November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us

ರಾಜ್ಯದ ವಿವಿದೆಡೆಗಳಲ್ಲಿ ನಿಷ್ಟಾವಂತ ಸೇವೆ ಸಲ್ಲಿಸಿ ಪೋಲಿಸ್ ಇಲಾಖೆಗೆ ಗೌರವ ತಂದ ಶಿಸ್ತು ಬದ್ಧ-ಪ್ರಾಮಾಣಿಕ, ಮುಖ್ಯ ಮಂತ್ರಿಗಳ ಪದಕ ವಿಜೇತ ಎಸ್.ಪಿ. ಯತೀಶ್ ಎನ್.

ವಿವಿಧ ಹುದ್ದೆಗಳಲ್ಲಿ ರಾಜ್ಯದ ವಿವಿದೆಡೆ ನಿಷ್ಟಾವಂತ ಸೇವೆ ಸಲ್ಲಿಸಿ, ನೂರಾರು ಪ್ರಕರಣಗಳನ್ನು ಪತ್ತೆ ಹಚ್ಚಿ, ಶಿಸ್ತು ಬದ್ಧ ಹಾಗೂ ಪ್ರಾಮಾಣಿಕ ಪೋಲಿಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾದ ಯತೀಶ್ ಎನ್. ಇವರನ್ನು ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕಗೊಳಿಸಿ ಮಹತ್ತರ ಕೊಡುಗೆ ನೀಡಿದ್ದು ಅತ್ಯಂತ ಸಮಂಜಸವೆನ್ನಬೇಕು. ಮೂಲತಃ ಬೆಂಗಳೂರು ಜಿಲ್ಲೆಯವರಾದ ಯತೀಶ್ ವಿವಿದೆಡೆಗಳಲ್ಲಿ ASP ಯಾಗಿಯೂ ಮತ್ತು S.P. ಯಾಗಿಯೂ ಸೇವೆ ಸಲ್ಲಿಸಿ ಜನ ಮನ್ನಣೆಗಳಿಸಿದವರು. 2016ರ ಕನಾ೯ಟಕ ಕೇಡರ್ ನ IPS ಅಧಿಕಾರಿ […]

ಗುರುವಾಯನ ಕೆರೆಯ ವಿದ್ವತ್ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಾರ್ಯಗಾರ

ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗಿರುವ ಅವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ, ಪರೀಕ್ಷೆಗಳಿಗೆ ತಯಾರಾಗುವ ಬಗ್ಗೆ, ವೈಜ್ಞಾನಿಕ ಸ್ಟಡಿ ಮಾದರಿ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ವಿಸ್ತ್ರುತ ಮಾಹಿತಿಯ ಓರಿಯಂಟೇಷನ್ ಕಾರ್ಯಕ್ರಮ ಇದೇ ಸಪ್ಟಂಬರ್ 22ರ ಭಾನುವಾರ ಬೆಳಿಗ್ಗೆ 11:30ಕ್ಕೆ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಈ ಓರಿಯಂಟೇಷನ್ ನಲ್ಲಿ ನೀಟ್, ಜೆಇಇ, ಸಿಯುಇಟಿ (CUET),   ಐಸಿಎಆರ್ (ICAR) ಸಿಯಿಟಿ (CET), ಹೋಟೆಲ್ […]

ಕರ್ನಾಟಕದಲ್ಲಿ ಶಾಲೆಗಳಿಗೆ ದಸರಾ ರಜೆ ಘೋಷಣೆ

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3ರಿಂದ 20 ತನಕ ದಸರಾ ರಜೆ ಘೋಷಿಸಿದ್ದು, ಇಡೀ ಕರ್ನಾಟಕ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ. ಅಕ್ಟೋಬರ್ 3ರಿಂದ 20ರ ತನಕ ಅಂದರೆ 17 ದಿನಗಳ ಕಾಲ ದಸರಾ ರಜೆ ಸಿಗಲಿದೆ. ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಎಪ್ರಿಲ್ 10ರ ತನಕ ನಡೆಯಲಿದೆ. 2024-25ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ […]

ವಿಶ್ವ ದಾಖಲೆಯ ಪುಟ ಸೇರಿದ ಲೆಜೆಂಡ್ ಡೈರೆಕ್ಟರ್  ಚಿತ್ರ  

ಕತ್ರಿಗುಪ್ಪೆಯಲ್ಲಿರುವ ಪ್ರಯೋಗ್ ಸ್ಟುಡಿಯೋದಲ್ಲಿ ಸಪ್ಟಂಬರ್ 15ರಂದು ಲೆಜೆಂಡ್ ಡೈರೆಕ್ಟರ್ ಚಿತ್ರ ತಂಡದವರು ವಿಶ್ವ ದಾಖಲೆ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಆಯೋಜಿಸಿದ್ದರು. ನವಿಲುಗರಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ನವಿಲುಗರಿ ನವೀನ್ ನಿರ್ಮಾಪಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಟರಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶಾಲ ಸತೀಶ್ ಸಹ ನಿರ್ಮಾಪಕರಾಗಿ ಹಾಗೂ ಪ್ರಣವ್ ಸತೀಶ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರವು “ಹೈ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ಸ್ಥಾನ […]

ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ಸಹಾಯಧನ ಹಸ್ತಾಂತರ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಸಾಲೆತ್ತೂರು ವಲಯ ಸಜಿಪ ಮೂಡ ಕಾರ್ಯಕ್ಷೇತ್ರದ ರೋಹಿತಾಶ್ವ ಪಟ್ಟುಗುಡ್ಡೆ ಇವರು ಕಳೆದ 2 ತಿಂಗಳಿಂದ ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಮಂಜೂರಾದ ಸಹಾಯಧನ ಕ್ರಿಟಿಕಲ್ ಫಂಡ್ ರೂಪಾಯಿ 30 ಸಾವಿರ ಮೊತ್ತದ ಮಂಜೂರಾತಿ ಪತ್ರವನ್ನು ಹಸ್ತಾಂತರ ಮಾಡಲಾಯಿತು.  ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್, ಒಕ್ಕೂಟದ ಅಧ್ಯಕ್ಷ ರಮೇಶ್ ಮೂಲ್ಯ, […]

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ.

