November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಿಎಂ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದ ಹೈಕೋರ್ಟ್ – ತನಿಖೆಗೆ ಆದೇಶ  

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೈಟ್‌ಗಳ ಅಕ್ರಮ ವರ್ಗಾವಣೆ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರು ಆದೇಶ ನೀಡಿದ್ದರು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಿಎಂ ಅರ್ಜಿಯನ್ನು ವಜಾಗೊಳಿಸಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದು ತನಿಖೆಗೆ ಆದೇಶಿಸಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) 14 ಸೈಟುಗಳನ್ನು ತಮ್ಮ ಪತ್ನಿ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಖಾಸಗಿ ವ್ಯಕ್ತಿಗಳು ದೂರು […]

News

ಸಮಾಜದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಭ್ರಾತೃತ್ವವನ್ನು ಹಂಚುವ ಕಾರ್ಯದಲ್ಲಿ ಸದಾ ಕಾರ್ಯನಿರತರಾಗುತ್ತೇವೆ – ಬಾಲಕೃಷ್ಣ ಆಳ್ವ ಕೊಡಾಜೆ

ಬಂಟ್ವಾಳ : ಭವ್ಯ ಭಾರತದ ಜಾತ್ಯಾತೀತ ಪರಂಪರೆಯ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಭ್ರಾತೃತ್ವವನ್ನು ಹಂಚುವ ಕಾರ್ಯವನ್ನು ನಾವು ಮಾಡಿದ್ದೇವೆ. ಇದಕ್ಕೆ ಪ್ರತಿಯಾಗಿ ನಮಗೆ ಪ್ರಶಂಸೆಯ ಜೊತೆಗೆ ಟೀಕೆಗಳೂ ಬಂದಿದೆ ಆದರೆ ಯಾವುದೇ ರೀತಿಯ ಟೀಕೆಗಳಿಗೆ ಕಿವಿಗೊಡದೆ ನಾವು ಸಮಾಜವನ್ನು ಕಟ್ಟುವ ಕೆಲಸದಲ್ಲಿ ಸದಾ ಕಾರ್ಯನಿರತರಾಗಿರುತ್ತೇವೆ ಎಂದು ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು. ಹಿಂದೂ ಮತ್ತು ಮುಸಲ್ಮಾನರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಸ್ಪರ ಸಿಹಿ ತಿಂಡಿ ಹಂಚುವ ಜೊತೆಗೆ ಪ್ರೀತಿಯನ್ನು ಹಂಚುವ […]

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ : ಸವಿನೆನಪಿಗೆ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಲೋಕಾರ್ಪಣೆ.

  ಮಡಂತ್ಯಾರು : ಪಾರೆಂಕಿ ಮತ್ತು ಮಾಲಾಡಿ ಗ್ರಾಮಗಳ ಹಿರಿಯರ ಒಗ್ಗಟ್ಟಿನ ಸಂಕಲ್ಪದಂತೆ 1970ರಲ್ಲಿ ಪ್ರಾರಂಭಗೊಂಡ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 50 ವರ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಸವಿನೆನಪಿಗೆ ಕೇಂದ್ರ ಕಚೇರಿಯ ನೂತನ ಕಟ್ಟಡ “ಪರಿಶ್ರಮ” ಇದರ ಉದ್ಘಾಟನಾ ಸಮಾರಂಭವು ಸಪ್ಟಂಬರ್ 23ರಂದು ಸಂಘದ ಅಧ್ಯಕ್ಷ ಕೆ. ಅರವಿಂದ ಜೈನ್ ಮತ್ತು ಆಡಳಿತ ಮಂಡಳಿಯ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ […]

