November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“Worldwide obsession” The song you can’t escape!” LILLY by Vincent Fernandes cascia – Mogachi Lahran

The Konkani music scene has been buzzing with one song that has captured hearts globally—”Lilly” by Vincent Fernandes Cascia.  Released as part of his 11th album, Lilly has achieved a remarkable feat, with over a million collective views across social media platforms. It has become a go-to song for weddings, celebrations and shows, not just […]

News

ದಲಿತ ಚಳುವಳಿಗೆ 50 ರ ಸಂಭ್ರಮ

ಬೆಳ್ತಂಗಡಿ : ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷ ತುಂಬಿದ್ದು 70ರ ದಶಕದ ಆರಂಭದಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರ ನಾಯಕತ್ವ ಮತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮ ತಾಳಿದ ದಲಿತ ಚಳುವಳಿಗೆ ಇದೀಗ ಅರ್ಧ ಶತಮಾನ ತುಂಬುತ್ತಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲಿ ‘ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಆಚರಣಾ ಸಮಿತಿಯ ಅಧ್ಯಕ್ಷ ಬಿ.ಕೆ ವಸಂತ ಮಾಹಿತಿ ನೀಡಿದರು. ಬೆಳ್ತಂಗಡಿಯ […]

News

ನಾಶದ ಹಾದಿಯಲ್ಲಿ ಪಾವೂರು – ಉಳಿಯ ದ್ವೀಪ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆಂಡಾ ಮಂಡಲವಾದ ಕಥೊಲಿಕ್ ಸಭಾ ಸಂಘಟನೆ ಪ್ರತಿಭಟನೆಗೆ ಹರಿದು ಬಂದ ಜನಸಾಗರ

ಮಂಗಳೂರು ಸಪ್ಟಂಬರ್ 27 : ಪಾವುರು ಉಳಿಯ, ರಾಣಿಪುರ ಹಾಗೂ ಉಳ್ಳಾಲ ಹೊಯಿಗೆ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ದ್ವೀಪ ನಾಶವಾಗುತ್ತಿರುವುದರ ವಿರುದ್ಧ ಮಂಗಳೂರು ಧರ್ಮಕ್ಷೇತ್ರದ ವಿವಿಧ ಸಂಘಟನೆಗಳು ಕಥೊಲಿಕ್ ಸಭಾ ಮುಂದಾಳತ್ವದಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ರ್‍ಯಾಲಿಗೆ ಜನಸಾಗರವೇ ಹರಿದು ಬಂದಿದೆ.  ಮಂಗಳೂರಿನ ಬಲ್ಮಠ ವೃತ್ತದಿಂದ ಸಾವಿರಾರು ಮಂದಿ ಜ್ಯೋತಿ, ಮಿಲಾಗ್ರಿಸ್ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಐಕ್ಯತಾ ಮೆರವಣಿಗೆಯಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ಹಾಗೂ ನ್ಯಾಯದ ಬೇಡಿಕೆಗಳನ್ನು ಮುಂದಿಟ್ಟು ಘೋಷಣೆಗಳನ್ನು ಕೂಗುತ್ತಾ ಸಾಗಿ ಬಂದು ಮಿನಿ […]

News

ಗುರುವಾಯನಕೆರೆಯ ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ “ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ – ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮ 

ಬೆಳ್ತಂಗಡಿ ಸಪ್ಟಂಬರ್ 25: ಗುರುವಾಯನಕೆರೆಯ ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ “ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ – ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮ  ನಡೆಯಿತು. ಪಿಯು ವಿದ್ಯಾರ್ಥಿಗಳನ್ನು ಸಾಧಕ ಆಕಾಂಕ್ಷಿಗಳನ್ನಾಗಿ ಪ್ರೇರೆಪಿಸಿ, ಪರಿವರ್ತಿಸಲೆಂದೇ ಆಯೋಜಿಸಲಾಗಿದ್ದ ಈ ವಿಶೇಷ ಪ್ರಯತ್ನಕ್ಕೆ ಅತಿಥಿಯಾಗಿ ಆಗಮಿಸಿದ್ದವರು ಶ್ರೀ ಮಂಜುನಾಥ್ ಎಸ್. ದೇಶದ ಪ್ರತಿಷ್ಠಿತ ಹಾಗೂ ದೇಶದ ನಂಬರ್ 1 ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆ ಏಮ್ಸ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಮಂಜುನಾಥ್ 2020 ರ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ 34ನೇ ರ್‍ಯಾಂಕ್ ಪಡೆದ […]

News

ಗ್ರಾಮಾಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಂಟ್ವಾಳದಲ್ಲೂ ಮುಷ್ಕರ

ಬಂಟ್ವಾಳ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ, ರಾಜ್ಯ ಸಂಘದ ಕಾರ್ಯಕಾರಿಣಿ ಸಭೆ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯಾದ್ಯಂತ ಆಯೋಜಿಸಿದ್ದು, ಅದರಂತೆ ಬಂಟ್ವಾಳದಲ್ಲೂ ಗುರುವಾರ ಸಪ್ಟಂಬರ್ 26ರಂದು ಮುಷ್ಕರ ನಡೆಯಿತು. ಗ್ರಾಮಾಡಳಿತ ಅಧಿಕಾರಿಗಳ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಅನಿಲ್ ಕೆ. ಪೂಜಾರಿ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು, ಪ್ರಾಥಮಿಕ ಶಾಲಾ ಶಿಕ್ಷಕರ […]

