November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇಶದ ಎಲ್ಲಾ ವಕೀಲರ ಸಂಘಗಳ ಮೂಲಕ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ ಬಿಡುಗಡೆ – ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ

ನ್ಯಾಯಾಂಗದ ಸೇವೆಯನ್ನು ಎತ್ತರಕ್ಕೆ ಏರಿಸುವ ಮತ್ತು ವಕೀಲರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ ನೀಡುವಂತೆ ಎಲ್ಲ ಹಿರಿಯ ವಕೀಲರು ಮತ್ತು ವಕೀಲ ಸಂಸ್ಥೆಗಳಿಗೆ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ. ದೇಶದ ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತಿನ ಮೂಲಕ ಎಲ್ಲಾ ವಕೀಲರ ಸಂಘಗಳಿಗೆ ಭಾರತೀಯ ವಕೀಲರ ಸಂಘ ಪತ್ರ ಬರೆದಿದೆ. ರಿಟ್ ಅರ್ಜಿ 10159/2024ರ ಪ್ರಕರಣದಲ್ಲಿ ದೆಹಲಿಯ ಹೈಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಭಾರತೀಯ ವಕೀಲರ ಪರಿಷತ್ತು ಈ ಮಾರ್ಗಸೂಚಿ […]

News

ನವರಾತ್ರಿ ಸಂಧರ್ಭ ವೇಷ ಹಾಕಿ ನಿಧಿಸಂಗ್ರಹ ಮಾಡಿ ಬುಡ್ ಚಿಯಾರಿ ಸಿಂಡ್ರೋಮ್ ಖಾಯಿಲೆ ಇಂದ ಬಳಲುತಿರುವ ಮಗುವಿಗೆ ಹಸ್ತಾಂತರ

ಬಂಟ್ವಾಳ : ಬಂಟ್ವಾಳ ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ರಾಯಪ್ಪಕೋಡಿ ಕಲ್ಲಡ್ಕ ವತಿಯಿಂದ 2 ನೇ ವರ್ಷದ ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂಧರ್ಭ ದಲ್ಲಿ ವೇಷ ಹಾಕಿ ನಿಧಿಸಂಗ್ರಹ ಮಾಡಿ ಬುಡ್ ಚಿಯಾರಿ ಸಿಂಡ್ರೋಮ್ ಖಾಹಿಲೆ ಇಂದ ಬಳಲುತಿರುವ ಪುತ್ತೂರಿನ ರಂಜನ್ ಎನ್ನುವವರ 3 ವರ್ಷದ ಮಗು ಅಗಸ್ತ್ಯ ಕೃಷ್ಣನಿಗೆ ರೂಪಾಯಿ 37000/- ನೀಡಲಾಯಿತು. ಈ ಪುಣ್ಯ ಕಾರ್ಯದಲ್ಲಿ ಸಮಿತಿಯ ಸದಸ್ಯರಾದ ದೀಕ್ಷಿತ್ ಆಚಾರ್ಯ, ಮೋಹಿತ್ ಆಚಾರ್ಯ, ರಕ್ಷಿತ್ ಆಚಾರ್ಯ, ಶ್ರೀಧರ್ ಆಚಾರ್ಯ, ಹರಿಪ್ರಸಾದ್, […]

News

ಯಕ್ಷ ಭಾರತಿ ಸಂಸ್ಥೆಯ ಸೇವಾ ಕಾರ್ಯ ಅಭಿನಂದನೀಯ – ಮೋಹನ್ ಕುಮಾರ್ ಕೆ. 

ಯಕ್ಷ ಭಾರತಿ (ರಿ.) ಕನ್ಯಾಡಿ ಇದರ ದಶಮಾನೋತ್ಸವದ ಪ್ರಯುಕ್ತ ತುಳು ಶಿವಳ್ಳಿ ಸಭಾ (ರಿ.) ಬೆಳ್ತಂಗಡಿ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಜುಲೈಕಾ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವು ಕನ್ಯಾಡಿಯ ಹರಿಹರಾನುಗ್ರಹ  ಕಲ್ಯಾಣ ಮಂಟಪದಲ್ಲಿ ಜರಗಿತು.  ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮತ್ತು ಲಕ್ಷ್ಮಿ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ […]

