November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ

ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ – ಡಾ. ಮೋಹನ್ ಆಳ್ವ ಮಂಗಳೂರು, ದಶಂಬರ್ 5 : ಸಮಾಜ ಕಟ್ಟುವಲ್ಲಿ ಪಾತ್ರ ಮುಖ್ಯ. ಮಾಧ್ಯಮ ಜೀವನದ ಅವಿಭಾಜ್ಯ ಅಂಗವಾಗಿದೆ, ಶಿಕ್ಷಣ, ಮಾಹಿತಿ ವಿತರಣೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದ್ದಾರೆ. ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದ ದಿ. ಮನೋಹರ ಪ್ರಸಾದ್ ವೇದಿಕೆ, ದಿ. ಭುವನೇಂದ್ರ ಪುದುವೆಟ್ಟು ಸಭಾಂಗಣದಲ್ಲಿ ದಕ್ಷಿಣ ಕನ್ನಡ […]

News

Mangalore Diocese Honours Kannada Rajyotsava District Award Achievers

MANGALORE, December 5: The Diocesan Pastoral Parishad (DPP) of the Mangalore Diocese felicitated the District Award achievers recognised on Kannada Rajyotsava Day, 1 November, during a special ceremony held at the Bishop’s House conference hall on Thursday 5th December 2024. This felicitation was held during the fifth meeting of the Diocesan Pastoral Parishad for the […]

News

ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನದ ಪ್ರತಿಷ್ಟಾ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಭುವನೇಶ್ ಪಚಿನಡ್ಕ ಆಯ್ಕೆ

ಬಂಟ್ವಾಳ : ಕುಪ್ಪೆಟ್ಟು ಪಂಜುರ್ಲಿ ದೈವದ ಮೂಲಸ್ಥಾನ ಕುಪ್ಪೆಟ್ಟುಬರ್ಕೆ ಕರ್ಪೆ ಸಿದ್ಧಕಟ್ಟೆ ಬಂಟ್ವಾಳ ತಾಲೂಕು ಇದರ ಜೀರ್ಣೋದ್ಧಾರದ ಅಂಗವಾಗಿ ಕುಪ್ಪೆಟ್ಟು ಬರ್ಕೆಯಲ್ಲಿ ಆಡಳಿತ ಸಮಿತಿ ನೇತೃತ್ವದಲ್ಲಿ ಪ್ರತಿಷ್ಟಾ ಮಹೋತ್ಸವ ಸಮಿತಿ ರಚನೆ ಸಭೆ ನಡೆಯಿತು. ಪ್ರತಿಷ್ಟ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಶುಭಲಕ್ಷ್ಮೀ ಸಮೂಹ ಸಂಸ್ಥೆಯ ಮಾಲಕರು, ಸಾಮಾಜಿಕ, ಧಾರ್ಮಿಕ ಮುಖಂಡರು ಭುವನೇಶ್ ಪಚಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ರತ್ನಾಕರ ಪೂಜಾರಿ ಮದಂಗೋಡಿ, ಕೋಶಾಧಿಕಾರಿಯಾಗಿ ಪ್ರವೀಣ್ ಕುಪ್ಪೆಟ್ಟು, ಗೌರವಾಧ್ಯಕ್ಷರುಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ […]

News

ಗ್ರಾಮ ಪಂಚಾಯತ್ ಸದಸ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ – ಶಾಸಕ ಮಂಜುನಾಥ ಭಂಡಾರಿ

ಸುಳ್ಯ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಶಂಬರ್ 4ರಂದು ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ಪಂಚಾಯತ್ ರಾಜ್ ಸಮಾವೇಶದಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪಾಲ್ಗೊಂಡರು. ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದ ಅವರು ಈ ಹಿಂದೆಯೂ ಪ್ರತೀ ವಿಧಾನ ಮಂಡಲ ಅದಿವೇಶನದಲ್ಲಿ ಪಂಚಾಯತ್ ಸದಸ್ಯರ ವಿವಿಧ ಬೇಡಿಕೆಗೆ ದ್ವನಿಯೆತ್ತಿ ಸ್ಪಂದಿಸಿದ್ದೇನೆ, ಮುಂದೆಯೂ ನಿಮ್ಮ ಪರವಾಗಿ ಕೆಲಸ […]

News

ದುಲ್ ಪುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ, ಮತ್ತು ದುಲ್ ಪುಖಾರ್ ಗಲ್ಫ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ ಸಾಧಕರಿಗೆ ಸನ್ಮಾನ, ಮತ್ತು ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ

ಬಂಟ್ವಾಳ : ದುಲ್ ಪುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ, ಮತ್ತು ದುಲ್ ಪುಖಾರ್ ಗಲ್ಫ್ ಕಮಿಟಿ ವತಿಯಿಂದ ಇಪ್ಪತ್ತೈದನೇ ವಾರ್ಷಿಕೋತ್ಸವದ ಪ್ರಯುಕ್ತ  ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಹಾಗೂ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ ಕಾರ್ಯಕ್ರಮ ಕನ್ಯಾನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶೈಖುನಾ ಕನ್ಯಾನ ಉಸ್ತಾದ್, ಕುಕ್ಕಾಜೆ ಉಸ್ತಾದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ವರ್ ಕರೊಪಾಡಿ, […]

