November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಾಮಂಜೂರಿನಲ್ಲಿ ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ಕಾರ್ಯಾಗಾರ

ಮಂಗಳೂರು : ಧರ್ಮಜ್ಯೋತಿ ಸೇವಾ ಸಂಸ್ಥೆ, ವಾಮಂಜೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ (MSW) ಇದರ ಜಂಟಿ ಆಶ್ರಯದಲ್ಲಿ ಜನವರಿ 23ರಂದು ಗುರುವಾರ ಶ್ರಮಿಕ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ವಾಮಂಜೂರಿನಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾದ ಉಷಾರಾಣಿಯವರು ಚಟುವಟಿಕೆಗಳ ಮೂಲಕ ಪೌಷ್ಟಿಕತೆಯ ಮಹತ್ವದ ಬಗ್ಗೆ ವಿವರವಾಗಿ ಮಕ್ಕಳಿಗೆ ತಿಳಿಸಿದರು.  ಧರ್ಮಜ್ಯೋತಿ ಸೇವಾ ಸಂಸ್ಥೆಯ ರೆನಿಟಾ ಲೂವಿಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಶಾಲೆಯ ಸಹಶಿಕ್ಷಕಿಯರಾದ ಭಗಿನಿ […]

News

ಶ್ರೀಲಂಕಾ ಮೈಕ್ರೋ ಫೈನಾನ್ಸ್ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಯನ

ಬೆಳ್ತಂಗಡಿ : ಗ್ರಾಮೀಣ ಭಾರತವೇ ನೈಜ ಭಾರತದ ಪ್ರತಿಬಿಂಬ, ಆದ್ದರಿಂದಲೇ ಮಹಾತ್ಮಾ ಗಾಂಧೀಜಿ ಗ್ರಾಮ ರಾಜ್ಯದ ಪ್ರಗತಿ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಮಾನವ ಸಂಪನ್ಮೂಲ, ನೆಲ, ಜಲ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸದ್ಭಳಕೆಯೊಂದಿಗೆ ಹಳ್ಳಿಗಳ ಪ್ರಗತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು 1982ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಿಸಿದ್ದು, ಇದು ಯಶಸ್ವಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ ಧರ್ಮಸ್ಥಳಕ್ಕೆ ಆಗಮಿಸಿದ ಲಂಕಾ ಮೈಕ್ರೋ ಫೈನಾನ್ಸ್ […]

News

ಮಗಳ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಉದ್ಯಮಿ ಲl ಗಣೇಶ್ ಪೂಜಾರಿ

ಬಂಟ್ವಾಳ : ಹುಟ್ಟು ಹಬ್ಬದ ಆಚರಣೆಯಲ್ಲೂ ಪಾಶ್ಚ್ಯಾತ್ಯ ಸಂಸ್ಕೃತಿಯು ಆವರಿಸಿಕೊಂಡಿರುವ ಕಾಲಘಟ್ಟ ವಿದು. ಆಪ್ತೇಷ್ಟರನ್ನು ಕರೆದು ವೈಭವೋಪೇತವಾಗಿ ಹುಟ್ಟು ಹಬ್ಬವನ್ನು ಆಚರಿಸುವುದು ಎಲ್ಲಾ ಕಡೆಯೂ ಪ್ರಚಲಿತದಲ್ಲಿದೆ. ಆದರೆ “ಸೇವೆಯ ಕನಸುಗಳಿಗೆ ಭಾವಗಳು ನೂರಾರು” ಎಂಬ ಮಾತಿನಂತೆ ತನ್ನ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಸಿಕೊಳ್ಳಬೇಕೆಂಬ ಧ್ಯೇಯವನ್ನು ಹೊಂದಿರುವ ಬಂಟ್ವಾಳ ತಾಲೂಕಿನ ಶ್ರೀ ಸಾಯಿ ಇಂಜಿನಿಯರಿಂಗ್ ವರ್ಕ್ಸ್ ಕೊಡಾಜೆ ಇದರ ಮಾಲಕರಾದ ಲl ಗಣೇಶ್ ಪೂಜಾರಿ ಹಾಗೂ ಮನೆಯವರು ತಮ್ಮ ಮಗಳಾದ ಶಾರ್ವಿಯ ಇವಳ  5ನೇ ವರ್ಷದ […]

