November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

Dr Elroy Saldanha Inducted as Fellow of the American College of Surgeons

Mangalore: Dr Elroy Saldanha, MS, MCh, PDCC (Robotic Surgery, Vattikuti Foundation), FACS, FIAGES, FMAS, EFIAGES and Associate Professor in the Department of Surgical Oncology at Fr Muller Medical College, has been inducted as a Fellow of the American College of Surgeons (FACS). This remarkable milestone was achieved following the fulfilment of the stringent professional and academic […]

News

ಮೆಲ್ಕಾರ್ ಮಹಿಳಾ ಕಾಲೇಜು ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ : ಮಾರ್ನಬೈಲು ಇಲ್ಲಿನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟವು ದಶಂಬರ್ 7ರಂದು ಶನಿವಾರ ಕಾಲೇಜು ಆವರಣದಲ್ಲಿ ಜರುಗಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ “ಕಲ್ಲಡ್ಕ ಮ್ಯೂಸಿಯಮ್” ನ ಮಾಲಕ ಕೆ.ಎಸ್. ಮೊಹಮ್ಮದ್ ಯಾಸೀರ್ ಮಾತನಾಡಿ, ಪಾಠದೊಂದಿಗೆ ಆಟವೂ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಿದ್ದು, ಇದರಿಂದ ದೈಹಿಕ, ಮಾನಸಿಕ ಧೃಡತೆ, ಉಲ್ಲಾಸ ಹೆಚ್ಚಾಗುವುದರೊಂದಿಗೆ ಆರೋಗ್ಯ ವರ್ಧನೆಗೂ ಇದು ಸಹಕಾರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್. ಮಾತನಾಡುತ್ತಾ, ಕ್ರೀಡೆಯು […]

News

ಬಂಟ್ವಾಳದಲ್ಲಿ “ಕೋಟಿ – ಚೆನ್ನಯ ಕ್ರೀಡೋತ್ಸವ 2025” ಇದರ ಲಾಂಛನ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ‌ತಾಲೂಕು‌  ಬಿಲ್ಲವ ಸೇವಾ ಸಂಘ ಹಾಗೂ ಯುವವಾಹಿನಿ ಹಾಗೂ ಬಿಲ್ಲವ ಮಹಿಳಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಜನವರಿ 19ರಂದು  ನಡೆಯುವ  ತಾಲೂಕು ಮಟ್ಟದ “ಕೋಟಿ – ಚೆನ್ನಯ ಕ್ರೀಡೋತ್ಸವ 2025” ಇದರ ಲಾಂಛನ  ಹಾಗೂ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಬಿ.ಸಿ. ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ದಶಂಬರ್ 8ರಂದು ಭಾನುವಾರ ನಡೆಯಿತು. ಲಾಂಛನ ಬಿಡುಗಡೆಗೊಳಿಸಿದ ಉದ್ಯಮಿ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ಜಗದೀಶ್ ಡಿ. ಸುವರ್ಣ […]

News

ನೇರಳಕಟ್ಟೆಯಲ್ಲಿ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ಉದ್ಘಾಟನೆ

ಸೆಕೆಂಡ್ ಹ್ಯಾಂಡ್ ವಾಹನ ಮಾರಾಟದಲ್ಲಿ ಹೆಸರುವಾಸಿಯಾದ ಸಂಸ್ಥೆ ಬಂಟ್ವಾಳ : ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಎಚ್.ಎಂ.ಎಸ್. ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ದಶಂಬರ್ 8ರಂದು ಭಾನುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ಸಯ್ಯಿದ್ ಹಂಝ ತಂಙಳ್ ಅಲ್ ಹಾದಿ ನೂತನ ಮಳಿಗೆಯನ್ನು ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ […]

News

ವಿದ್ಯೆಯ ಜೊತೆಗೆ ಸಂಸ್ಕಾರವೂ ಅಗತ್ಯ – ಡಾ. ಮೋಹನ್ ಜೀ ಭಾಗವತ್

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವ ಬಂಟ್ವಾಳ : ವಿದ್ಯೆಯಿಂದ ನಾವು ಪಡೆದ ಜ್ಞಾನವನ್ನು ಯಾವತ್ತೂ ಕೂಡ ನಮ್ಮ ಸ್ವಾರ್ಥಕ್ಕೆ ಬಳಸದೆ ದೇಶದ ಅಭಿವೃದ್ಧಿ, ಸಂಸ್ಕೃತಿಯ ರಕ್ಷಣೆ, ದುರ್ಬಲರ ಏಳಿಗೆಗೆ ಉಪಯೋಗಿಸಬೇಕು ಎಂದು ಆರ್.ಎಸ್.ಎಸ್. ಸರಸಂಘಚಾಲಕ್ ಡಾ. ಮೋಹನ್ ಜೀ ಭಾಗವತ್ ಕರೆ ನೀಡಿದರು. ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವವನ್ನು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಉದ್ಘಾಟಿಸಿ, ವೀಕ್ಷಿಸಿದ ಬಳಿಕ ಮಾತನಾಡಿದ ಅವರು ವಿದ್ಯೆಯು ಕೇವಲ ಹೊಟ್ಟೆ ತುಂಬಿಸುವ […]

News

ಕೌಶಲ್ಯ ಮತ್ತು ಮೌಲ್ಯಯುತ ಶಿಕ್ಷಣವು ಸಮಾಜ ಪರಿವರ್ತನೆಗೆ ಅಗತ್ಯ – ಜೆಮ್ ಶಾಲಾ ರಜತಮಹೋತ್ಸವದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್

