November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರಾವಳಿ ಹಾಲುಮತ ಕುರುಬರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು – 537ನೇ ಜಯಂತೋತ್ಸವ ಕಾರ್ಯಕ್ರಮ

ಕರಾವಳಿ ಹಾಲುಮತ ಕುರುಬರ ಸಂಘ (ರಿ.) ದಕ್ಷಿಣ ಕನ್ನಡ ಮಂಗಳೂರು ಇವರ ನೇತೃತ್ವದಲ್ಲಿ ದಾಸವರೇಣ್ಯ ದಾರ್ಶನಿಕ ಕವಿ ಸಂತ ಶ್ರೇಷ್ಠ  ಶ್ರೀ ಕನಕದಾಸರ  537ನೇ ಜಯಂತೋತ್ಸವ ಕಾರ್ಯಕ್ರಮ ದಶಂಬರ್ 1ರಂದು ಭಾನುವಾರ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ಗೋಕರ್ಣನಾಥ ಕಾಲೇಜು ಸಭಾಭವನದವರೆಗೆ ಕನಕದಾಸರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ಹಾಗೂ ಸಮಾಜದ ಹೆಣ್ಣು ಮಕ್ಕಳು ಕುಂಭ ಮೇಳದೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮುಖ್ಯಸ್ಥ ವಿಶ್ವಾಸ್ ಕುಮಾರ್ ದಾಸ್ ಮೆರವಣಿಗೆಯನ್ನು […]

News

Kasargod Saint Thomas Church Kollangana wins varado cricket tournament

Kasargod, December 1: The varado cricket tournament organized by the Indian Catholic Youth Movement (ICYM) Kasargod deanery concluded on Sunday, with Saint Thomas Church, Kollangana, emerging as the champions. The championship trophy was presented to the winning team by Rev. Fr Louis Cutinha, director of the Kasargod unit and Parish Priest. Rev. Fr Vishal Monis, […]

News

ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಶಾಹುಲ್ ಹಮೀದ್ ನೇಮಕ

ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಈ ಆದೇಶವನ್ನು ಹೊರಡಿಸಿದೆ.  ದಿವಂಗತ ಕೆ. ಅಬ್ದುಲ್ ರಹಿಮಾನ್ ಮತ್ತು ನೆಬಿಸಾ ದಂಪತಿಯ ಪುತ್ರನಾದ ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್, ಮಂಗಳೂರು ಎಸ್‌.ಡಿ.ಎಂ. ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ. ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರ ಬಳಿ ವಕೀಲರಾಗಿ ಅಭ್ಯಾಸ ಮಾಡಿದ್ದರು.

News

ಕೃಷಿ ಜಮೀನಿಗೆ ನಕ್ಷೆ ನೀಡಲು ಲಂಚ ಸ್ವೀಕರಿಸಿದ ಭೂಮಾಪಕನ ಬಂಧನ

ಕೃಷಿ ಜಮೀನಿಗೆ ನಕ್ಷೆ ನೀಡಲು ಲಂಚ ಸ್ವೀಕರಿಸಿದ ಭೂಮಾಪಕನನ್ನು ಲೋಕಾಯುಕ್ತ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಹಾವೇರಿ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಅಶೋಕ ಎಚ್.ಜಿ. ಎಂದು ಗುರುತಿಸಲಾಗಿದೆ. ಈತ ಹಾವೇರಿ ತಾಲೂಕಿನ ಕಳ್ಳಿಹಾಲ ಗ್ರಾಮದ ಮಂಜುನಾಥ ಕಡ್ಲಿ ಎಂಬವರಿಂದ ರೂಪಾಯಿ 25000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮಂಜುನಾಥ ಕಡ್ಲಿ ತಮ್ಮ ಜಮೀನಿನ ಪಾಲು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಜಮೀನಿನ ನಕ್ಷೆ ಅಗತ್ಯವಾಗಿ ಬೇಕಾಗಿತ್ತು. […]

