November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸುಳ್ಯ ಬಂಟರ ಸಂಘದ ಪ್ರತಿಭಾ ಪುರಸ್ಕಾರ – ವಿದ್ಯಾರ್ಥಿ ವೇತನ ವಿತರಣೆಯ ಆಮಂತ್ರಣ ಬಿಡುಗಡೆ

ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ವಲಯ ಅಧ್ಯಕ್ಷರುಗಳಾದ ಜೆ.ಕೆ. ರೈ, ಕರುಣಾಕರ ಆಳ್ವ, ಕರುಣಾಕರ ರೈ ಮತ್ತಿತರರು ಉಪಸ್ಥಿತರಿದ್ದರು.

News

ಮೂರು ದಿನಗಳ ವಿದ್ಯಾರ್ಥಿ ಸ್ಪರ್ಧಾ ಹಬ್ಬ ‘ಫಿದಾಕ್ 6.0’  ಸಮಾಪ್ತಿ – ಪ್ರಶಸ್ತಿ ಪ್ರದಾನ

ಮಾಣಿ: ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಪಿಯು ಹಾಗೂ ಪದವಿಗಳನ್ನೊಳಗೊಂಡ ದ‌ಅವಾ ಕಾಲೇಜು ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಃ ಹಮ್ಮಿಕೊಂಡಿದ್ದ ಮೂರು ದಿನಗಳ ವಿದ್ಯಾರ್ಥಿ ಸ್ಪರ್ಧಾ ಹಬ್ಬ ‘ಫಿದಾಕ್ 6.0’ ಸಮಾಪ್ತಿಗೊಂಡಿತು. “ಮಲೈ ಬಾರ್ ಇತಿಹಾಸ- ಭಾಷೆ -ಸಂಸ್ಕೃತಿ” ಎಂಬ ಧ್ಯೇಯ ವಾಕ್ಯದೊಂದಿಗೆ ದಶಂಬರ್ 7 ರಂದು ಸಂಜೆಯಿಂದ ಆರಂಭಗೊಂಡು ದಶಂಬರ್ 9ರ ಸಾಯಂಕಾಲ ತನಕ ಮೂರು ದಿನಗಳಲ್ಲಿ, ಎರಡು ವೇದಿಕೆಗಳಲ್ಲಿ ನಾಲ್ಕು ತಂಡಗಳ ನಡುವೆ ನಡೆದ 107 ವಿವಿಧ ಸ್ಪರ್ಧೆಗಳು ನಡೆಯಿತು. ಸುಮಾರು ಹದಿನೈದು ಮಂದಿ ತಜ್ಞ […]

News

ಮಂಗಳೂರು-ಮೂಡಬಿದ್ರಿ – ಕಾರ್ಕಳ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ

ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜಾ ಸ್ವಾಗತ ಮಂಗಳೂರು – ಮೂಡಬಿದ್ರಿ – ಕಾರ್ಕಳ ಮಾರ್ಗದಲ್ಲಿ ಶಕ್ತಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ಬಸ್ ಸಂಚಾರ ಇಲ್ಲದೇ ತೊಂದರೆ ಉಂಟಾಗಿದ ಬಗ್ಗೆ ಕಳೆದ ಕೆ.ಡಿ.ಪಿ. ಸಭೆಯಲ್ಲಿ ಪ್ರಸ್ತಾಪಿಸಿ, ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಚುಕ್ಕ ಗುರುತಿನ ಪ್ರಶ್ನೆ ಮತ್ತು ಗಮನ ಸೆಳೆಯುವ ಪ್ರಶ್ನೆ ಹಾಕಿರುವ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿ ದಶಂಬರ್ 9ರಂದು ಪ್ರಾದೇಶಿಕ ಆಯುಕ್ತರು 4 ಪರ್ಮಿಟ್ ಗಳನ್ನು ನೀಡಿ, ಬಸ್ ಪ್ರಾಂಭಿಸುವುದಾಗಿ ತಿಳಿಸಿದರು. ಆದರೆ ಬಸ್ […]

News

ಮಹಾಭಾರತ ಸರಣಿ 56 ನೇ ತಾಳಮದ್ದಳೆ ಭಾನುಮತಿ ಕಲ್ಯಾಣ ಮತ್ತು ಸನ್ಮಾನ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 56ನೇ ತಾಳಮದ್ಧಳೆ ಭಾನುಮತಿ ಕಲ್ಯಾಣ ಬೆಳ್ತಂಗಡಿ ಇಳಂತಿಲ ಗ್ರಾಮದ ಬನ್ನೆಂಗಳ ಸಮೃದ್ಧಿ ನಿವಾಸದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸುರೇಶ್ ರಾವ್ ಬಿ., ನಿತೀಶ್ ಕುಮಾರ್ ವೈ., ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್, ಗುಡ್ಡಪ್ಪ ಬಲ್ಯ (ಬಾಹ್ಲಿಕ ರಾಜ) ಶ್ರುತಿ  ವಿಸ್ಮಿತ್ (ವನಚರರು, […]