ಬಂಟ್ವಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನವಪೀಳಿಗೆಯು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಅವರಿಗೆ ಕೌಶಲ್ಯಭರಿತ  ಮತ್ತು ಮೌಲ್ಯಯುತವಾದ  ಶಿಕ್ಷಣ ನೀಡುವ ಅಗತ್ಯವಿದೆ‌ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.       ಅವರು ಗೋಳ್ತಮಜಲು ಜೆಮ್ ಪಬ್ಲಿಕ್ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಬಡತನ,‌ ನಿರುದ್ಯೋಗ, ಅಸಮಾನತೆ ಇವೇ ಮೊದಲಾದ ಪಿಡುಗುಗಳಿಗೆ ಗುಣಮಟ್ಟದ ಶಿಕ್ಷಣವು ಒಂದು ಅತ್ಯುತ್ತಮ ಪರಿಹಾರ ಕ್ರಮವಾಗಿದ್ದು ಅಂತಹ ಗುಣಮಟ್ಟದ ಶಿಕ್ಷಣವನ್ನು ಕಳೆದ ಇಪ್ಪತ್ತೈದು […]

News

ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಮಂಜುನಾಥ ಭಂಡಾರಿ

ಮಂಗಳೂರು: ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅನಿಲ್ ಕುಮಾರ್ ಅವರ ಕಚೇರಿಗೆ ತೆರಳಿ ಅಭಿನಂದನೆ ಸಲ್ಲಿಸಿದರು‌. ಈ ಸಂದರ್ಭದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ದಕ್ಷಿಣ ಕನ್ನಡ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ ಹಾಗೂ ಮನಪಾ ಸದಸ್ಯರು ಉಪಸ್ಥಿತರಿದ್ದರು.

News

ಕಲಿತ ಶಾಲೆಗೆ ನೆರವು ಹಿರಿಯ ವಿದ್ಯಾರ್ಥಿಗಳ ಬದ್ಧತೆ – ರಮೇಶ್ ಬಾಯಾರು

ಬಂಟ್ವಾಳ : ತಾನು ಕಲಿತ ಶಾಲೆಗಳಿಂದ ಪಡೆದ ಪ್ರಯೋಜನಗಳನ್ನು ಸ್ಮರಣೆಯಲ್ಲಿರಿಸಿ ಅವುಗಳ ಪ್ರಗತಿಯಲ್ಲಿ ಭಾಗಿದಾರಿಗಳಾಗಬೇಕಾದದು ಹಿರಿಯ ವಿದ್ಯಾರ್ಥಿಗಳ ಭಧ್ದತೆಯಾಗಿದೆ. ಕಲಿತ ಶಾಲೆಗಳನ್ನು ಬೆಳೆಸುವುದೇ ಗುರುಋಣ ಸಂದಾಯ ಮಾಡಲು ಪರ್ಯಾಯ ದಾರಿಯಾಗಿದೆ ಎಂದು ಮಕ್ಕಳ ಕಲಾಲೋಕದ ಬಂಟ್ವಾಳ ತಾಲೂಕಿನ ಘಟಕ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಹೇಳಿದರು. ಅವರು ದಶಂಬರ್ 6ರಂದು ಶುಕ್ರವಾರ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ “ಪ್ರತಿಭಾ ಪುರಸ್ಕಾರ 2024-25” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗ್ರಾಮಾಂತರ ಶಾಲೆಗಳಿಗೆ ಮೆರುಗು […]

News

ಬಂಟ್ವಾಳದ ಬಾಂಬಿಲದಲ್ಲಿ KSRTC ಬಸ್ಸು ಹಾಗೂ ಬೈಕ್ ಢಿಕ್ಕಿ – ಸವಾರ ಮೃತ್ಯು

ಬಂಟ್ವಾಳ :  KSRTC ಬಸ್ಸು ಹಾಗೂ ಬೈಕ್ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಬಿ.ಸಿ. ರೊಡು – ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಬಾಂಬಿಲದಲ್ಲಿ ದಶಂಬರ್ 5ರಂದು ಗುರುವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ 45ವರ್ಷ ಪ್ರಾಯದ ರಾಜೇಂದ್ರ ಪೂಜಾರಿ ಮೃತಪಟ್ಟವರು. ಅವರು ಬಿ.ಸಿ. ರೋಡಿನಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ವೇಳೆ  ಈ ಅಪಘಾತ ನಡೆದಿದ್ದು, ಬಸ್ಸು ಬೆಳ್ತಂಗಡಿ ಭಾಗದಿಂದ ಮಂಗಳೂರಿಗೆ ತೆರಳುತ್ತಿತ್ತು. ಮೃತ ರಾಜೇಂದ್ರ ಅವರು ಪತ್ನಿ ಹಾಗೂ ಮೂವರು […]

News

ಕಾಸರಗೋಡು ಕನ್ನಡ ಗ್ರಾಮದಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಿ.ಎನ್. ಅಶೋಕ್

 “ಕನ್ನಡ ಗ್ರಾಮ – ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ -ಸಾಹಿತ್ಯ ಕೇಂದ್ರ “ ಗಡಿನಾಡು ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡ ಚಟುವಟಿಕೆ ಇಲ್ಲಿನ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಆಯೋಜನೆ ಹಾಗೂ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಗಡಿನಾಡಿನ ಕನ್ನಡಿಗರು ನಡೆಸುತ್ತಿರುವ ಹೋರಾಟ ಶ್ಲಾಘನೀಯವಾದದ್ದು. ಕನ್ನಡ ಗ್ರಾಮ-ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ – ಸಾಹಿತ್ಯ ಕೇಂದ್ರ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ರಾಷ್ಟ್ರೀಯ ಪರಿಸರ […]

You cannot copy content of this page