November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶ್ರೀ ಮಹಾಭಾರತ ಸರಣಿಯ 62ನೇ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪಿನಂಗಡಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 62ನೇ ತಾಳಮದ್ದಳೆ ಕನಕಾಂಗಿ ಕಲ್ಯಾಣ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಡಾ. ಹನೀಶ್ ಕಿರಣ್ ಪಿ.ಟಿ. ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು. ಭಾಗವತರಾಗಿ ಪದ್ಮನಾಭ ಕುಲಾಲ್, ಕಿಶೋರ್ ಶೆಟ್ಟಿ ಮೂಡಾಯಿರು, ಹರೀಶ್ ಆಚಾರ್ಯ ಬಾರ್ಯ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ ಅರ್ಥದಾರಿಗಳಾಗಿ ಪಾತಾಳ ಅಂಬಾ ಪ್ರಸಾದ್ (ಸುಭದ್ರೆ1) ಹರೀಶ ಆಚಾರ್ಯ ಬಾರ್ಯ (ಅಭಿಮನ್ಯು) ಪ್ರದೀಪ […]

News

ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಬಸ್ ಪಾಸ್ – ಆನ್‌ಲೈನ್ ಅರ್ಜಿ ಆಹ್ವಾನ

ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿಗಳು 2024-25ನೇ ಸಾಲಿನ ಆಯವ್ಯಯದಲ್ಲಿ  ಈ ಯೋಜನೆ ಘೋಷಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಸ್ಟೇಟ್‌ಮೆಂಟ್ […]

News

ಫೈನಾನ್ಸ್ ಕಂಪೆನಿಯಿಂದ ಕಿರುಕುಳ ಆರೋಪ – ನದಿಗೆ ಹಾರಿ ಪ್ರಾಣಬಿಟ್ಟ ಶಿಕ್ಷಕಿ

ಹೊನ್ನಾಳಿ: ಫೈನಾನ್ಸ್ ಕಂಪೆನಿಯ ಕಿರುಕುಳ ತಾಳಲಾರದೇ ಶಿಕ್ಷಕಿಯೋರ್ವರು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿಕ್ಷಕಿಯ ಮೃತದೇಹ ಇಂದು ಜನವರಿ 28ರಂದು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಹೊನ್ನಾಳಿಯ ದುರ್ಗಿಗುಡಿ ಪ್ರದೇಶದಲ್ಲಿ ವಾಸವಾಗಿರುವ ಸರ್ಕಾರಿ ಶಾಲಾ ಶಿಕ್ಷಕಿ 46 ವರ್ಷ ಪ್ರಾಯದ ಪುಷ್ಪಲತಾರವರು ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಡೈವಿಂಗ್ ತಜ್ಞರು ಜನವರಿ 27ರಂದು ಸೋಮವಾರ ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಫೈನಾನ್ಸ್ ಕಂಪನಿಯ ಕಿರುಕುಳದಿಂದಾಗಿ ಪುಷ್ಪಲತಾ ತುಂಗಭದ್ರಾ ನದಿಗೆ ಹಾರಿ ತನ್ನ ಜೀವನವನ್ನು ಕೊನೆಗೊಳಿಸಿದ್ದಾಳೆ […]

News

ಆರೋಪಿಗಳಿಗೆ ನೋಟಿಸ್ ನೀಡಲು ಪೊಲೀಸರು ವಾಟ್ಸ್ಆ್ಯಪ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ – ಸುಪ್ರೀಂ ಕೋರ್ಟ್

ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಲು ವಾಟ್ಸ್ಆ್ಯಪ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ. ಈ ರೀತಿ ನೀಡಿದ ನೋಟಿಸ್ ಸೇವೆಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ ಈ ಆದೇಶ ಹೊರಡಿಸಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1973ರ ಸಿಆರ್‌ಪಿಸಿ ಸೆಕ್ಷನ್ 41-ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ […]

