November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಾರಾಯಣಗುರುಗಳು ಸಾತ್ವಿಕ ಚಿತ್ತದ ಸಮಾಜ ಸುಧಾರಕರು : ಪ್ರೇಮನಾಥ್ ಕರ್ಕೇರಾ

ಬಂಟ್ವಾಳ : ಅಹಿಂಸಾ ತತ್ವವನ್ನು ಪಾಲಿಸಲು ಪ್ರೇರಕರಾಗಿ, ಅಸ್ಪೃಶ್ಯತೆ ನಿವಾರಣೆಗೆ ಹೋರಾಡುತ್ತಾ, ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಗುರುಗಳು, ಓರ್ವ ಸಾತ್ವಿಕ ಚಿತ್ತದ ಸುಧಾರಕರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್ ಕರ್ಕೇರಾ ತಿಳಿಸಿದರು. ಗುರುವಾರ ಅಕ್ಟೋಬರ್ 3ರಂದು ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಸದಾನಂದ ಎನ್. ಪೂಜಾರಿ ಇವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ 14ನೇ ಮಾಲಿಕೆಯಲ್ಲಿ ಗುರುಗಳ ಸಂದೇಶಗಳನ್ನು ನೀಡಿ ಅವರು ಮಾತನಾಡಿದರು. […]

News

ಬಂಟ್ವಾಳದಲ್ಲಿ ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ : ವಿದ್ಯಾರ್ಥಿಗಳು, ಯುವಸಮಾಜ ಸಿವಿಲ್ ಸರ್ವಿಸ್ ಪರೀಕ್ಷೆಗೆ ಶ್ರಮವಹಿಸಿ ತರಬೇತು ಪಡೆಯುವುದರ ಜೊತೆಗೆ ಅದರಲ್ಲಿ ತೇರ್ಗಡೆ ಹೊಂದಿ ದೇಶದ ಉನ್ನತ ಹುದ್ದೆಯಲ್ಲಿ ಕಾಣುವಂತಾಗಬೇಕು. ಯುವಸಂಪತ್ತು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ದಾಯ್ಜಿವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಹೇಳಿದರು. ಅವರು ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಂಟ್ವಾಳ […]

News

ಅಲ್ಲಿಪಾದೆ ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಮಹಮ್ಮದ್ ಮುಸ್ತಾಕ್ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಮಂಗಳೂರಿನ ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ಅಲ್ಲಿಪಾದೆ – ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಮಹಮ್ಮದ್ ಮುಸ್ತಾಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿ ಮಹಮ್ಮದ್ ಮುಸ್ತಾಕ್ ರಾಜ್ಯ ಮಟ್ಟದಲ್ಲಿ ವಿಜೇತನಾಗಿ ಮುಂದೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆ ಹಾಗೂ ನಾಡಿಗೆ ಕೀರ್ತಿ ತರುವಂತಾಗಲಿ ಎಂದು ಶಾಲಾ ಸಂಚಾಲಕಿ […]

News

ಬಂಟ್ವಾಳದಲ್ಲಿ ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ

ಬಂಟ್ವಾಳ : ಮಾತೃ ಭಾಷೆಯಲ್ಲಿ ಸಂವಹನ ಕಡಿಮೆಯಾದಾಗ ಮೂಲ ಪದಗಳು ಕಣ್ಮರೆಯಾಗಿ ಭಾಷಾ ಸಂರಚನೆಗೆ ಧಕ್ಕೆಯಾಗುತ್ತದೆ, ಆ ಮೂಲಕ ಭಾಷೆ ಅಳಿವಿನ ಹಾದಿ ಹಿಡಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಸ್. ಅಭಿಪ್ರಾಯಪಟ್ಟರು. ಅವರು ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಗುರುವಾರ ಅಕ್ಟೋಬರ್ 3ರಂದು ಬ್ರಹ್ಮರಕೂಟ್ಲು ಸುಹಾ ನಿವಾಸದಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷೆಯ ವೈಶಿಷ್ಟ್ಯತೆಗಳ […]

News

ಬೈಕ್ ಅಪಘಾತದಲ್ಲಿ ಸೂರಿಕುಮೇರು ನಿವಾಸಿ ಮೃತ್ಯು

ಬಂಟ್ವಾಳ :  ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಬುಧವಾರ ಅಕ್ಟೋಬರ್ 2ರಂದು ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ‌ಘಟನೆ ಇಂದು ನಡೆದಿದೆ. ಸೂರಿಕುಮೇರು ನೆಲ್ಲಿ ನಿವಾಸಿ ಸರ್ಪಾಝ್ (33) ಮೃತಪಟ್ಟ ವ್ಯಕ್ತಿಯಾಗಿದ್ದು, ಸಹಸವಾರಿಣಿ ವಿದ್ಯಾರ್ಥಿ ಜಾಸ್ಮೀನ್ (18) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸರ್ಪಾಝ್ ಇವರು ತಂಗಿಯನ್ನು ದೇರಳಕಟ್ಟೆ ಕಾಲೇಜಿಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಮೆಲ್ಕಾರ್ ನಿಂದ […]

News

International Clown Festival in Mangaluru from 4th, 5th & 6th October – Celebrating 10 years of laughter!