News

ಕೊಡಾಜೆ ಐಕ್ಯ ವೇದಿಕೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಬಂಟ್ವಾಳ : ಕೊಡಾಜೆ ಐಕ್ಯ ವೇದಿಕೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಬಳಿಯಿಂದ ಗಣೇಶ ನಗರ ಬಸ್ ನಿಲ್ದಾಣದ ತನಕ ಇತ್ತೀಚೆಗೆ  ನಡೆಯಿತು. ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಮಾತನಾಡಿ, ಸ್ವಚ್ಚತಾ ಕಾರ್ಯಕ್ರಮದ ಮೂಲಕ ನೀಡುವ ಸಂದೇಶ ಮಹತ್ತರವಾದುದು, ಪ್ರತಿಯೊಬ್ಬರೂ ತಮ್ಮ ಮನೆ, ವಠಾರ ಮತ್ತು ಪರಿಸರದಲ್ಲಿ ಸ್ವಚ್ಚತೆ ಬಗ್ಗೆ ಕಾಳಜಿ ವಹಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.    ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಣಿ ಗ್ರಾಮ […]

News

ಬೆಳಾಲು ಗ್ರಾಮದ ಅನಂತೋಡಿ ದೇವಸ್ಥಾನದ ವಠಾರದಲ್ಲಿ ಯುವಸಿರಿ – ರೈತ ಭಾರತದ ಐಸಿರಿ ಕಾರ್ಯಕ್ರಮ

ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಘಟಕದ ಸುವರ್ಣಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಕಾಲೇಜಿನ ಕ್ರೀಡಾಸಂಘ, ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿಕ್ಲಬ್, ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಅನಂತೋಡಿ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 20ರಂದು ಭಾನುವಾರ ದೇವಸ್ಥಾನದ ವಠಾರದಲ್ಲಿರುವ ನಾಲ್ಕೂವರೆ ಎಕ್ರೆ ಗದ್ದೆಯಲ್ಲಿ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕದ ಸ್ವಯಂಸೇವಕರು ಹಾಗೂ ಎಸ್.ಡಿ.ಎಂ. ಕ್ರೀಡಾ ಸಂಘದ ಸದಸ್ಯರು “ಯುವಸಿರಿ, ರೈತ ಭಾರತದ ಐಸಿರಿ” ಕಾರ್ಯಕ್ರಮದಡಿಯಲ್ಲಿ […]

News

ಸೂರಿಕುಮೇರುವಿನಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ – ನೂರಾರು ಪ್ರತಿಭೆಗಳ ಕಲರವ

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ “ನಿರೀಕ್ಷೆಗಳ ನೀಲ ನಕ್ಷೆ” ಎಂಬ ಸ್ಲೋಗನ್ ನೊಂದಿಗೆ ಸಾಹಿತ್ಯೋತ್ಸವ ಕಾರ್ಯಕ್ರಮವು ಇದೇ ಅಕ್ಟೋಬರ್ 20ರಂದು ಆದಿತ್ಯವಾರ ಸೂರಿಕುಮೇರು ಮಸೀದಿ ಬಳಿಯ ಆಟದ ಮೈದಾನದಲ್ಲಿ ನಡೆಯಲಿದೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ದುಆ ನಡೆಸಿಕೊಡಲಿರುವರು. ಬಂಡಾಡಿ ಮುಹಮ್ಮದ್ ಹಾಜಿ ಸೂರಿಕುಮೇರು, ಪತ್ರಕರ್ತ ಲತೀಫ್ ನೇರಳಕಟ್ಟೆ ಧ್ವಜಾರೋಹಣ ಮಾಡಲಿರುವರು. ಬಳಿಕ ಮಾಣಿ ಸೆಕ್ಟರ್ ವ್ಯಾಪ್ತಿಯ ಪಾಟ್ರಕೋಡಿ, ಮಿತ್ತೂರು, ಸೂರ್ಯ, ನೇರಳಕಟ್ಟೆ, […]

News

ಎಸಿಪಿಐ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾ ಪೀಠದ ವತಿಯಿಂದ (ಸಿಐಸಿ) 42ನೇ ವಾರ್ಷಿಕ ಸಂಶೋಧನಾ ಸಮ್ಮೇಳನದ ಆಯೋಜನೆ