News

ಪತ್ನಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ ಪೀಟರ್

ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಪತ್ನಿಯ ಕಾಟಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಪೀಟರ್ ಎಂಬವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಪೀಟರ್ ಡೆತ್ ನೋಟ್ ಬರೆದಿದ್ದು, ಡ್ಯಾಡಿ ಆಯಮ್ ಸಾರಿ, ಪಿಂಕಿ ಇಸ್ ಕಿಲ್ಲಿಂಗ್ ಮೀ ಸೀ ವಾಂಟ್ ಮೈ ಡೆತ್ ಎಂದು ಬರೆದುಕೊಂಡಿದ್ದಾರೆ. ತನ್ನ ಶವಪೆಟ್ಟಿಗೆ ಮೇಲೆ ಪತ್ನಿ ಟಾರ್ಚರ್ ನಿಂದ ಸಾವು ಎಂದು ಬರೆಸುವಂತೆ ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಅವರ ಆಸೆ ಪ್ರಕಾರವೇ ಕುಟುಂಬಸ್ಥರು ಶವಪೆಟ್ಟಿಗೆಯಲ್ಲಿ ಬರೆಸಿದ್ದಾರೆ […]

News

3 ಸಾವಿರ ರೂಪಾಯಿ ಲಂಚ ಸ್ವೀಕಾರ – ಸಂಚಾರ ಠಾಣಾ ಇನ್ಸ್‌ಪೆಕ್ಟರ್ ಷರೀಫ್ ಹಾಗೂ ಸಿಬ್ಬಂದಿ ಪ್ರವೀಣ್ ಲೋಕಾಯುಕ್ತ ಬಲೆಗೆ

ಮಂಗಳೂರು: ಠಾಣೆಯಿಂದ ಸ್ಕೂಟ‌ರ್ ಬಿಡುಗಡೆಗೊಳಿಸಲು 3 ಸಾವಿರ ರೂಪಾಯಿ ಲಂಚ ಪಡೆದ ಹಿನ್ನಲೆಯಲ್ಲಿ ನಗರದ ಉತ್ತರ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಮಹಮ್ಮದ್ ಷರೀಫ್ ಹಾಗೂ ಸಿಬ್ಬಂದಿ ಪ್ರವೀಣ್‌ ನಾಯ್ಕನನ್ನು ಲೋಕಾಯುಕ್ತ ಪೊಲೀಸರು ಜನವರಿ 27ರಂದು ಸೋಮವಾರ ಬಂಧಿಸಿದ್ದಾರೆ. ಪೊಲೀಸರ ವಶದಲ್ಲಿದ್ದ ಸ್ಕೂಟರ್‌ ಬಿಡುಗಡೆಗೊಳಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಸಲುವಾಗಿ ದೂರುದಾರರು ಠಾಣೆಯ ಇನ್‌ಸ್ಪೆಕ್ಟ‌ರ್ ಮಹಮ್ಮದ್ ಷರೀಫ್ ಅವರನ್ನು ಭೇಟಿ ಮಾಡಿದ್ದರು. ಸ್ಕೂಟ‌ರ್ ಬಿಡುಗಡೆಗೊಳಿಸಲು 5 ಸಾವಿರ ರೂಪಾಯಿ ಲಂಚ ನೀಡುವಂತೆ ಷರೀಫ್‌ ಬೇಡಿಕೆ ಇಟ್ಟಿದ್ದರು. […]

News

“ಬ್ರಾಹ್ಮಣ್ಯಶಾಹಿತನದ ವಿರುದ್ಧ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ” – ಶಿವಸುಂದರ್

ಮಂಗಳೂರು: “ಕುಂಭಮೇಳದ‌ ಸಂದರ್ಭ ಮನುವಾದಿಗಳು ಪರ್ಯಾಯ ಸಂವಿಧಾನ ರಚಿಸುವ ಘೋಷಣೆ ಮಾಡಿದ್ದಾರೆ. ರಾಮರಾಜ್ಯ, ಚಾಣಕ್ಯ, ಮನುಸ್ಮೃತಿ‌ ಆಧಾರದಲ್ಲಿ ಸಂವಿಧಾನ ರಚನೆ ಮಾಡುವ ಘೋಷಣೆ ಮಾಡಿದ್ದಾರೆ. ಈ ದೇಶದಲ್ಲಿ ಮೂರುವರೆ ಸಾವಿರ ವರ್ಷಗಳಿಂದ ಬ್ರಾಹ್ಮಣ ಶಾಹಿ ಸಿದ್ಧಾಂತವಿದ್ದು ನಾವದನ್ನು ಸೋಲಿಸಬೇಕು” ಎಂದು ಅಂಕಣಕಾರ, ಬರಹಗಾರ ಶಿವಸುಂದರ್ ಕರೆ ನೀಡಿದ್ದಾರೆ. ಅವರು ಮಂಗಳೂರಿನ ಪುರಭವನದಲ್ಲಿ ಇಂದು ಜನವರಿ 27ರಂದು ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಬಣ, ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು […]

