November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

MLC ಐವನ್ ಡಿಸೋಜರ ಮನವಿಗೆ ತಕ್ಷಣ ಸ್ಪಂದಿಸಿ ಪರಿಹಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಜೋಯ್ಸನ್, ಸೂರಜ್ ಹಾಗೂ ಲಾರೆನ್ಸ್ ಫೆರ್ನಾಂಡಿಸ್ ಇವರು ಬೆಳ್ತಂಗಡಿ ತಾಲೂಕಿನ ಬರ್ಕಾಜೆ ಡ್ಯಾಮ್ ವೀಕ್ಷಿಸಲು ಹೋಗಿ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಹಾಗೂ ಮಂಗಳೂರಿನ ಕುಲಶೇಖರದ ನಿವಾಸಿಯಾಗಿರುವ ವಿನ್ಸೆಂಟ್ ಡಿಸೋಜಾ ಪೈಂಟಿಂಗ್ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಇವರು ವಿವರಿಸಿ., ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಮನವಿ ನೀಡಿ ವಿನಂತಿಸಿದಾಗ, ಮನವಿಗೆ ಮಾನ್ಯ ಮುಖ್ಯಮಂತ್ರಿಗಳು ತಕ್ಷಣ […]

News

ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ವಾರ್ಷಿಕ ಕ್ರೀಡಾಕೂಟ

ಕ್ರೀಡೆಯಿಂದ ಶಿಸ್ತು ಸಂಯಮ ಸಾಧ್ಯ-ಸತೀಶ್ ಕುದ್ರೋಳಿ ಮಡಂತ್ಯಾರು:  ವಿದ್ಯಾರ್ಥಿಗಳು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆಗೆ ಶಿಸ್ತು, ಸಂಯಮವನ್ನುಗಳಿಸಲು ಸಾಧ್ಯ. ನಿರಂತರ ದೈಹಿಕ ವ್ಯಾಯಾಮದಿಂದ ಸದೃಢರಾಗಲು ಸಹಕಾರಿ ಎಂದು ಅಂತಾರಾಷ್ಟ್ರೀಯ ದೇಹದಾರ್ಢ್ಯ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ವಿಜೇತ ಸತೀಶ್ ಕುದ್ರೋಳಿ ಹೇಳಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ 42ನೇ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಸಾಧಕರು ಯಾವ ಸಂದರ್ಭದಲ್ಲಿ ಎಲ್ಲಿಯೂ ಬೇಕಾದರೂ ಗುರುತಿಸಲ್ಪಡುತ್ತಾರೆ. ಸೇಕ್ರೆಡ್ ಹಾರ್ಟ್ […]

News

“ಕನ್ನಡ ಭವನ ಕಾಸರಗೋಡಿನ” ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆಯಾಗಿ ರೇಖಾ ಸುದೇಶ್ ರಾವ್ ಆಯ್ಕೆ

ಕಾಸರಗೋಡು: ವಿವಿಧ ಸಂಘಟನೆಗಳ ಪದಾಧಿಕಾರಿಯಾಗಿ, ವಿಶ್ವ ಸಾಹಿತ್ಯ ಬಳಗದ ಸಂಚಾಲಕಿಯಾಗಿ, ಸಾಹಿತ್ಯ, ಸಾಮಾಜಿಕ ಸೇವಾ ಧರ್ಮವನ್ನು ನಿರಂತರತೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧ್ಯಕ್ಷೆಯಾನ್ನಾಗಿ ಸಂಘಟಕಿ, ಲೇಖಕಿ, ಕವಯತ್ರಿ ರೇಖಾ ಸುದೇಶ್ ರಾವ್ ಇವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಭವನದ “ರಜತ ಸಂಭ್ರಮ” ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡಪರ ಕಾರ್ಯಕ್ರಮ ಹಾಗೂ “ಮನೆಗೊಂದು ಗ್ರಂಥಾಲಯ, ಪುಸ್ತಕ ಸತ್ಯ – ಪುಸ್ತಕ ನಿತ್ಯ,” ಜನಜಾಗೃತಿ […]

News

ನ್ಯಾಯಾಲಯದ ಕೇವಲ ಒಂದೇ ನೋಟಿಸಿಗೆ ಹೆದರಿದ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಬರಿಮಾರು

ಕೊಟ್ಟ ಭರವಸೆಯನ್ನು ಪೂರೈಸಿದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಇವರಿಗೆ ಭಕ್ತಾಧಿಗಳಿಂದ ಕೃತಜ್ಞತೆಗಳ ಸುರಿಮಳೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಇದರ ಭವ್ಯ ಪ್ರವೇಶ ದ್ವಾರದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಜೆಸಿಬಿ ಮುಖಾಂತರ ಒಡೆಯಲು ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಬರಿಮಾರು ರೂಪಿಸಿದ್ದ ಸಂಚು, ಚರ್ಚ್ ಆಡಳಿತ ಮಂಡಳಿಯ ಸಕಾಲಿಕ ಮುನ್ನೆಚ್ಚರಿಕೆಯ ಕ್ರಮದಿಂದ‌ ಠುಸ್ಸಾಗಿದೆ. ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಇದರ ಕಾಂಕ್ರೀಟ್ ರಸ್ತೆಯ ಮುಂಬಾಗದಲ್ಲಿ […]

News

ಭಾರತ್ ವೆಹಿಕಲ್ ಬಜಾರ್ ನ 2ನೇ ವರ್ಷಾಚರಣೆ, ಐಕ್ಯ ವೇದಿಕೆ ಕೊಡಾಜೆ ಇದರ ಜಂಟಿ ಆಶ್ರಯದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮ

ಬಂಟ್ವಾಳ : ಎಚ್.ಎಂ.ಎಸ್. ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ಧಿಯನ್ನು ಪಡೆದು ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ಶುಭಾರಂಭಗೊಂಡು ಸಂಸ್ಥೆಯ 2ನೇ ವರ್ಷಾಚರಣೆ ಪ್ರಯುಕ್ತ  ಐಕ್ಯ ವೇದಿಕೆ ಕೊಡಾಜೆ ಇದರ ಜಂಟಿ ಆಶ್ರಯದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮಗಳು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಮೀಪ ಸಂಸ್ಥೆಯ ಆವರಣದಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ […]

News

ಸೌದಿ ಅರೇಬಿಯಾದಲ್ಲಿ ಬಂಟ್ವಾಳ ಸಮೀಪದ ವಗ್ಗ ನಿವಾಸಿ ಅಪಘಾತದಲ್ಲಿ ಮೃತ್ಯು

ಬಂಟ್ವಾಳ : ಸೌದಿ ಅರೇಬಿಯಾದ ತಬೂಕ್ ಸಮೀಪದ ಅಲ್ ಉಲಾ ಎಂಬ ಪ್ರದೇಶದಲ್ಲಿ ದಶಂಬರ್ 9ರಂದು ಸೋಮವಾರ ನಡೆದ ಕಾರು ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಮೇಲಿನ ವಗ್ಗ ನಿವಾಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೇಲಿನ ವಗ್ಗದ ಈಗಲ್ ಕುಟುಂಬದ ದಿವಂಗತ ಮುಹಮ್ಮದ್ ಯಾನೆ ಪುತ್ತೂಬಾವ ಎಂಬವರ ಪುತ್ರ 35 ವರ್ಷ ಪ್ರಾಯದ ಇಬ್ರಾಹೀಮ್ ನವಾಜ್ ಮೃತ ಯುವಕ. ಈ ಹಿಂದೆ ಊರಿನಲ್ಲಿ ಬಿ.ಸಿ. ರೋಡು ಸಮೀಪದ ಮಿತ್ತಬೈಲು ಎಂಬಲ್ಲಿ ಟಾಪ್ ಆಂಡ್ ಟಾಪ್ ಹೆಸರಿನ […]

News

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಶಾಲಾ ವಾರ್ಷಿಕೋತ್ಸವ  2024-25

ಬಂಟ್ವಾಳ : ಬಂಟ್ವಾಳ ತಾಲೂಕಿನ ಧಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ ಶಾಲಾ ವಾರ್ಷಿಕೋತ್ಸವ 2024-25 ಕಾರ್ಯಕ್ರಮ ದಶಂಬರ್ 13ರಂದು ಶುಕ್ರವಾರ ಸಾಯಂಕಾಲ  ಗಂಟೆ 5 ರಿಂದ ನಡೆಯಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ಯು ವಹಿಸಲಿದ್ದು. ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರಾದ ಬಿ. ರಮನಾಥ ರೈ, ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತೀ ಎಸ್ ರಾವ್, ಉಪಾಧ್ಯಕ್ಷರಾದ ಸುರೇಶ್ ಕನ್ನೋಟ್ಟು, ಪಂಚಾಯತ್ ಸದಸ್ಯರುಗಳಾದ ಹರಿಶ್ಚಂದ್ರ ಕಾಡಬೆಟ್ಟು, […]

