November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೈಸೂರು ಧರ್ಮಕ್ಷೇತ್ರದಿಂದ ಸನ್ಮಾನ ಸ್ವೀಕರಿಸಿದ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಮೈಸೂರು ಧರ್ಮಕ್ಷೇತ್ರದ ಕಥೊಲಿಕ್ ಎಸೋಶಿಯೇಷನ್ ಆಫ್ ಮೈಸೂರು ವತಿಯಿಂದ ಸೈಂಟ್ ಜೋಸೆಫ್ ಕೆಥೆಡ್ರಲ್ ಮೈಸೂರಿನಲ್ಲಿ ಇಂದು ಸಪ್ಟಂಬರ್ 29ರಂದು ಭಾನುವಾರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ AICU ಚುನಾವಣೆಯಲ್ಲಿ ಬಹು ಮತಗಳಿಂದ ರಾಜ್ಯಾಧ್ಯಕ್ಷರಾಗಿ ಚುನಾಯಿತರಾಗಿ ಬಂದ ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರಿಗೆ ಮೈಸೂರು ಧರ್ಮಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಡಿಸೋಜರವರು ನನಗೆ ಇದೊಂದು ಜನರ ಸೇವೆ ಮಾಡಲು ದೇವರು ಕೊಟ್ಟ […]

News

ಅಜಿಲಮೊಗರು : ಎಸ್ಕೆಎಸ್ಸೆಸ್ಸೆಫ್  ಶಾಖೆಯಿಂದ “ಇಶ್ಕೇ ರಬೀಅ್”

ಬಂಟ್ವಾಳ : ಪ್ರವಾದಿ ಮುಹಮ್ಮದ್ (ಸ.ಅ.) ರವರ ಜನ್ಮದಿನಾಚರಣೆ ಪ್ರಯುಕ್ತ ಎಸ್ಕೆಎಸ್ಎಸ್ಎಫ್ ಅಜಿಲಮೊಗರು ಶಾಖೆಯಿಂದ “ಇಶ್ಕೇ ರಬೀಅ್” ಕಾರ್ಯಕ್ರಮವು ಅಜಿಲಮೊಗರು ನೇಲ್ಯಪಲ್ಕೆಯ ಶಂಸುಲ್ ಉಲಮಾ ವೇದಿಕೆಯಲ್ಲಿ ಜರುಗಿತು‌. ಅಜಿಲಮೊಗರು ಸಯ್ಯದ್ ಹಂಝ ತಂಞಳ್ ರವರ ನೇತೃತ್ವದಲ್ಲಿ ಬೃಹತ್ ಮೌಲಿದ್ ಮಜ್ಲಿಸ್ ನಡೆಯಿತು. ಇಸ್ಮಾಯಿಲ್ ಯಮಾನಿಯವರು ಮಜ್ಲಿಸುನ್ನೂರು ನಡೆಸಿಕೊಟ್ಟರು. ಮುಹಮ್ಮದ್ ಬಶೀರ್ ಮುಸ್ಲಿಯಾರ್ ರವರ ಮಾರ್ಗದರ್ಶನದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಕಾರ್ಯಕ್ರಮ ನಡೆಯಿತು. ಸಮಾರೋಪ ಸಮಾರಂಭವನ್ನು ಇರ್ಶಾದ್ ದಾರಿಮಿ ಮಿತ್ತಬೈಲ್ ಉದ್ಘಾಟಿಸಿದರು. ಅಜಿಲಮೊಗರು ಮಸೀದಿ ಖತೀಬ್ ತ್ವಾಹಾ […]

News

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಗಳ ಒಕ್ಕೂಟಕ್ಕೆ  ವಿಕಲಚೇತನ ನೌಕರರ ಸಂಘ ಸೇರ್ಪಡೆ ; ರಾಜ್ಯಾಧ್ಯಕ್ಷ ಜೀವನ್ ಮಾರ್ಟಿಸ್