News

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ  

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೊಸಲಾಯಿ ಆಯ್ಕೆ ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ  ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೊಸಲಾಯಿ, ಸದಸ್ಯರಾಗಿ ಕೃಷ್ಣಪ್ಪ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ ಸುದಲಾಯಿ, ಶಿವಾನಂದ, ರಮೇಶ್ ನಾಯ್ಕ್, ಪುರಂದರ ಗೌಡ, ಬೇಬಿ ಕೇಶವ, ಸುಮಿತ್ರ ಹರೀಶ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ […]

News

ಕಣ್ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಾಣಬಿರುಸುಗಳ ಪ್ರದರ್ಶನಗಳೊಂದಿಗೆ ಕರ್ನಾಟಕ ಕ್ರೀಡಾಕೂಟ 2025ಕ್ಕೆ ವೈಭವಪೂರ್ಣ ಸಮಾರೋಪ

ಪ್ರತಿ 3 ತಿಂಗಳಿಗೊಮ್ಮೆ ಪ್ರಾದೇಶಿಕ ಕ್ರೀಡಾಕೂಟಗಳು ಮತ್ತು ಜಿಲ್ಲಾಮಟ್ಟದಲ್ಲಿ ಆರು ತಿಂಗಳಿಗೊಮ್ಮೆ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿ – ರಾಜ್ಯಪಾಲ ಗೆಹ್ಲೋಟ್   ಮುಂದಿನ ರಾಜ್ಯ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಆಯೋಜಿಸಿ – ಗೃಹ ಸಚಿವ ಡಾ. ಜಿ. ಪರಮೇಶ್ವರ್   ಪಿಯುಸಿ ಮಟ್ಟದಲ್ಲಿ ಕ್ರೀಡೆಯನ್ನು ಕಡ್ಡಾಯಗೊಳಿಸಿ – ಡಾ. ಕೆ. ಗೋವಿಂದರಾಜ್ ಉಡುಪಿ, ಜನವರಿ 23 : ಉಡುಪಿಯ ಅಜ್ಜರ್‌ಕಾಡ್ ಜಿಲ್ಲಾ ಕ್ರೀಡಾಗಣದಲ್ಲಿ ವೈಭವಪೂರ್ಣ ಸಮಾರೋಪ ಸಮಾರಂಭದೊoದಿಗೆ ಕರ್ನಾಟಕ ಕೀಡಾಕೂಟ 2025 ಮುಕ್ತಾಯವಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಘನತೆವೆತ್ತ […]

News

ಮಸಾಜ್ ಸೆಂಟರ್ ಮೇಲೆ ದಾಳಿ ಪ್ರಕರಣ – ರಾಮ ಸೇನಾ ಸಂಘಟನೆ ಮುಖ್ಯಸ್ಥ ಪ್ರಸಾದ್ ಅತ್ತಾವರ್ ಸಹಿತ 14 ಜನರ ಬಂಧನ

ಮಂಗಳೂರು ಬಿಜೈಯಲ್ಲಿರುವ ಕಲರ್ಸ್ ಯುನಿಸೆಕ್ಸ್ ಸೆಲೂನ್ ಗೆ ಇಂದು ಜನವರಿ 23ರಂದು ಸರಿಸುಮಾರು ಬೆಳಗ್ಗೆ 11:50ಕ್ಕೆ, ತಂಡವೊಂದು ಏಕಾಏಕಿ ನುಗ್ಗಿ ಧಾಂದಲೆ ನಡೆಸಿ ಸೆಲೂನ್ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲಿಸರು ಒಟ್ಟು 14 ಜನರನ್ನು ಬಂಧಿಸಿದ್ದಾರೆ. ಬರ್ಕೆ ಪೊಲೀಸ್‌ ವ್ಯಾಪ್ತಿಯಲ್ಲಿರುವ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಯುನಿಸೆಕ್ಸ್ ಸೆಲೂನ್ ಗೆ ವ್ಯಕ್ತಿಗಳು ಸೆಲೂನಿನಲ್ಲಿ ಅನೈತಿಕತೆ ನಡೆಯುತ್ತಿದೆ ಎಂದು ಆರೋಪಿಸಿ, ಏಕಾಏಕಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮತ್ತು ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ […]

