November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೈತರ ಜೊತೆಗೂಡಿ ಶಾಲಾ ವಿದ್ಯಾರ್ಥಿನಿಯರ ಭತ್ತದ ನಾಟಿ – ‘ಪ್ರತಿಫಲ’ ದೊರಕಿದ  ಹೆಡ್‌ ಮಾಸ್ಟರ್‌ ಕೃಷಿ ಪಾಠ

ಗಂಗಾವತಿ: ಕೃಷಿ ಎಂದರೆ ಮೂಗು ಮುರಿಯುವ ಈ ದಿನಮಾನಗಳಲ್ಲಿ ಮಕ್ಕಳಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ, ಒಲವು ಮೂಡಿಸಬೇಕು ಎಂಬ ಇಲ್ಲಿನ ಶಾಲೆಯೊಂದರ ಮುಖ್ಯ ಶಿಕ್ಷಕರ ನಿರಂತರ ಶ್ರಮ ಫಲ ನೀಡಿದೆ. ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯರು, ಕಳೆದ ನಾಲ್ಕು ತಿಂಗಳಿಂದ ಪಾಠ-ಪ್ರವಚನದೊಂದಿಗೆ, ಕೃಷಿಯಲ್ಲೂ ಖುಷಿ ಕಂಡಿದ್ದಾರೆ. ನಿರಂತರ ಪರಿಶ್ರಮದ ಫಲವಾಗಿ ಮಂಗಳವಾರ ಕೈ ಸೇರಿದ 60 ಚೀಲ ಭತ್ತದ ಫಸಲು ಕಂಡು ವಿದ್ಯಾರ್ಥಿನಿಯರು ಸಂಭ್ರಮಿಸಿದರು. ಸಿದ್ದಾಪುರ ಗ್ರಾಮದ ವಸತಿ ನಿಲಯದ […]

News

ಕನ್ನಡ ಶಾಲೆ ಸಶಕ್ತವಾದರೆ ಮಾತ್ರ ಕನ್ನಡದ ಸಂರಕ್ಷಣೆ – ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ

ಮಂಗಳೂರು : ಕನ್ನಡ ಭಾಷೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವುದು ಅತೀ ಅಗತ್ಯ. ರಾಜ್ಯದಲ್ಲಿ ಕನಿಷ್ಠ ಹಿರಿಯ ಪ್ರಾಥಮಿಕ ಹಂತದವರೆಗೆ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಇತರ ಯಾವುದೇ ಭಾಷೆಗಳಿಗೆ ಕಡಿಮೆ ಇಲ್ಲದೆ ಸಶಕ್ತಗೊಳಿಸುವ ಕಾರ್ಯವಾಗಬೇಕು ಎಂದು ವಿಶ್ರಾಂತ ಕುಲಪತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನವಂಬರ್ 27ರಂದು ಬುಧವಾರ ನಡೆದ ಪ್ರೆಸ್ ಕ್ಲಬ್ […]

News

ವಿಟ್ಲ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮತ್ತು ಪೊಲೀಸರಿಂದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಕಾನೂನು ಮಾಹಿತಿ ಶಿಬಿರ

ವಿಟ್ಲದಲ್ಲಿರುವ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ವಿಟ್ಲ ಪೊಲೀಸ್ ಠಾಣೆಯ ವತಿಯಿಂದ ಕಾನೂನು ಮಾಹಿತಿ ಶಿಬಿರ ನಡೆಯಿತು. ವಿಟ್ಲ ಠಾಣೆಯ ಠಾಣಾಧಿಕಾರಿ ವಿದ್ಯಾ ಹಾಗೂ ಕಾನ್ಸ್‌ಟೇಬಲ್ ಮನೋಜ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ, ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ, ಸಾರಿಗೆ ನಿಯಮಗಳು ಹಾಗೂ ಪೋಸ್ಕೋ ಕಾಯಿದೆ ಕುರಿತು ಮಾಹಿತಿ ನೀಡಿದರು‌. ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮೂಲಕ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡರು. ಶಾಲಾ ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಕಾರ್ಯಕ್ರಮ ಉದ್ಘಾಟಿಸಿದರು. ಮಾಹಿತಿ ನೀಡಿದ […]