October 03 : The International Clown Festival is here! Prepare for a fantastic time filled with laughter and entertainment from a stellar lineup of award-winning clowns. Enjoy interactive performances, engaging workshops, and a variety of activities designed to delight audiences of all ages. A theatre show with 25 Clowns from 10 Countries and 120 minutes […]

News

ಬಣ್ಣ ಬೆರಗಿನ ಸಾಂಪ್ರದಾಯಿಕ ನೆಲೆಗಟ್ಟಿನ ಹಬ್ಬ – ಕರಮ್ ಉತ್ಸವ ಧಾರ್ಮಿಕ ಸಭೆಯಲ್ಲಿ ವಂದನೀಯ ಫಾದರ್ ಅಬ್ರಹಾಂ ಡಿಸೋಜ ಬಣ್ಣನೆ.

ಕರಮ್ ಹಬ್ಬವು ಬಣ್ಣ ಬೆರಗಿನ ಮತ್ತು ಸಾಂಪ್ರದಾಯಿಕ ನೆಲೆಗಟ್ಟು ಹೊಂದಿದ ಉತ್ಸವವಾಗಿತ್ತು ಎಂದು ಮುಲ್ಕಿಯ ಡಿವೈನ್ ಕಾಲ್ ರೆಟ್ರೀಟ್ ಸೆಂಟರ್ ನ ನಿರ್ದೇಶಕ ವಂದನೀಯ ಫಾದರ್ ಅಬ್ರಹಾಂ ಡಿಸೋಜ ಹೇಳಿದರು. ಮಂಗಳೂರು ಮತ್ತು ಸುತ್ತಮುತ್ತಲಿನ 300 ಚೋಟಾ ನಾಗ್ಪುರ್ ವಲಸೆ ಆದಿವಾಸಿಗಳು ಮುಲ್ಕಿ ಕಾರ್ನಾಡು ಡಿವೈನ್ ಕಾಲ್ ರೆಟ್ರೀಟ್ ಸೆಂಟರ್ ನಲ್ಲಿ ಭಾನುವಾರ ತಮ್ಮ ಪಾರಂಪರಿಕ ಕರಮ್ ಹಬ್ಬವನ್ನು ನೃತ್ಯ, ಹಾಡು ಮತ್ತು ಆದಿವಾಸಿ ಸಂಪ್ರದಾಯಗಳೊಂದಿಗೆ ಆಚರಿಸಿದರು. ಮಂಗಳೂರು ಕೇಂದ್ರೀಕೃತಗೊಳಿಸಿ ವಿವಿಧ ಪ್ರದೇಶಗಳಲ್ಲಿ ಚೋಟಾ ನಾಗ್ಪುರ್ ಆದಿವಾಸಿ […]

News

ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಡ್ಡಲಕಾಡು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ :. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ವತಿಯಿಂದ ಬಂಟ್ವಾಳ ತಾಲೂಕಿನ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದಡ್ಡಲಕಾಡು ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮಂಗಳವಾರ ಜರಾಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಹ ಶಿಕ್ಷಕಿ ಕವಿತಾ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರೊನಾಲ್ಡ್ ಡಿಸೋಜ ಮಾತನಾಡಿ ದುಶ್ಚಟದಿಂದ ಆರೋಗ್ಯ ಸಮಸ್ಯೆ ಆಗೋದರ ಜೊತೆಗೆ ಮಿತವಾಗಿ ಟಿವಿ, […]

News

ಒಂದು ಶಾಲೆಯ ಉಳಿವಿನಲ್ಲಿ ಆ ಶಾಲೆಯ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ತಂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ – ಸಂಗೀತ ಶರ್ಮಾ ಪಿ. ಜಿ.

ಬಂಟ್ವಾಳ : ಯಾವುದೇ ಒಂದು ಶಾಲೆ ಉಳಿವಿನಲ್ಲಿ ಆ ಶಾಲೆಯ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ತಂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ರಾಜ್ಯಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತ ಮಜಿ ವೀರಕಂಭ ಶಾಲಾ ಶಿಕ್ಷಕಿ ಸಂಗೀತ ಶರ್ಮ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಏಕೈಕ ಸರಕಾರಿ ಪ್ರಾಥಮಿಕ ಶಾಲೆ ಕಾರ್ಲ ಇಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ಕಾರ್ಲ ಶಾಲಾ ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಕರೆದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಶಾಲಾ ಶೈಕ್ಷಣಿಕ […]

News

ಕಲ್ಲಡ್ಕದ ಮುಹಿಯುದ್ದೀನ್ ಜುಮ್ಮಾ ಮಸೀದಿ ಮಹಾಸಭೆ: ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ ಆಯ್ಕೆ

ಬಂಟ್ವಾಳ : ಕಲ್ಲಡ್ಕದ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮಹಾ ಸಭೆಯು  ಇಲ್ಲಿನ ಮುನೀರುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು. ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಸ್ಥಳೀಯ ಖತೀಬ್ ಕೆ.ಎಸ್. ಉಸ್ಮಾನ್ ದಾರಿಮಿ ಇವರು ದುಹಾಶೀರ್ವಚನಗೈದರು. ಕಾರ್ಯದರ್ಶಿ ಹಾಜಿ ಅಬೂಬಕ್ಕರ್ ಸಾಹೇಬ್ ವಾರ್ಷಿಕ ವರದಿ ಮಂಡಸಿದರು.  ಸದಸ್ಯ ಆಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು. ಇದೇ ವೇಳೆ ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ ಕೋಡಿ, […]

You cannot copy content of this page