News

ನಾರ್ಶ ಉದ್ಯಮಿ ಮನೆಯಲ್ಲಿ ನಕಲಿ ED ಅಧಿಕಾರಿಗಳ ದರೋಡೆ – ಅಂತರಾಜ್ಯ ದರೋಡೆಕೋರ ಅನಿಲ್ ಫೆರ್ನಾಂಡಿಸ್ ಬಂಧನ

ಬಂಟ್ವಾಳ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ನಾರ್ಶ ಅವರ ಮನೆಯಲ್ಲಿ ಜನವರಿ 3ರಂದು ಶುಕ್ರವಾರ ರಾತ್ರಿ ED ಅಧಿಕಾರಿಗಳ ಹೆಸರಿನಲ್ಲಿ ದಾಳಿ ನಡೆಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೇರಳ ಮೂಲದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪೆರಿನಾಡ್, ತ್ರಿಕ್ಕಡವೂರು, ಮಾತಿಲಿಲ್ ಅಂಚೆ ವ್ಯಾಪ್ತಿಯ ಚಿರಕರ್ ಜಂಕ್ಷನ್, […]

News

ಪತ್ನಿಯನ್ನು ಕೊಂದದ್ದಲ್ಲದೇ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ

ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಶವವನ್ನು ತುಂಡು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ವಿಚಿತ್ರ ಘಟೆನೆಯು ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟ್ ನಲ್ಲಿನ ನ್ಯೂ ವೆಂಕಟರಮಣ ಕಾಲೋನಿಯಲ್ಲಿ ನಡೆದಿದೆ. ಪತಿ ಗುರುಮೂರ್ತಿ ತಾಯಿ ಸುಬ್ಬಮ್ಮ ರವರೊಂದಿಗೆ ಸೇರಿ 2025 ಜನವರಿ 16ರಂದು ತನ್ನ ಪತ್ನಿ ವೆಂಕಟಮಾಧವಿ ಕಾಣೆಯಾಗಿದ್ದಾರೆ ಎಂದು ಮೀರ್ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ, ಕಳೆದ ಕೆಲ ದಿನಗಳಿಂದ ಗಂಡ ಹೆಂಡತಿಯ ನಡುವೆ ಜಗಳ […]

News

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪನೆಗೆ ಸಿದ್ಧತೆ

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಿಸುವ ನಿಟ್ಟಿನಲ್ಲಿ ಸಿದ್ಧತೆ ಆರಂಭವಾಗಿದೆ. ‘ಇಂದಿನ ಕನ್ನಡ ಮಕ್ಕಳೇ ಮುಂದಿನ ಕನ್ನಡ ರಕ್ಷಕರು’ ಎಂಬ ಚಿಂತನೆಯಲ್ಲಿ ಕಾರ್ಯಾಚರಿಸುವ ಈ ಸಂಸ್ಥೆಯಲ್ಲಿ ಕನ್ನಡಿಗ ಸದಸ್ಯರಿಗೆ ಉಚಿತ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. ಪರಸ್ಪರ ಸಹಕಾರ ತತ್ವದಡಿಯಲ್ಲಿ ಕನ್ನಡ ಪರವಾದ ಕೆಲಸಗಳನ್ನು ನಡೆಸಲಾಗುವುದು. ಕಾಸರಗೋಡಿನ ಕವಿಗಳಿಗೆ ಕರ್ನಾಟಕದಲ್ಲಿ ನಡೆಯುವ ಅನೇಕ ಕನ್ನಡ ಕಾರ್ಯಕ್ರಮಗಳಲ್ಲಿ ಅವಕಾಶ ಸೃಷ್ಟಿಸುವುದು, […]

You cannot copy content of this page