November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ; ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಳಿಸಿದ ಪುತ್ತೂರು ಸತ್ರ ನ್ಯಾಯಾಲಯ

ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ ಪ್ರತಿಷ್ಠಿತ “ಕಜೆ ಲಾ ಛೇಂಬರ್ಸ್‌’ ಮುಖ್ಯಸ್ಥರಾದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಪುತ್ತೂರು: ನವೆಂಬರ್ 6ರ ತಡರಾತ್ರಿ ಪುತ್ತೂರಿನ ನೆಹರೂ ನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಒಂದನೇ ಮತ್ತು ಎರಡನೇ ಆರೋಪಿಗಳಾದ ಚೇತನ್ ಅಲಿಯಾಸ್ ಪುಂಡಿ ಚೇತು ಹಾಗೂ ಮನೀಷ್ ಅಲಿಯಾಸ್ ಬ್ರೋಕರ್ ಮನಿ ಎಂಬವರು ಮಾನ್ಯ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. […]

News

ಗುರುವಾಯನಕೆರೆಯ ಪೆಗ್ಸ್ ರೆಸ್ಟೋಬಾರ್ ಫ್ಯಾಮಿಲಿ ರೆಸ್ಟೋರೆಂಟ್ ಹೊಸ ಆಡಳಿತದೊಂದಿಗೆ ಶುಭಾರಂಭ

ಅತಿಥಿ ಸೇವೆಯ ‘ರೇಸ್’ನಲ್ಲಿ ಹಿಂದೆ ಬೀಳದ ‘ರೇಸ್ ಇನ್ ಹೋಟೆಲ್’ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿರುವ ಹೋಟೆಲ್ ರೇಸ್ ಇನ್ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ ಫ್ಯಾಮಿಲಿ ರೆಸ್ಟೋರೆಂಟ್” ಡಿಸೆಂಬರ್ 7ರಿಂದ ಹೊಸ ಆಡಳಿತದೊಂದಿಗೆ ಪ್ರಖ್ಯಾತ ಹೋಟೆಲ್ ಉದ್ಯಮಿ ಬೆಳ್ತಂಗಡಿಯ ಜೋರ್ಡನ್ ಫ್ಯಾಮಿಲಿ ರೆಸ್ಟೋರೆಂಟ್ ನ ನಿರ್ವಹಣಾ ತಂಡದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಾ ಇದೆ. ಈ ಮೂಲಕ ಆಹಾರ ಪ್ರಿಯರಿಗೆ ವಿಶೇಷ ರುಚಿಗಳ ಸಂಭ್ರಮವನ್ನು ನೀಡುವ ‘ಫುಡ್ ಸ್ಪಾಟ್’ ಆಗುವ ಭರವಸೆ ಮೂಡಿ […]

News

ಲೋಕ ಕಲ್ಯಾಣಾರ್ಥವಾಗಿ ನಾರಾವಿಯಲ್ಲಿ ಡಿಸೆಂಬರ್ 22ರಂದು ಮಹಾ ಚಂಡಿಕಾಯಾಗ

ನಾರಾವಿ:  ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಡಿಸೆಂಬರ್ 22ರಂದು, ಲೋಕ ಕಲ್ಯಾಣಾರ್ಥ ಮಹಾ ಚಂಡಿಕಾಯಾಗವು ಪರಸ್ಪರ ಯುವಕ ಮಂಡಲ ಈದು – ನಾರಾವಿ ಇದರ ನೇತೃತ್ವದಲ್ಲಿ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ 5 ಮಾಗಣೆಯ ಗ್ರಾಮಸ್ಥರಿಂದ, ವೇ.ಮೂ. ಕೃಷ್ಣ ತಂತ್ರಿಯವರ ಪೌರೋಹಿತ್ಯದಲ್ಲಿ ನಡೆಯಲಿದೆ. ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುವುದರಿಂದ ದುಷ್ಟಪೀಡೆ, ಅರಿಷ್ಟ, ಶತ್ರುಭಾದೆ, ಗೃಹದೋಷಗಳಿಂದ ಭಾಧಿತರಾಗಿದ್ದರೆ ಮಾಟ, ಮಂತ್ರ, ವಶೀಕರಣದ ಪ್ರಭಾವಕ್ಕೆ ಒಳಗಾಗಿದ್ದೇವೆ ಎಂದೆನಿಸಿದ್ದರೆ, ಜೀವ ಭಯ, ಮೃತ್ಯು ಭಯದಿಂದ ಭಾದಿತರಾಗಿದ್ದರೆ, ದುರ್ಗಾಮಾತೆಯ ಪೂಜೆಯಿಂದ ಪರಿಹಾರವಾಗುತ್ತದೆ. ನಕಾರಾತ್ಮಕ ಅಂಶಗಳು ಮರೆಯಾಗಿ […]