News

ದೇಶದ ಅತ್ಯಂತ ಕಿರಿಯ ಪೈಲಟ್ ಆದ ಕೀರ್ತಿ ವಿಜಯಪುರದ ಸಮೈರಾ ಮಡಲಿಗೆ

ಗುಮ್ಮಟಿ ನಗರಿ ವಿಜಯಪುರ ಜಿಲ್ಲೆಯ ಸಮೈರಾ ಎಂಬ ಯುವತಿಯೊಬ್ಬರು ದೇಶದ ಅತ್ಯಂತ ಕಿರಿಯ ಪೈಲಟ್ ಆದ ಕೀರ್ತಿ ತನ್ನ ಮಡಿಲಿಗೆ ಗಿಟ್ಟಿಸಿಕೊಂಡು ವಿಜಯಪುರ ಹಾಗೂ ರಾಜ್ಯದ ಹಿರಿಮೆ ಹೆಚ್ಚಿಸಿದ್ದಾರೆ. ಐತಿಹಾಸಿಕ ಜಿಲ್ಲೆಯಾಗಿ ವಿಜಯಪುರ ಹೆಚ್ಚು ಪ್ರಖ್ಯಾತಿ ಪಡೆದಿದೆ. ಜೊತೆಗೆ ಜಿಲ್ಲೆಯ ಅನೇಕರು ರಾಜ್ಯ ಸೇರಿದಂತೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡೆ, ವಿಜ್ಞಾನ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆಗೈದವರಿದ್ದಾರೆ. ಇದೀಗ ಮತ್ತೊಂದು ಸಾಧನೆಯಿಂದ ಜಿಲ್ಲೆಯ ಹಾಗೂ ರಾಜ್ಯದ ಹಿರಿಮೆ ಹೆಚ್ಚಿದೆ. 18 ವರ್ಷದ ಸಮೈರಾ ಹುಲ್ಲೂರು ಕಮರ್ಶಿಯಲ್ ಪೈಲಟ್ […]

News

ವಿದ್ಯಾಸಂಸ್ಥೆಯ ಬೆಳವಣಿಗೆಗೆ ಊರಿನವರ ಸಹಕಾರ ಅತಿ ಮುಖ್ಯ – ಶ್ರೀಮತಿ ಭಾರತಿ  ಸುರೇಂದ್ರ ರಾವ್

ಬಂಟ್ವಾಳ : ಒಂದು ವಿದ್ಯಾಸಂಸ್ಥೆಯ ಬೆಳವಣಿಗೆಗೆ ಊರಿನವರ ಸಹಕಾರ ಅತಿ ಮುಖ್ಯವಾಗಿದೆ. ಶಿಕ್ಷಣ ಕೇವಲ ಪಠ್ಯದಿಂದ ಮಾತ್ರವೇ ದೊರಕಲಾರದು. ತರಗತಿ ಕೋಣೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ ಜೊತೆಗೆ ಅದಕ್ಕೆ ಪೂರಕವಾದ ಸಹಪಠ್ಯಗಳು ಮತ್ತು ಮಕ್ಕಳ ಹವ್ಯಾಸಗಳನ್ನು ಪ್ರತಿಭೆಗಳನ್ನು ಹೊರ ತರುವಲ್ಲಿ ವೇದಿಕೆಯು ಪ್ರಮುಖವಾಗಿದೆ. ಈ ದೃಷ್ಟಿಯಲ್ಲಿ ಶಾಲಾ ವಾರ್ಷಿಕೋತ್ಸವಗಳು ಮಕ್ಕಳಿಗೆ ಹೊಸ ಹುರುಪನ್ನು ತಂದು ಶೈಕ್ಷಣಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಉತ್ತಮ ಫಲಿತಾಂಶವನ್ನು ಉಂಟು ಮಾಡುತ್ತವೆ. ಪರಿಸರ, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಶಾಲಾ ಮತ್ತು ಮಕ್ಕಳ […]

News

ಮುಲ್ಕಿಯ ಕಿಲ್ಪಾಡಿ ಬೆಥನಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ

ಮುಲ್ಕಿ : ವಿದ್ಯಾರ್ಥಿಗಳು ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಶಿಕ್ಷಣ ಸಂಸ್ಥೆಯ ಸರ್ವಾಂಗೀನ ಬೆಳವಣಿಗೆಯಲ್ಲಿ ಸಹಕರಿಸಬೇಕು ಎಂದು ಮುಲ್ಕಿ ಪೊಲೀಸ್ ಠಾಣಾಧಿಕಾರಿ ಅನಿತಾ ಹೇಳಿದರು. ಕಿಲ್ಪಾಡಿ ಬೆಥನಿ ಇಂಗ್ಲೀಷ್ ಮೀಡಿಯಂ ಸ್ಕೂಲ್  ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಹೆತ್ತವರು ಸದಾ ವಿದ್ಯಾರ್ಥಿಗಳ ಬೆನ್ನೆಲುಬಾಗಿದ್ದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕಾಗಿ ಹಾಗೂ ಮೊಬೈಲ್ ಗಳನ್ನು ತಮ್ಮ ಮಗುವಿಗೆ ನೀಡದೆ ತಮ್ಮ ಅಮೂಲ್ಯ ಸಮಯವನ್ನು ತಮ್ಮ ಮಕ್ಕಳೊಂದಿಗೆ ಕಳೆಯುವುದು ಉತ್ತಮ […]

