ನೇರಳಕಟ್ಟೆ ಮಿಲಾದ್ ಕಮಿಟಿ ವಾರ್ಷಿಕ ಮಹಾಸಭೆ, ನೂತನ ಅಧ್ಯಕ್ಷರಾಗಿ ಅಬ್ಬಾಸ್ ನೇರಳಕಟ್ಟೆ
ಬಂಟ್ವಾಳ : ಮಿಲಾದ್ ಕಮಿಟಿ ನೇರಳಕಟ್ಟೆ ಇದರ ವಾರ್ಷಿಕ ಮಹಾಸಭೆಯು ನೇರಳಕಟ್ಟೆ ಬದ್ರಿಯಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು. ಕಮಿಟಿ ಅಧ್ಯಕ್ಷ ನವಾಝ್ ಭಗವಂತ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮಾತನಾಡಿ ಸಂಘ ಸಂಸ್ಥೆಗಳ ಪುರೋಗತಿಯಲ್ಲಿ ಸರ್ವ ಸದಸ್ಯರ ಸಹಕಾರ ಅತೀ ಅಗತ್ಯ, ಸಂಘದಲ್ಲಿ ಸ್ಥಾನವನ್ನು ಅಲಂಕರಿಸಿದವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು. ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ […]