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿಕಲಚೇತನ ನೌಕರರ ಸಂಘಕ್ಕೂ ಸದಸ್ಯ ಸಂಘಟನೆಯಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜೀವನ್ ಸಂತೋಷ್ ಮಾರ್ಟಿಸ್ ತಿಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಇವರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಲಾಗಿದ್ದು, ಮನವಿಯನ್ನು ಸ್ವೀಕರಿಸಿದ ಚಂದ್ರಶೇಖರ್ ರವರು ಸದ್ರಿ ಸಂಘಟನೆಯನ್ನು ಒಕ್ಕೂಟದ ಜೊತೆ ವಿಲೀನಗೊಳಿಸಲು ಒಪ್ಪಿಕೊಂಡಿರುತ್ತಾರೆ. ಈ ವಿಷಯಕ್ಕೆ […]

News

ಮಂಗಳೂರು – ಪಡೀಲ್ ನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಂದು ಉದ್ಘಾಟನೆ, ಜನಪ್ರಿಯ ಸಮ್ಮಿಲನ

ಮಂಗಳೂರು ನಗರದ ಪಡೀಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಯ ಉದ್ಘಾಟನಾ ಸಮಾರಂಭ ಇಂದು ಸಪ್ಟಂಬರ್ 29ರಂದು ಸಂಜೆ 4:00 ಗಂಟೆಗೆ ನಡೆಯಲಿದೆ. ಕರ್ನಾಟಕ ವಿಧಾನ ವಿಧಾನ ಸಭಾ ಸ್ಪೀಕರ್ ಸನ್ಮಾನ್ಯ ಯು. ಟಿ. ಖಾದರ್ ನೂತನ ಆಸ್ಪತ್ರೆಯನ್ನು ಉದ್ಘಾಟಿಸಲಿರುವರು.  ಆಸ್ಪತ್ರೆಯ ವಿಶೇಷ ವಿಭಾಗ ‘ಬರ್ತ್ ಆ್ಯಂಡ್ ಬ್ಲೂಮ್’: ತಾಯಿ ಮತ್ತು ಮಗುವಿನ ವಿಶೇಷ ಆರೈಕೆಯ ವಿಭಾಗವನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್‌ ಪ್ರಕಾಶ್ ರುದ್ರಪ್ಪ ಪಾಟೀಲ್ ಉದ್ಘಾಟಿಸುವರು. ಮಂಗಳೂರು ಶಾಸಕ ವೇದವ್ಯಾಸ್‌ […]

News

ಮಂಗಳೂರಿನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಪ್ಟಂಬರ್ 29 ರಂದು ಉದ್ಘಾಟನೆ

ಮಂಗಳೂರು : ನಗರದ ಪಡೀಲ್ ನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಹಾಗೂ ಜನಪ್ರಿಯ ಸಮ್ಮಿಲನವು ಸಪ್ಟಂಬರ್ 29ರಂದು ಸಂಜೆ 4:00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಜನಪ್ರಿಯ ಫೌಂಡೇಷನ್ ಚೇರ್ಮನ್ ಡಾ. ಅಬ್ದುಲ್ ಬಶೀರ್ ವಿ.ಕೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

News

ಸ್ಥಳೀಯ ಸಂಸ್ಥೆಗಳ MLC ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಹೆಸರು ಮುಂಚೂಣಿಯಲ್ಲಿ

MLC Election ಮಂಗಳೂರು: ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಎಂಎಲ್ಸಿ (MLC Election) ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಕಾಶ್ ಶೆಟ್ಟಿ ತುಂಬೆ ಇವರ ಹೆಸರು ಮುಂಚೂಣಿಗೆ ಬಂದಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ಶೆಟ್ಟಿ ತುಂಬೆ ಹಾಗೂ ಕಾರ್ಕಳದ ಕಾಂಗ್ರೆಸ್ ನಾಯಕ ಡಿ. ಆರ್. ರಾಜು ಹೆಸರು ಮುಂಚೂಣಿಯಲ್ಲಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಆದರೆ ಇನ್ನಷ್ಟು ಹೆಸರುಗಳು […]

News

ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಗಿಟ್ಟಿಸಿಕೊಂಡ ಪ್ರಿಮಲ್ ನಿಶ್ಮಾ ರೊಡ್ರಿಗಸ್