News

ಮಾಜಿ ಮುಖ್ಯ ಮಂತ್ರಿ ಎಸ್‌.ಎಂ. ಕೃಷ್ಣ ವಿಧಿವಶ – ನಾಳೆ ರಾಜ್ಯಾದ್ಯಂತ ಸರಕಾರಿ ರಜೆ ಘೋಷಣೆ

ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಸದಾಶಿವನಗರದಲ್ಲಿರುವ ಸ್ವಗೃಹದಲ್ಲಿ ಇಂದು ದಶಂಬರ್ 10ರಂದು ನಿಧನರಾಗಿರುವ ಹಿನ್ನಲೆ ಮೂರು ದಿನದಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿ ಸೇರಿದಂತೆ ನಾಳೆ ದಶಂಬರ್ 11ರಂದು ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಎಸ್‌.ಎಂ. ಕೃಷ್ಣ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಡಿ.ಕೆ. ಶಿವಕುಮಾರ್ ಬಳಿಕ ಮಾಧ್ಯಮದ ಜೊತೆ ಅಂತ್ಯಸಂಸ್ಕಾರ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ನಾಳೆ ದಶಂಬರ್ […]

News

ಮರ್ಹೂಂ ಅಶ್ರಫ್ ಕಲಾಯಿ ಸ್ಮರಣಾರ್ಥ ಎಸ್‌ಡಿಪಿಐ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಲಾಯಿ ಬ್ರಾಂಚ್ ಸಮಿತಿಯ ವತಿಯಿಂದ ಮರ್ಹೂಂ ಅಶ್ರಫ್ ಕಲಾಯಿ ಸ್ಮರಣಾರ್ಥ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಮತ್ತು ಕೆ.ಎಂ.ಸಿ. ಆಸ್ಪತ್ರೆ ರಕ್ತನಿಧಿ ಅತ್ತಾವರ, ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 8ರಂದು ಆದಿತ್ಯವಾರ ಎಸ್‌ಡಿಪಿಐ ಕಲಾಯಿ ಬ್ರಾಂಚ್ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ A.R. ಹೌಸ್ ಕಲಾಯಿಯಲ್ಲಿ ನಡೆಯಿತು. ಮದೀನಾ ಜುಮ್ಮಾ ಮಸೀದಿ ಕಲಾಯಿ ಧರ್ಮ ಗುರುಗಳಾದ ಝುಬೈರ್ ಫೈಝಿ […]

News

ಸುರತ್ಕಲ್ ರೈಲ್ವೇ ಬ್ರಿಡ್ಜ್ ರಸ್ತೆ ಸರಿಪಡಿಸದಿದ್ದರೆ ದಶಂಬರ್ 16ಕ್ಕೆ ರಸ್ತೆ ತಡೆ! – ಎಸ್.ಡಿ.ಪಿ.ಐ. ಎಚ್ಚರಿಕೆ

ಸುರತ್ಕಲ್: “ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತಿವೆ. ಇಲ್ಲಿನ ರೈಲ್ವೇ ಮೇಲ್ಸೇತುವೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ವಾಹನ ಸವಾರರು ಸಂಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣವೇ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ, ನಗರಪಾಲಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳು, ರಿಕ್ಷಾ ಕಾರ್ ಚಾಲಕರ ಸಹಕಾರದೊಂದಿಗೆ ದಶಂಬರ್ 16ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ. ಮುಖಂಡ ಯಾಸಿನ್ ಅರ್ಕುಳ ಪತ್ರಿಕಾಗೋಷ್ಟಿಯಲ್ಲಿ […]

News

ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಬರಹ – ಆರೋಪಿ ಬಂಧನ

ಬಂಟ್ವಾಳ : ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಬರಹ ಬರೆದು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ. ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯ ಪೂಜಾರಿ ಎಂಬಾತ ಬಂಧಿತ ಆರೋಪಿ. ಆರೋಪಿ ‌ಜಯ ಪೂಜಾರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಧರ್ಮ ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ ರೀತಿಯಲ್ಲಿ, ಮಹಿಳೆಯರ ಬಗ್ಗೆ ಮಾನಕ್ಕೆ ಕುಂದುಂಟಾಗುವ,  ತೇಜೋವಧೆಯುಂಟಾಗುವ ರೀತಿಯಲ್ಲಿ  ಅವಹೇಳನಕಾರಿಯಾಗಿ ಬರಹ ಬರೆದು ಪೋಸ್ಟ್ […]

News

ಬಿಜೈಯಲ್ಲಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಶಿಶುವಿಹಾರದ ವಾರ್ಷಿಕೋತ್ಸವ -“ನನ್ನ ಬಣ್ಣದ ಜಗತ್ತು”

ಮಂಗಳೂರು ನಗರದ ಲೂರ್ಡ್ಸ್ ಶಿಕ್ಷಣ ಸಂಸ್ಥೆಯು ಶಿಶುವಿಹಾರ ವಿಭಾಗದ ವಾರ್ಷಿಕೋತ್ಸವನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಶಿಶುವಿಹಾರದಲ್ಲಿ ಮಕ್ಕಳ ಪ್ರಗತಿಗೆ ಬೇಕಾದ ಉತ್ತಮ ಶಿಕ್ಷಣ ಮತ್ತು ಚಟುವಟಿಕೆಗಳನ್ನು ನೀಡುತ್ತಾ, ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಮೌಲ್ಯಯುತ ಶಿಕ್ಷಣ ನೀಡಿ ಪ್ರಗತಿ ಪಥದತ್ತ ಸಾಗುತ್ತಲಿದೆ. ಮಕ್ಕಳ ಕ್ರಿಯಾಶೀಲತೆಗೆ ಅಧ್ಯಾಪಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳು ದೇವರು ಕೊಟ್ಟ ಉಡುಗೊರೆ, ಅವರನ್ನು ಸಾಮಾಜಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ತೊಡಗಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ, ಪ್ರೀತಿ ವಾತ್ಸಲ್ಯ […]

You cannot copy content of this page