News

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಲ್ಲಡ್ಕ ವಲಯದ ನೂತನ ಕಛೇರಿಯ ಉದ್ಘಾಟನೆ

ಗ್ರಾಮೀಣ ಭಾಗದ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯು ಸಹಕಾರಿಯಾಗಿದೆ –  ಪದ್ಮನಾಭ ಕೊಟ್ಟಾರಿ ಬಂಟ್ವಾಳ : ಗ್ರಾಮೀಣ ಭಾಗದ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ  ಯೋಜನೆಯು ಸಹಕಾರಿಯಾಗಿದೆ ಎಂದು ವಿಟ್ಲ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದರು. ಅವರು ನವಂಬರ್ 25ರಂದು ಸೋಮವಾರ ಕಲ್ಲಡ್ಕ ಕೆಳಗಿನ ಪೇಟೆ ಲಲಿತಾ ಎಸ್. ರಾವ್ ರವರ ವಾಣಿಜ್ಯ ಸಂಕೀರ್ಣದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಲ್ಲಡ್ಕ ವಲಯದ ನೂತನ ಕಛೇರಿಯನ್ನು ಉದ್ಘಾಟಿಸಿ […]

News

ಉಪ ಚುನಾವಣೆ ಬಂಟ್ವಾಳ ಪುರಸಭೆ ಹಾಗೂ ಗ್ರಾಮ ಪಂಚಾಯತ್ ನ 11 ಸ್ಥಾನಗಳ ಪೈಕಿ 9ರಲ್ಲಿ ಕಾಂಗ್ರೆಸ್ ಮೇಲುಗೈ

ಬಂಟ್ವಾಳ : ತಾಲೂಕಿನ ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ತೆರವಾದ 11 ಸ್ಥಾನಗಳಿಗೆ ನವಂಬರ್ 23ರಂದು ಮತದಾನ ನಡೆದಿದ್ದು, ಮಂಗಳವಾರ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರೆ, ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದ್ದು, ಎಸ್.ಡಿ.ಪಿ.ಐ. ಎಲ್ಲಾ ಸ್ಥಾನವನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಪುರಸಭೆಯ 2ನೇ ವಾರ್ಡ್ ನ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುರುಷೋತ್ತಮ ಪೂಜಾರಿ ಅವರು ಬಿಜೆಪಿ ಅಭ್ಯರ್ಥಿ […]

News

ಸರಪಾಡಿ‌ ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಆಳ್ವ ಪಡ್ಡಾಯಿಬೆಟ್ಟು ನಿಧನ

ಬಂಟ್ವಾಳ : ಸರಪಾಡಿ ಗ್ರಾಮದ ಪಡ್ಡಾಯಿಬೆಟ್ಟು ನಿವಾಸಿ, ಸರಪಾಡಿ ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ 89 ವರ್ಷ ಪ್ರಾಯದ ನಾರಾಯಣ ಆಳ್ವ ಪಡ್ಡಾಯಿಬೆಟ್ಟು ಅವರು  ಅಲ್ಪಕಾಲದ ಅಸೌಖ್ಯದಿಂದ ನವಂಬರ್ 26ರಂದು ಮಂಗಳವಾರ ನಿಧನ ಹೊಂದಿದರು. ಪ್ರಗತಿಪರ ಕೃಷಿಕರಾಗಿದ್ದ ನಾರಾಯಣ ಆಳ್ವ ಅವರು ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘ ಸಮಯ ಸಕ್ರೀಯರಾಗಿದ್ದು, ಬಿ. ರಮಾನಾಥ ರೈ ಅವರ ಆಪ್ತರಾಗಿದ್ದರು. ಸರಪಾಡಿ ಮಂಡಲ ಪಂಚಾಯತ್ ನಲ್ಲಿ ಸುದೀರ್ಘ 25 ವರ್ಷಗಳ ಕಾಲ‌ ಅಧ್ಯಕ್ಷರಾಗಿ, ಮಣಿನಾಲ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, […]

News

ವೇಣೂರು ನದಿ ನೀರಿನಲ್ಲಿ ಮುಳುಗಿ ಲಾರೆನ್ಸ್, ಜೈಸನ್ ಹಾಗೂ ಸೂರಜ್ ಎಂಬ ಮೂವರು ಯುವಕರ ಧಾರುಣ ಅಂತ್ಯ