ನಾರಾವಿ: ಬೆಂಗಳೂರು ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆಯ ಅನಾಲಿಟಿಕಲ್ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಿಮಲ್ ನಿಶ್ಮಾ ರೊಡ್ರಿಗಸ್ ಇವರು ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ. ಇವರು ಸಪ್ಟೆಂಬರ್ 27ರಂದು ನಡೆದ ಘಟಿಕೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ನಾರಾವಿ ನಿವಾಸಿಯಾಗಿರುವ ಇವರು ಹೊಸ್ಮಾರು ಕರ್ನಾಟಕ ಪಬ್ಲಿಕ್ ಸ್ಕೂಲ್  ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ಮಾರ್ಗರೆಟ್ ಪಿಂಟೋ ಹಾಗೂ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಮಡಂತ್ಯಾರಿನ ಇತಿಹಾಸ ವಿಭಾಗದ ಉಪನ್ಯಾಸಕ ವಿನ್ಸೆಂಟ್ ರೊಡ್ರಿಗಸ್ […]

News

ಕಿನ್ನಿಗೋಳಿ – ಪದ್ಮನ್ನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯವರಿಗೆ ಐಕ್ಯ ವೇದಿಕೆ ಕೊಡಾಜೆ ವತಿಯಿಂದ ಅಭಿನಂದನೆ

ಕಿನ್ನಿಗೋಳಿ ಸಪ್ಟಂಬರ್ 28  : ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆಯ ‘ಐಕ್ಯ ವೇದಿಕೆ ಕೊಡಾಜೆ’ ಇದರ ವತಿಯಿಂದ ಐಕ್ಯ-ಭಾವೈಕ್ಯತೆಯನ್ನು ಮೈಗೂಡಿಸಿಕೊಂಡು ಸರ್ವ ಧರ್ಮೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುತ್ತಿರುವ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ,  ಪದ್ಮನ್ನೂರು – ಕಿನ್ನಿಗೋಳಿ ಇದರ ಅದ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವು ಭಾನುವಾರ ಸಪ್ಟಂಬರ್ 29  ಸಂಜೆ ಸಂಜೆ 5.30ಕ್ಕೆ  ಪದ್ಮನ್ನೂರಿನ ಸಾರ್ವಜನಿಕ ಯಕ್ಷಗಾನ ಬಯಲಾಟ ಸುವರ್ಣ ಮಹೋತ್ಸವ ಸಭಾ ಭವನದಲ್ಲಿ ನಡೆಯಲಿದೆ. ಈ […]

News

Snehalaya De addiction centre to be inaugurated on October 02

For the past 15 years, the Snehalaya Charitable Trust has been dedicated to establishing an Ashram for individuals with mental illnesses near Pavoor in Manjeswara. The organization has provided them with shelter, medical care and rehabilitation, successfully assisting more than 1,300 residents. With government recognition and public praise, the services rendered by the organization have […]

News

ವಿಟ್ಲ ಕುದ್ದುಪದವು ಲೈಂಗಿಕ ದೌರ್ಜನ್ಯ ಆರೋಪಿ ಅಂಗಡಿಗೆ ಬೆಂಕಿ

ವಿಟ್ಲ : ಅಂಗಡಿಗೆ ತೆರಳಿದ್ದ ಅಪ್ರಾಪ್ತ ಬಾಲಕಿಗೆ ದೌರ್ಜನ್ಯ ಎಸೆಗಿದ್ದ ಆರೋಪಿಯ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ವಿಟ್ಲದಲ್ಲಿ ನಡೆದಿದೆ.   ಕೆಲವು ದಿನಗಳ ಹಿಂದೆ ಕುದ್ದುಪದವು ನಿವಾಸಿ ಅಶ್ರಫ್ ಎಂಬಾತ ಅಂಗಡಿಗೆ ತೆರಳಿದ್ದ ಬಾಲಕಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಅಶ್ರಫ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೇವಲ ಒಂದು ವಾರದಲ್ಲಿ ಆರೋಪಿಗೆ ಜಾಮೀನು […]

You cannot copy content of this page