News

ಓಂ ಶ್ರೀ ಗೆಳೆಯರ ಬಳಗ ನಾಯಿಲ ಅಶ್ರಯದಲ್ಲಿ “ನಮ್ಮ ಊರು ಸ್ವಚ್ಛ ಊರು” ಸ್ವಚ್ಛತಾ ಅಭಿಯಾನ

ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಓಂ ಶ್ರೀ ಗೆಳೆಯರ ಬಳಗ ನಾಯಿಲ ಓಂ ಶ್ರೀ ಮಹಿಳಾ ಮಂಡಳಿ, ಶ್ರೀದೇವಿ ಯುವಕ ಮಂಡಲ, ಎಂ.ವೈ.ಸಿ. ಮರ್ದೋಳಿ, ನವಜೀವನ ಗೇಮ್ಸ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನರಿಕೊಂಬು ಇದರ ಸಹಯೋಗದಲ್ಲಿ ಶ್ರೀದೇವಿ ಯುವಕ ಮಂಡಲ ಕಾಪಿಕಾಡ್ ನಿಂದ ಎಸ್.ವಿ.ಎಸ್. ಶಾಲೆ ಪಾಣೆಮಂಗಳೂರು ತನಕ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬಳಿಕ ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಆಟ್ಲೂರು ಮಾತನಾಡಿ, ಓಂ ಶ್ರೀ ಗೆಳೆಯರ […]

News

ಬಂಟ್ವಾಳದಲ್ಲಿ ಅಡಿಕೆ ಕೃಷಿ ರೋಗ ನಿಯಂತ್ರಣ ಮಾಹಿತಿ ಕಾರ್ಯಗಾರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ, ಹಾಗೂ ತೋಟಗಾರಿಕೆ ಇಲಾಖೆ ಬಂಟ್ವಾಳ ಇವುಗಳ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಪೂಪಾಡಿ ಕಟ್ಟೆಯ ತೀರ್ಥೊಟ್ಟು ಚಂದ್ರಶೇಖರ್ ಕೊಟ್ಟಾರಿಯವರ ನಿವಾಸದಲ್ಲಿ ಅಡಿಕೆ ಕೃಷಿಕರಿಗಾಗಿ “ಅಧಿಕ ಇಳುವರಿಗಾಗಿ ಅಡಿಕೆ ರೋಗ ನಿವಾರಣೆ”ಯ ಕುರಿತು ಮಾಹಿತಿ ಕಾರ್ಯಗಾರ ದಶಂಬರ್ 3ರಂದು ಮಂಗಳವಾರ ಜರುಗಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ […]

News

ದಶಂಬರ್ 7 ಮತ್ತು 8ರಂದು ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ರಜತ ಮಹೋತ್ಸವ ಹಾಗೂ ವಾರ್ಷಿಕೋತ್ಸವ

ಬಂಟ್ವಾಳ : ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ನ ರಜತ ಮಹೋತ್ಸವವು ದಶಂಬರ್ 7ರಂದು ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ದಶಂಬರ್ 8ರಂದು ನಡೆಯಲಿದೆ ಎಂದು ಶಾಲಾ ಸಂಚಾಲಕ ಹಾಜಿ ಜಿ. ಅಹಮದ್ ಮುಸ್ತಾಫ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಶಂಬರ್ 7ರಂದು ನಡೆಯುವ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ಇದರ ಚೆರ್ಮೆನ್ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು ವಹಿಸಲಿದ್ದು, ರಜತ ರತ್ನ ಸಂಚಿಕೆಯನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಡುಗಡೆ ಗೊಳಿಸುವರು. […]

News

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ‘ಪ್ರತಿಭಾ ಪುರಸ್ಕಾರ 2024-25’

ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯ ಇಲ್ಲಿ 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಶಂಬರ್ 6ರಂದು ಶುಕ್ರವಾರ ಸಾಯಂಕಾಲ ಗಂಟೆ 3ರಿಂದ ನಡೆಯಲಿರುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಎಸ್. ರಾವ್ ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಮಾಡಲಿರುವರು. ವಿಶೇಷ ಆಹ್ವಾನಿತರಾಗಿ ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ  ಸುರೇಶ್ ಕನ್ನೋಟ್ಟು, ಪಂಚಾಯತ್ ಸದಸ್ಯರುಗಳಾದ ಶೀನ […]

News

ಮಂಗಳೂರಿನ ಬಹುಭಾಷಾ ಪರಿಣಿತ ಗಾಯಕ ರೋನಿ ಕ್ರಾಸ್ತಾ ಇವರಿಗೆ ಕರ್ನಾಟಕ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರಿನ ಪ್ರತಿಷ್ಠಿತ ಕಲಾಭೂಮಿ ಸಂಸ್ಥೆಯಿಂದ ಕರ್ನಾಟಕ ರಾಜ್ಯದ ವಿವಿಧ ರಂಗ ವೇದಿಕೆಗಳಲ್ಲಿ ಸಾಧನೆ ಮಾಡಿದ 69 ಸಾಧಕರಿಗೆ ಕರ್ನಾಟಕ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತದಲ್ಲಿ ಸಾಧನೆ ಮಾಡಿದ ಮಂಗಳೂರಿನ ಕುಲಶೇಖರದ ಬಹುಭಾಷಾ ಪರಿಣಿತ ಗಾಯಕ ರೋನಿ ಕ್ರಾಸ್ತಾ ಇವರಿಗೆ ‘ಕರ್ನಾಟಕ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’ ನವೆಂಬರ್ 29 ರಂದು ನೀಡಿ ಗೌರವಿಸಿದರು.

You cannot copy content of this page