ಬೆಳ್ತಂಗಡಿ:  ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನವಂಬರ್ 27ರಂದು ಬುಧವಾರ ಸಂಜೆ ಸಂಭವಿಸಿದೆ. ಮೃತ ಯುವಕರನ್ನು 21 ವರ್ಷ ಪ್ರಾಯದ ಲಾರೆನ್ಸ್, 19 ವರ್ಷ ಪ್ರಾಯದ ಸೂರಜ್ ಹಾಗೂ ಜೈಸನ್ ಎಂದು ಗುರುತಿಸಲಾಗಿದೆ. ವೇಣೂರು ಚರ್ಚ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಇವರು ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದ್ದು ಬಳಿಕ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದು ನದಿ ನೀರಿನಲ್ಲಿ ಸಿಲುಕಿ […]

News

ಜಿಲ್ಲಾ ಮಟ್ಟದ ಮರಾಟಿ ವಧು-ವರರ ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬೆಳ್ತಂಗಡಿ : ಪ್ರಸ್ತುತ ಕಾಲಘಟ್ಟದಲ್ಲಿ ವಿವಾಹ ಕಾರ್ಯಕ್ಕೆ ಸೂಕ್ತ ವಧು ಅಥವಾ ವರರ ಆಯ್ಕೆ ಮಾಡುವ ಕಾರ್ಯ ಸವಾಲಿನದ್ದಾಗಿದೆ. ಜಿಲ್ಲೆಯ ಸಮುದಾಯದ ಜನತೆಗೆ ವಧು – ವರರ ಅನ್ವೇಷಣೆಗೆ ಸಮಾವೇಶ ಬಡ ಕುಟುಂಬಗಳಿಗೆ ಸಹಾಯಕವಾಗಲಿದೆ. ಇಂತಹ ವಿಭಿನ್ನವಾದ ಸಮಾವೇಶಗಳು ಮರಾಟಿ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಧರ್ಮಣ್ಣ ನಾಯ್ಕ್ ಹೇಳಿದರು. ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ನವಂಬರ್ 24ರಂದು ಭಾನುವಾರ ಬೆಳ್ತಂಗಡಿ ತಾಲೂಕು ಮರಾಟಿ ಸೇವಾ ಸಂಘ ಆಯೋಜಿಸಿದ್ದ […]

News

ಉಜಿರೆ ಚರ್ಚ್ ನಲ್ಲಿ ನೂತನ ಮನೆಯ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ

ಚರ್ಚ್ ಧರ್ಮಗುರು ಫಾದರ್ ಆಬೆಲ್ ಲೋಬೊ, ಉಪಾಧ್ಯಕ್ಷ ಆಂತೋನಿ ಫೆರ್ನಾಂಡಿಸ್ ನೇತೃತ್ವ. ಉಜಿರೆ ಸಂತ ಅಂತೋನಿ ಚರ್ಚ್ ಇದರ ನೇತೃತ್ವದಲ್ಲಿ ಅಶಕ್ತ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ ಹಾಗೂ ಆಶೀರ್ವಚನ ಕಾರ್ಯಕ್ರಮವು ಉಜಿರೆಯಲ್ಲಿ ನಡೆಯಿತು.  ಸಂತ ಅಂತೋನಿ ಚರ್ಚಿನ ಧರ್ಮಗುರು ವಂದನೀಯ ಫಾದರ್ ಅಬೆಲ್ ಲೋಬೊ ಇವರ ಮಾರ್ಗದರ್ಶನದಲ್ಲಿ ಪಾಲನಾ ಸಮಿತಿಯ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್ ಇವರ ಮುಂದಾಳತ್ವದಲ್ಲಿ ಎನ್.ಆರ್.ಐ. ಉದ್ಯಮಿ ಮೈಕಲ್ ಡಿಸೋಜ ಪುತ್ತೂರು, ಸಿಒಡಿಪಿ ಹಾಗೂ ಬೆಳ್ಮಣ್ ನ ಹ್ಯುಮಾನಿಟಿ ಟ್ರಸ್ಟ್ ಸಂಸ್ಥೆಗಳು ಹಾಗೂ […]

You cannot copy content of this page