News

ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು  ದಶಂಬರ್ 8ರಂದು ನೇರಳಕಟ್ಟೆಯಲ್ಲಿ ಶುಭಾರಂಭ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮ

ಮಾಣಿ : ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದು ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಂ.ಎಸ್. ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ದಶಂಬರ್ 8ರಂದು ಬೆಳಗ್ಗೆ 8.30ಕ್ಕೆ ಶುಭಾರಂಭಗೊಳ್ಳಲಿದೆ. ಭಾರತ್ ವೆಹಿಕಲ್ ಬಜಾರ್ ಸಂಸ್ಥೆಯು 2 ನೇ ವರ್ಷಕ್ಕೆ ಪಾದಾರ್ಪಣೆ  ಮಾಡಿರುವ ಹಿನ್ನೆಲೆಯಲ್ಲಿ ಅಂದು ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ […]

News

ಬಿ.ಸಿ. ರೋಡ್ ಲಯನ್ಸ್ ಕ್ಲಬ್ ನಲ್ಲಿ ಮುಸ್ಲಿಂ ಸಮಾಜ ಬಂಟ್ವಾಳ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರ “ಸಮಾಲೋಚನಾ ಸಭೆ”

ಬಂಟ್ವಾಳ : ಮುಸ್ಲಿಂ ಸಮಾಜ ಬಂಟ್ವಾಳ ನೇತೃತ್ವದಲ್ಲಿ ತಾಲೂಕಿನ  ವಿವಿಧ ಸಂಘಟನೆಗಳ ಮುಖಂಡರ “ಸಮಾಲೋಚನಾ ಸಭೆ” ಯು.ಬಿ.ಸಿ. ರೋಡಿನ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾದಿ ಇಂತಿಯಾಝ್ ಮಾತನಾಡಿ, ಭಾರತದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಕಾನೂನಾತ್ಮಕ ಸವಾಲುಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ರಾಷ್ಟ್ರೀಯ ವಕ್ಫ್ ಹೋರಾಟ ಸಮಿತಿ ಸದಸ್ಯ ಇಲ್ಯಾಸ್ ಮುಹಮ್ಮದ್ ತುಂಬೆಯವರು ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮೂಲಕ ಮುಸ್ಲಿಮರ ಹಕ್ಕುಗಳನ್ನು ಕಸಿಯಲು ಯಾವೆಲ್ಲಾ ಷಡ್ಯಂತ್ರಗಳನ್ನು ರೂಪಿಸುತ್ತಿವೆ ಎಂಬುದರ […]

News

ಮಂಗಳೂರಿನಲ್ಲಿ ರೂಪಾಯಿ 90 ಕೋಟಿ ವೆಚ್ಚದಲ್ಲಿ 9 ಭಾಷೆಗಳಲ್ಲಿ 3 ಚಲನಚಿತ್ರಗಳ ನಿರ್ಮಾಣ – ಸಿಇಓ ಮರ್ರಿ ಗಿರಿ ರೆಡ್ಡಿ

ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿಯೇ ಚಿತ್ರದ ಲಾಂಚ್ ಆಗಲಿದೆ ಮಂಗಳೂರು : ಇಫ್ಫಿಮ್‌ಗಿ ಸ್ಟುಡಿಯೋಸ್ ಇಂಡಿಯನ್ ಫಿಲ್ಮ್ ಫ್ಯಾಶನ್ ಮೀಡಿಯಾ ನೆಟ್‌ವರ್ಕ್ ವತಿಯಿಂದ ಒಂಭತ್ತು ಭಾಷೆಗಳಲ್ಲಿ 3 ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಇಫ್ಫಿಮ್‌ಗಿ ಸ್ಟುಡಿಯೋದ ಸಿಇಒ ಮರ್ರಿ ಗಿರಿ ರೆಡ್ಡಿ ನವಂಬರ್ 29ರಂದು ಶುಕ್ರವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುಮಾರು ರೂಪಾಯಿ 90 ಕೋಟಿ ವೆಚ್ಚದಲ್ಲಿ ಮೂರು ಚಲನಚಿತ್ರಗಳ ನಿರ್ಮಾಣವಾಗಲಿದೆ. ದಶಂಬರ್‌ನಲ್ಲಿ ಮಂಗಳೂರಿನಿಂದಲೇ ಶೂಟಿಂಗ್ ಆರಂಭವಾಗಲಿದೆ. ತೆಲುಗು, ತಮಿಳು, ಹಿಂದಿ, […]

You cannot copy content of this page