News

ವಾಮದಪದವು ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಹೊಲಿಗೆ ತರಬೇತಿ ತರಗತಿ ಉದ್ಘಾಟನ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್  (ರಿ.) ಬಂಟ್ವಾಳ ತಾಲೂಕಿನ ವಗ್ಗ ವಲಯದ ವಾಮದಪದವಿನಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಪ್ರೇರಣ ಜ್ಞಾನವಿಕಾಸ ಕೇಂದ್ರದಲ್ಲಿ 3 ತಿಂಗಳ ಉಚಿತ ಹೊಲಿಗೆ ತರಬೇತಿ ತರಗತಿ ಪ್ರಾರಂಭಿಸಲಾಯಿತು. ಒಂದು ಮಹಿಳೆ ಸ್ವ ಉದ್ಯೋಗ ಕಾರ್ಯಗಳನ್ನು ಮಾಡಿ ಹೇಗೆ ಒಂದು ಮನೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಿಸಿ ಕೊಟ್ಟಿದೆ ಎಂದು ಬಾಲಭವನ ಸೊಸೈಟಿ ನಿಕಟ ಪೂರ್ವ ಅಧ್ಯಕ್ಷರಾದ ಸುಲೋಚನಾ ಜೆ.ಕೆ. ಭಟ್ ಕಾರ್ಯಕ್ರಮ […]

News

ಯುವವಾಹಿನಿ ಬಂಟ್ಟಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 24

ಎಲ್ಲರನ್ನು ಒಳಗೊಳ್ಳುವ ಸಮನ್ವಯ ಮಾದರಿಯ ಚಿಂತನೆ ನಾರಾಯಣ ಗುರುಗಳದ್ದು: ಚೇತನ್ ಮುಂಡಾಜೆ ಬಂಟ್ವಾಳ : ಶಿಕ್ಷಣವು ಮಾನವನನ್ನು ಎಲ್ಲಾ ರೀತಿಯ ಬಂಧನದಿಂದ ಮುಕ್ತಗೊಳಿಸುವ ಏಕೈಕ ದಾರಿಯಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಅಸಮಾನತೆ, ಅನಕ್ಷರತೆ, ಮೂಢನಂಬಿಕೆ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಲ್ಲಿ ನಾರಾಯಣಗುರು ಚಿಂತಿಸಿದರು. ಎಲ್ಲಾ ಮಾನವನೂ ಸಮಾನ, ಮಾನವರೆಲ್ಲರೂ ವಿಕಾಸಗೊಳ್ಳಬೇಕು ಎನ್ನುವ ಕಾಳಜಿ ಅವರಲ್ಲಿತ್ತು. ನಾರಾಯಣಗುರು ಸಂಘಟಿಸಿದ ಚಳುವಳಿಗಳು ಮಾನವ ಪ್ರಗತಿಯ, ಆತ್ಮವಿಕಾಸದ ಧ್ಯೇಯವನ್ನು ಒಳಗೊಂಡಿತ್ತು. ಸಮಾಜ ಸುಧಾರಣೆಗಾಗಿ ನಾರಾಯಣ ಗುರುಗಳು ಆಯ್ದುಕೊಂಡ ದಾರಿ […]

News

ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯಿಂದ ಅಭಿನಂದನಾ ಸಭೆ

ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಶಂಭೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನವಂಬರ್ 19ರಂದು ಜರಗಿದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಿಂದ ಅಭಿನಂದನಾ ಸಭೆಯು  ಶಂಭೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದಶಂಬರ್ 9ರಂದು ಸೋಮವಾರ ಜರಗಿತು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು ಸ್ವಾಗತ ಸಮಿತಿಯ ಕಾರ್ಯಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಸಾಹಿತ್ಯ […]

You cannot copy content of this page