News

ಅಲ್ಲಿಪಾದೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ

ಬಂಟ್ವಾಳ : ಸಂತ ಅಂತೋನಿಯವರ ದೇವಾಲಯ ಅಲ್ಲಿಪಾದೆ ಹಾಗೂ ಸ್ತ್ರೀ ಸಂಘಟನೆ ಅಲ್ಲಿಪಾದೆ ಘಟಕ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಸಹಯೋಗದಲ್ಲಿ ಸ್ತ್ರೀ ಆಯೋಗ, ಅರೋಗ್ಯ ಆಯೋಗ ಮತ್ತು ಯುವ ಆಯೋಗ ಇವರ ಸಹಕಾರದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರವು ಅಲ್ಲಿಪಾದೆ ಚರ್ಚ್ ಸೌಹಾರ್ದ ಸಭಾ ಭವನದಲ್ಲಿ ರವಿವಾರ ಸಪ್ಟಂಬರ್ 22ರಂದು ನಡೆಯುತು. ಶಿಬಿರವನ್ನು ಚರ್ಚ್ ಧರ್ಮಗುರು ವಂದನೀಯ ಫಾದರ್ ರೋಬರ್ಟ್ ಡಿಸೋಜ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ […]

News

ನಾರಾಯಣ ಗುರುಗಳು ಜಗದ ಪರಿವರ್ತನೆಯ ಹರಿಕಾರರು : ಪ್ರೇಮನಾಥ್ ಕರ್ಕೇರಾ

ಬಂಟ್ವಾಳ : ತ್ರಿಭಾಷಾ ಸೂತ್ರದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ ಎಂದು ಪ್ರತಿಪಾದಿಸಿ, ಮಹಿಳೆಯರಿಗೆ ಕರಕುಶಲ ಸ್ವಾವಲಂಬಿ ಬದುಕು ಕಟ್ಟುವಲ್ಲಿ ಉತ್ತೇಜನ ನೀಡಿದ ನಾರಾಯಣ ಗುರುಗಳು ಜಗದ ಪರಿವರ್ತನೆಯ ಹರಿಕಾರರು  ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್ ಕರ್ಕೇರಾ ವಿವರಿಸಿದರು. ಅವರು ಬಂಟ್ವಾಳ ತಾಲೂಕಿನ ರಾಯಿ ರಾಕೇಶ್ ಜತ್ತನ್ ಇವರ ಮನೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವ ವಾಹಿನಿ 13ನೇ ಮಾಲಿಕೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ  ಅಧ್ಯಕ್ಷ ದಿನೇಶ್ […]

News

ಪತ್ರಕರ್ತರಿಗೆ ಕರ್ನಾಟಕದಲ್ಲಿ ಉಚಿತ ಬಸ್ ಪಾಸ್ – ಸಿಎಂ ಸಿದ್ದರಾಮಯ್ಯ ಆದೇಶ

ಸಪ್ಟಂಬರ್ 26: ಪತ್ರಕರ್ತರ ದಶಕಗಳ ಬೇಡಿಕೆಯಾದ ಉಚಿತ ಬಸ್ ಪಾಸ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಆದೇಶ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಆ ಭರವಸೆ ಇಂದು ಈಡೇರಿದಂತೆ ಆಗಿದೆ.   ಉಚಿತ ಬಸ್ ಪಾಸ್ ಬೇಡಿಕೆಯನ್ನು ದಡ ಮುಟ್ಟಿಸುವಲ್ಲಿ ಯಶಸ್ವಿಯಾದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರ ನಿರಂತರ ಶ್ರಮಕ್ಕೆ ಸಾರ್ಥಕತೆ ದೊರೆತಿದೆ ಎಂದು ಸಿಎಂ ಮಾಧ್ಯಮ ಹೇಳಿಕೆ ನೀಡಿದ್ದಾರೆ. ವಾರ್ತಾ ಮತ್ತು […]

News

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 26ನೇ ವರ್ಷದ ಭಜನಾ ಕಮ್ಮಟ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ರಾಘವೇಂದ್ರ ಆಚಾರ್ಯ, ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರು ಹಾಗೂ ಶ್ರೀಮತಿ ವಿದುಷಿ ಅನುಸೂಯ ಪಾಠಕ್, ಉಜಿರೆ ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಕಮ್ಮಟಕ್ಕೆ ಆಗಮಿಸಿದ ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು. ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ […]

News

Saint Philomena College Puttur Receives Autonomous Status

Puttur  September 25 : Saint Philomena College Puttur, a proud beacon of academic excellence, sports and cultural achievements in the region, has officially been granted autonomous status for the academic year 2024-25. The joyous announcement was made by the Correspondent of the college Rev. Fr Lawrence Mascarenhas, on Tuesday during an official address to the […]

You cannot copy content of this page