News

ಸಾಹಿತ್ಯದಿಂದ ಸಂಸ್ಕಾರ ವೃದ್ಧಿ – ಎಡನೀರುಶ್ರೀ

ಕಾಸರಗೋಡು : ‘ಚುಟುಕು ಸಾಹಿತ್ಯ ಪ್ರಕಾರವು ಲಲಿತವಾಗಿ, ಪ್ರಾಸಬದ್ಧವಾಗಿ ಆಕರ್ಷಣೀಯ. ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಳೆಯ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಪ್ರಜ್ಞೆಯನ್ನು ಅರಳಿಸುವುದು ಅಗತ್ಯ ಹಾಗೂ ಅನಿವಾರ್ಯ. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಯೋಜನೆಗಳು ಯಶಸ್ವಿಯಾಗಲಿ. ಸಂಘಟನೆಯ ಕನ್ನಡ ಪರ ಸೇವೆಗೆ ಶ್ರೀಮಠದ ಸಹಕಾರವಿದೆ’ ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು. ಅವರು ಜನವರಿ 27ರಂದು ಸೋಮವಾರ ಎಡನೀರು ಮಠದಲ್ಲಿ ಕೇರಳ ರಾಜ್ಯ ಕನ್ನಡ […]

News

ಕೋಟೆಕಾರು ವ್ಯವಸಾಯ ಬ್ಯಾಂಕ್ ದರೋಡೆ ಪ್ರಕರಣ – ನಾಲ್ವರ ಬಂಧನ  

ಆರೋಪಿಗಳಿಂದ 18.314 ಕೆಜಿ ಚಿನ್ನ ವಶ ಮಂಗಳೂರು: ತಲಪಾಡಿಯ ಕೋಟೇಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ಎನ್) ನಲ್ಲಿ ಜನವರಿ 17ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳು ನಾಡಿನ ಕನ್ನನ್ ಮಣಿ (36), ಮುರುಗಂಡಿ ದೇವರ್ (36), ಯೋಸುವ ರಾಜೇಂದ್ರನ್ (35) ಮತ್ತು ಎಂ. ಶಣ್ಮುಗ ಸುಂದರಂ (65) ಎಂದು ಗುರುತಿಸಲಾಗಿದೆ. ಬಂಧಿತರಿಂದ 18.314 ಕೆಜಿ ಚಿನ್ನ, ಎರಡು ಪಿಸ್ತೂಲ್‌ಗಳು, ಮೂರು ಸಜೀವ ಗುಂಡುಗಳು, ಎರಡು ಕೊಡಲಿಗಳು, […]

News

ಶಾಲಾ ಆವರಣದಲ್ಲಿ ನಡೆಯುವ ಕಲಿಕಾ ಪೂರಕ ಚಟುವಟಿಕೆಗಳು ಶೈಕ್ಷಣಿಕವಾಗಿ ಬಹು ಮುಖ್ಯ ಪಾತ್ರವನ್ನು ಹೊಂದುತ್ತವೆ – ಕೆ. ಸಂಜೀವ ಪೂಜಾರಿ

ಬಂಟ್ವಾಳ : ಶಾಲಾ ಆವರಣದಲ್ಲಿ ನಡೆಯುವ ಕಲಿಕಾ ಪೂರಕ ಚಟುವಟಿಕೆಗಳು ಶೈಕ್ಷಣಿಕವಾಗಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಪರಿಸರದ ಕಾಳಜಿಯನ್ನು ವಹಿಸಿಕೊಂಡು ರೂಢಿಗೊಳಿಸಿದಾಗ ಮುಂದಿನ ದಿನಗಳಲ್ಲಿ ಪರಿಸರದ ಪ್ರಜ್ಞೆಯನ್ನು ಮೂಡಿಸುತ್ತದೆ. ಆದುದರಿಂದ ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳನ್ನು ಜಾಗೃತಗೊಳಿಸಬೇಕು ಎಂದು 2024ರ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಸಜೀಪ ಮೂಡ ಇದರ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಹೇಳಿದರು. ಅವರು ಬಂಟ್ವಾಳ […]

You cannot copy content of this page