 ಮಂಗಳೂರು ಅಕ್ಟೋಬರ್ 15 : ಭಾರತೀಯ ಕ್ರೈಸ್ತ ತತ್ತ್ವಶಾಸ್ತ್ರೀಯ ಚಿಂತಕರ ಒಕ್ಕೂಟ (ಎಸಿಪಿಐ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾಪೀಠದ (ಸಿಐಸಿ) ಸಹಯೋಗದಲ್ಲಿ, ಅಕ್ಟೋಬರ್ 19-21ರವರೆಗೆ ಮಂಗಳೂರಿನ ಜೆಪ್ಪು ಸಂತ ಜೋಸೆಫರ ಇಂಟರ್ ಡಯಾಸಿಸ್ ಸೆಮಿನರಿಯಲ್ಲಿ 47ನೇ ವಾರ್ಷಿಕ ತತ್ವಶಾಸ್ತ್ರ ಸಂಶೋಧನಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನದ ವಿಷಯ: “ಭರವಸೆ: ಬಹು ಆಯಾಮಗಳೊಂದಿಗೆ ತತ್ತ್ವಶಾಸ್ತ್ರೀಯ ವಿಶ್ಲೇಷಣೆ.” ಈ ವಿಷಯವು 2025ರಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸ್ ಘೋಷಿಸಿರುವ ಜ್ಯೂಬಿಲಿ ವರ್ಷದ “ಭರವಸೆಯ ಯಾತ್ರಿಕರು” ಎಂಬ ಧ್ಯೇಯ ವಾಕ್ಯಕ್ಕೆ ಪೂರಕವಾಗಿದೆ. ಜಗತ್ತಿನಲ್ಲಿನ ಸಂಘರ್ಷಗಳು, […]

News

ಶ್ರೀ ಮಹಾಭಾರತ ಸರಣಿಯ 50 ನೇ ತಾಳಮದ್ದಳೆ ಅಭಿಮನ್ಯು ಕಾಳಗ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ 100 ತಾಳಮದ್ದಳೆಗಳಲ್ಲಿ 50ನೇ ತಾಳಮದ್ದಳೆಯು ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು.  ಶ್ರೀ ಶಾರದೋತ್ಸವ ಸಮಿತಿಯ ಪ್ರಾಯೋಜಕತ್ವದಲ್ಲಿ ನಡೆದ ಅಭಿಮನ್ಯು ಕಾಳಗದಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ. ಆಚಾರ್ಯ ಅಲಂಕಾರು, ಸುರೇಶ್ ರಾವ್ ಬನ್ನೆಂಗಳ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ […]

News

ಯೇಸು ಸ್ಪರ್ಶ ತಂಡದ ಪ್ರಖ್ಯಾತ ಬೋಧಕ ಸಹೋದರ ಟಿ.ಕೆ. ಜಾರ್ಜ್ ಇನ್ನಿಲ್ಲ

ಬೆಂಗಳೂರು: ಯೇಸು ಸ್ಪರ್ಶ ತಂಡದ ಪ್ರಖ್ಯಾತ ಪ್ರಚಾರಕ ಸಹೋದರ ಟಿ.ಕೆ. ಜಾರ್ಜ್ ಅವರು ಅಕ್ಟೋಬರ್ 14ರಂದು ಸೋಮವಾರ ಬೆಂಗಳೂರಿನ ಸೈಂಟ್ ಜಾನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69ವರ್ಷ ವಯಸ್ಸಾಗಿತ್ತು. ಉಸಿರಾಟ ಸಮಸ್ಯೆಯಿಂದ ಕಳೆದ 77 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಟಿ.ಕೆ. ವರ್ಗೀಸ್ ಮತ್ತು ಬೇಬಿ ಮೇರಿ ಅವರ ಮಗನಾಗಿ ಟಿ.ಕೆ. ಜಾರ್ಜ್ ಇವರು 1955 ಸಪ್ಟಂಬರ್ 8ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಅವರು 3ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡರು. ಮಲ […]

News

ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾಗಿ ಸುರೇಶ್ ಮೈರಡ್ಕ, ಸಂಚಾಲಕರಾಗಿ ಹಬೀಬ್ ಮಾಣಿ ಪುನರ್ ಆಯ್ಕೆ  

ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾಗಿ ಸುರೇಶ್ ಮೈರಡ್ಕ ಹಾಗೂ ಸಂಚಾಲಕರಾಗಿ ಹಬೀಬ್ ಮಾಣಿ ಪುನರ್ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 12ರಂದು ಶನಿವಾರ ಬಿ.ಸಿ. ರೋಡ್ ಸರಕಾರಿ ನೌಕರರ ಸಭಾಭವನದಲ್ಲಿ ಜರಗಿದ ಸಭೆಯಲ್ಲಿ ಸರ್ವಾನುಮತದಿಂದ ಪುನರ್ ಆಯ್ಕೆ ಮಾಡಲಾಯಿತು.  ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಗೌರವ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ, ಕಾರ್ಯದರ್ಶಿ ಚಂದ್ರಶೇಖರ್ ಕರ್ಣ ಮದ್ವ, ಕಾರ್ಯಾಧ್ಯಕ್ಷ ಚಂದ್ರ ಹಾಸ […]

You cannot copy content of this page