಜೀವಿಸುವುದೇ ಕ್ರಿಸ್ತ ಸಮುದಾಯ – ಫಾದರ್ ಆ್ಯಂಡ್ರು ಡಿಸೋಜ ಬೋಂದೆಲ್ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಚರ್ಚ್ ಸಮುದಾಯ ದಿನವನ್ನು ಫೆಬ್ರವರಿ 2ರಂದು ಭಾನುವಾರ ಸಂಭ್ರಮದಿಂದ ಹಾಗೂ ಸಡಗರದಿಂದ ಆಚರಿಸಲಾಯಿತು. ಚರ್ಚ್ ಕುಟುಂಬದ ಭಕ್ತಾಧಿಗಳಿಗೆ ವರ್ಷವಿಡೀ ದೇವರು ನೀಡಿದ ಆಶೀರ್ವಾದಗಳಿಗೆ ಕೃತಜ್ಞತಾ ಪೂರ್ವಕವಾಗಿ ದಿವ್ಯ ಬಲಿಪೂಜೆಯನ್ನು ನಡೆಸಲಾಯಿತು. ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಬೋಂದೆಲ್ ಸಂತ ಲೋರೆನ್ಸರ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಆ್ಯಂಡ್ರು ಲಿಯೋ […]