News

ಪದವಿಯಲ್ಲಿ ತುಳು ಪಠ್ಯ – ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಇವರಿಗೆ ಸನ್ಮಾನ

ಮಂಗಳೂರು: ಪದವಿ ತರಗತಿಯಲ್ಲಿ ತುಳು ಪಠ್ಯವನ್ನು ಜಾರಿಗೊಳಿಸಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಇವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈ, ನಾಗೇಶ್ ಕುಮಾರ್ ಉದ್ಯಾವರ, ಬೂಬ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯವು ಮುಂದಿನ ದಿನಗಳಲ್ಲಿ ತುಳು ಸ್ನಾತಕೋತ್ತರ ಪದವಿ (ಎಂ.ಎ.)ಯನ್ನು ಆರಂಭಿಸುವಂತೆ ಅಕಾಡೆಮಿ ಅಧ್ಯಕ್ಷ […]

News

ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ 7ನೇ ಹೊಸ ಸೇತುವೆ ನಿರ್ಮಿಸಲು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ

ಬಂಟ್ವಾಳ: ತಾಲೂಕು ವ್ಯಾಪ್ತಿಯಲ್ಲಿ ಸೆರಗೊಡ್ಡಿ ಹರಿಯುವ ನೇತ್ರಾವತಿ ನದಿಗೆ ಮತ್ತೊಂದು ಹೊಸ ಸೇತುವೆ ನಿರ್ಮಾಣಗೊಳ್ಳಲಿದೆ. ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ 7ನೇ ಹೊಸ ಸೇತುವೆ ನಿರ್ಮಿಸಲು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಪ್ರಸ್ತಾವನೆಗೆ  ಸಚಿವ ಸಂಪುಟ ಅನುಮೋದನೆ ನೀಡಿದೆ.‌ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಿಂದ  ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮವನ್ನು ಈ ಹೊಸ ಸೇತುವೆ ಬೆಸಯಲಿದ್ದು ಎರಡು ತಾಲೂಕುಗಳಿಗೆ ಸಂಪರ್ಕ ಕೊಂಡಿಯಾಗಲಿದೆ. ಹಲವು ವರ್ಷಗಳ ಬೇಡಿಕೆ: ಸಜೀಪ ಮಾಗಣೆಗೊಳಪಟ್ಟು ಸಜೀಪಮೂಡ, ಸಜೀಪಮುನ್ನೂರು, ಸಜೀಪನಡು, ಸಜೀಪಪಡು ಎನ್ನುವ ನಾಲ್ಕು […]

News

ರಾಷ್ಟ್ರಪತಿಯವರೊಂದಿಗೆ ಸೌಹಾರ್ದಯುತ ಭೇಟಿ ಮಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆ

ಡಿಸೆಂಬರ್ 12ರಂದು ಗುರುವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಇವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೌಹಾರ್ದಯುತ ಭೇಟಿ ಮಾಡಿ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಹ್ವಾನಿಸಿದರು.

News

“ಟೆಡ್ಕ್ಸ್ ಎಸ್.ಜೆ.ಇ.ಸಿ. 2024” ನ್ನು ಆಯೋಜಿಸಲು ಸಿದ್ದವಾದ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು

ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ವಾಮಂಜೂರಿನ ಟೆಡ್ಕ್ಸ್ ತಂಡವು ತಮ್ಮ ಅಸ್ತಿತ್ವದ ಸಾರವನ್ನು ಆಳವಾಗಿ ಸಾರುತ್ತಿದೆ! “ಟೆಡ್ಕ್ಸ್ ಎಸ್.ಜೆ.ಇ.ಸಿ 2024” ಕಾರ್ಯಕ್ರಮವು ಡಿಸೆಂಬರ್ 14ರಂದು  ಎಸ್.ಜೆ.ಇ.ಸಿಯ ಕಲಾಂ ಆಡಿಟೋರಿಯಂನಲ್ಲಿ ನಡೆಯಲಿದೆ! “ಜೀವನ: ಬದುಕಲು ಯೋಗ್ಯವಾದುದನ್ನು ಅನ್ವೇಷಿಸಿ” ಎಂಬ ಥೀಮ್, ಜೀವನವನ್ನು ನಿಜವಾಗಿಯೂ ಅರ್ಥಪೂರ್ಣವಾಗಿಸುವ ಅನುಭವಗಳು, ಮೌಲ್ಯಗಳು ಮತ್ತು ಸಂಪರ್ಕಗಳ ಬಗ್ಗೆ ಪ್ರತಿಬಿಂಬಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಜೀವನದ ಉದ್ದೇಶ ಮತ್ತು ನೆರವೇರಿಕೆಯನ್ನು ನೀಡುತ್ತದೆ ಎಂಬುದರ ಕುರಿತು ತಮ್ಮ ಅನನ್ಯ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಸ್ಪೂರ್ತಿದಾಯಕ ಭಾಷಣಕಾರರಿಂದ ಚಿಂತನ-ಪ್ರಚೋದಕ ಮಾತುಕತೆಗಳಿಂದ ತುಂಬಿದ […]

News

Kudla Carnival 2024 – A Celebration with a Cause

The vibrant Kudla Carnival 2024, organized by the Catholic Sabha, Bajal Unit, promises a day of fun, entertainment and unity, all while supporting a social cause. The event, set to take place on 17th December at the Saint Agnes Special School Grounds, Bendore, invites everyone to be part of this grand celebration with free entry […]

News

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣಾ ಶಿಬಿರ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿನ ವಿದ್ವತ್ ಪಿಯು ಕಾಲೇಜ್ ಮತ್ತು ಲುಕ್ ಆಪ್ಟಿಕಲ್ ಇವರ ಸಹಯೋಗದಲ್ಲಿ ಡಿಸೆಂಬರ್ 10ರಂದು ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಲುಕ್ ಆಪ್ಟಿಕಲ್ ಮಡಂತ್ಯಾರ್ ನ ನೇತ್ರ ಪರೀಕ್ಷರು ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣೆಯನ್ನು ಮಾಡಿದರು. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನದಲ್ಲಿ ತೊಡಗಿರುವುದರಿಂದ ಸಹಜವಾಗಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣೆಯನ್ನು ಮಾಡಲಾಯಿತು. ಇದರ ಪ್ರಯೋಜನವನ್ನು 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದುಕೊಂಡರು.

News

ವಿಟ್ಲ ಕುದ್ಡುಪದವು ಕೆದಿಲದಲ್ಲಿ ಇರ್ಫಾನಿಯಾ ಪ್ರಚಾರ ಸಮ್ಮೇಳನ ಉದ್ಘಾಟನೆ

ಕೇರಳ ಕಣ್ಣೂರು ಜಿಲ್ಲೆಯ ಚಪ್ಪಾರಪ್ಪಡವು ಜಾಮಿಆ ಇರ್ಫಾನಿಯಾ 33ನೇ ವಾರ್ಷಿಕ ಹಾಗೂ 22ನೇ ಬಿರುದುದಾನ ಮಹಾ ಸಮ್ಮೇಳನದ ಪ್ರಯುಕ್ತ ಕರ್ನಾಟಕ ಜಂಈಯತುಲ್ ಇರ್ಫಾನಿಯ್ಯೀನ್ ಸಂಘಟಿಸಿದ ಪ್ರಚಾರ ಮಹಾ ಸಮ್ಮೇಳನ ಉದ್ಘಾಟನೆ ಹಾಗೂ ಬುರ್ದ ಕವಾಲಿ ಸ್ಪರ್ಧೆಗಳು ವಿಟ್ಲ ಕುದ್ದುಪದವು ಕೆದಿಲ ಕಾಂಪ್ಲೆಕ್ಸ್ ವಠಾರದಲ್ಲಿ ನಡೆಯಿತು. K.H. ಉಸ್ಮಾನ್ ಕೆದಿಲ ಕಾಂಪ್ಲೆಕ್ಸ್ ದ್ವಜಾರೋಹಣದ ಬಳಿಕ ಸಲೀಂ ಇರ್ಫಾನಿ ಸ್ವಾಗತಿಸಿದರು ಹಾಗೂ ಸವಾದ್ ಇರ್ಫಾನಿ ಉದ್ಘಾಟನೆಗೊಳಿಸಿದರು. ನಂತರ ಆರಂಭಾವಾದ ಸಭಾಕಾರ್ಯಕ್ರಮದ ಬಳಿಕ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು […]

You cannot copy content of this page