ವಿಟ್ಲದ ಆಟೋ ಚಾಲಕ ನಾಪತ್ತೆ – ಪ್ರಕರಣ ದಾಖಲು
ವಿಟ್ಲ : ಆಟೋ ಚಾಲಕನೋರ್ವ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ಬಾಯಿಲ ನಿವಾಸಿ ಪದ್ಮನಾಭ ನಾಯ್ಕ ಅವರ ಪುತ್ರ 28ವರ್ಷ ಪ್ರಾಯದ ಧನರಾಜ್ ನಾಪತ್ತೆಯಾದ ಆಟೋ ಚಾಲಕ. ಈತ ನವೆಂಬರ್ 28 ರಂದು ಎಂದಿನಂತೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲದಿಂದ ಬೆಳಿಗ್ಗೆ 8.30 ಕ್ಕೆ ತನ್ನ ಅಟೋ ರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆಂದು ಹೇಳಿ ಹೋದವನು ದಶಂಬರ್ 03ರ ವರೆಗೂ ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಸಂಬಂದಿಕರಲ್ಲಿ, ನೆರೆಕರೆಯವರಲ್ಲಿ […]