ಬಂಟ್ವಾಳ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಟ್ಲ ತಾಲ್ಲೂಕು ಜನಜಾಗೃತಿ ವೇದಿಕೆಯ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಪ್ಟಂಬರ್ 20ರಂದು ಶುಕ್ರವಾರ  ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸುತ್ತಿದೆ. ಯೋಜನೆಯ ಈ ಮಹತ್ತರವಾದ ಕೊಡುಗೆ ವಿದ್ಯಾರ್ಥಿಗಳ ಜೀವನದಲ್ಲಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವಿದ್ಯಾರ್ಥಿಗಳು ಹದಿಹರೆಯದ […]

ಸಹೋದರನನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

  ವಿಟ್ಲ : ಕನ್ಯಾನ ಗ್ರಾಮದ ನಂದರ ಬೆಟ್ಟು ಎಂಬಲ್ಲಿ 2022ರ ಮೇ 11 ರಂದು   ಬಾಳಪ್ಪ ನಾಯ್ಕ ಮತ್ತು ಐತ್ತಪ್ಪ ನಾಯ್ಕ ಎಂಬ ಸಹೋದರರಿಗೆ ಯಾವುದೋ ವಿಷಯದಿಂದ ಮಾತಿಗೆ ಮಾತು ಬೆಳೆದು ಐತ್ತಪ್ಪ ನಾಯ್ಕ ತನ್ನ ತಮ್ಮ ಬಾಳಪ್ಪ ನಾಯ್ಕನನ್ನು ತಲೆಗೆ ಹಾಗೂ ಇತರ ಭಾಗಗಳಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣ ತನಿಖಾಧಿಕಾರಿ ನಾಗರಾಜ್ ಹೆಚ್.ಇ. ಅವರ ನೇತೃತ್ವದಲ್ಲಿ ತನಿಖೆಯನ್ನು […]

ವಿಟ್ಲದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ವಿಟ್ಲ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಟ್ಲ ಇಲ್ಲಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ಇದರ ಆಶಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರಗಿತು. ಅಖಿಲ ಕರ್ನಾಟಕ ಜನಜಾಗತಿ ವೇದಿಕೆ ವಿಟ್ಲ ವಲಯ ಅಧ್ಯಕ್ಷ ಕೃಷ್ಣಯ್ಯ ಬಳ್ಳಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ಷಣಿಕ ಸುಖಗೋಸ್ಕರ ಕೆಟ್ಟ ದುರಭ್ಯಾಸಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿ ಗ್ರಾಮಾಭಿವೃದ್ಧಿ ಯೋಜನೆಯ  ಮೂಲಕ ನೀಡುವ  ಮಾಹಿತಿಯನ್ನು […]

ಅನಂತಾಡಿಯ ನವ ಭಾರತ್ ಯುವಕ ಸಂಘ (ರಿ.) ವತಿಯಿಂದ 6ನೇ ವರ್ಷದ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವಭಾರತ್ ಯುವಕ ಸಂಘ (ರಿ.) ಇದರ ವತಿಯಿಂದ ಸಪ್ಟಂಬರ್ 22ನೇ ಆದಿತ್ಯವಾರ ಅನಂತಾಡಿ ಪಡಿಪೆರೆ ಗದ್ದೆಯಲ್ಲಿ 6ನೇ ವರ್ಷದ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮ ನಡೆಯಲಿರುವುದು.       ಕಾರ್ಯಕ್ರಮದ ಧ್ವಜಾರೋಹಣವನ್ನು ಡಾಕ್ಟರ್ ರೂಪಲತಾ ಕೊಂಗಲಾಯಿ ನೆರವೇರಿಸಲಿದ್ದು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅನಂತಾಡಿ ಶ್ರೀ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮುಖ್ಯಸ್ಥ ನರೇಂದ್ರ ರೈ ನೆಲ್ತೋಟು ಮಾಡಲಿದ್ದಾರೆ. ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಬನ್ನಿಂತಾಯ ಕ್ರೀಡಾ ಜ್ಯೋತಿಯನ್ನು ಪ್ರಜ್ವಲಿಸಿ, ಕ್ರೀಡಾಕೂಟದ ಕೆಸರುಗದ್ದೆಯ […]

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ‘ಪಾಕಿಸ್ತಾನ’ ಹೇಳಿಕೆ – ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೊತ್ತಿಕೊಂಡ ಸುಪ್ರೀಂಕೋರ್ಟ್

ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರು ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ ವಿವಾದಾತ್ಮಕ ಹೇಳಿಕೆಗಳನ್ನು ಒಳಗೊಂಡ ವೀಡಿಯೊ ಕ್ಲಿಪ್ ಗಳನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಈ ಕುರಿತು ವರದಿಯನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಗೆ ಆದೇಶ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠವು ಇಂದು ಈ ಕುರಿತು ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್ […]

You cannot copy content of this page