ಉಜಿರೆಯ ಕುಮಾರಿ ವಿಲೋನಾ ಡಿಕುನ್ಹಾ ರಾಷ್ಟ್ರಮಟ್ಟದ ಥ್ರೋಬಾಲ್ ಸ್ಪರ್ಧೆಗೆ ಆಯ್ಕೆ

ಉಜಿರೆ : ಕುಮಾರಿ ವಿಲೋನಾ ಡಿಕುನ್ಹಾ ಇವರು 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದು, ಅಕ್ಟೋಬರ್ 03 ರಿಂದ 05 ರವರೆಗೆ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಉಜಿರೆ ಹಲಕೆ ನಿವಾಸಿ ರಿಚರ್ಡ್ ಡಿಕುನ್ಹಾ ಹಾಗೂ ಅನಿತಾ ಡಿಸೋಜ ದಂಪತಿಯ ಪುತ್ರಿಯಾಗಿದ್ದು, ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇವರಿಗೆ ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, […]

News

ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ  

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಂಟ್ವಾಳ ತಾಲೂಕು ಘಟಕವು ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು  ಇದರ ಸಹಯೋಗದಲ್ಲಿ  ಬಂಟ್ವಾಳ ತಾಲೂಕು 23 ನೇ ಕನ್ನಡ ಸಾಹಿತ್ಯ ಸಮ್ಮೇಳನ – 2024  ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯು ಮಂಚಿ ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ಸಪ್ಟಂಬರ್ 22ರಂದು ಭಾನುವಾರ ನಡೆಯಿತು. ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ವಿ. ಸುಬ್ರಹ್ಮಣ್ಯ ಭಟ್ ಮಾತನಾಡಿ, “ಸಾಹಿತ್ಯ ಸಮ್ಮೇಳನವೆಂದರೆ […]

ಮುಚ್ಚುವ ಸರಕಾರಿ ಶಾಲೆಗೆ ಪುನರ್ ಜನ್ಮ ಕೊಟ್ಟ ಶಿಕ್ಷಕಿ ಸಲ್ಡಾನ್ಹಾ ಇವರಿಗೆ ವ್ಯಾಪಕ ಪ್ರಶಂಸೆ

ಮಂಗಳೂರು : ‘ಮನಸ್ಸಿದ್ದರೆ ಮಾರ್ಗ’ ಎಂಬ ನಾನ್ನುಡಿಯಂತೆ ‘ಸರಕಾರಿ ಕೆಲಸ ದೇವರ ಕೆಲಸ’ ಎಂದು ದೇವರ ಮೇಲೆ ವಿಶ್ವಾಸ ವಿಟ್ಟು ಜನರ ಸಹಕಾರದಿಂದ ಶಿಕ್ಷಕಿ ಸಲ್ಡಾನ್ಹಾ ಮಾಡಿದ ಕ್ರಾಂತಿ ನಿಜವಾಗಿಯೂ ಮೆಚ್ಚುವಂತದ್ದು.  ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಜಿಲ್ಲೆಯೆಂದೇ ಹೆಸರುವಾಸಿ. ಈ ಕ್ರಾಂತಿಯ ಹಿಂದೆ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಶಿಕ್ಷಕ – ಶಿಕ್ಷಕಿಯರ ಪರಿಶ್ರಮವೂ ಅಷ್ಟೇ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಂಗಳೂರಿನ ಈ ಶಿಕ್ಷಕಿ ಮಕ್ಕಳ ಪಾಲಿಗೆ ವರವಾಗಿದ್ದಾರೆ. ಹೌದು, ಬೋಳಾರದ ದಕ್ಷಿಣ […]

ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ – ಅಪಘಾತದಲ್ಲಿ ಗಾಯಗೊಂಡವರಿಗೆ ರೂಪಾಯಿ 1.5 ಲಕ್ಷದವರೆಗೆ ಉಚಿತ ಚಿಕಿತ್ಸೆ

ದೇಶದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ದಿನನಿತ್ಯ ಸಾವು-ನೋವು ಸಂಭವಿಸುವ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಆದರೆ ಇಂತಹ ಘಟನೆಗಳು ಎದುರಾದಾಗ ಕುಟುಂಬಗಳು ಖರ್ಚು ಮಾಡಲು ಹಣವಿಲ್ಲದೆ ಕಣ್ಣೀರಿನಲ್ಲಿ ಮುಳುಗುತ್ತವೆ. ಆದರೆ ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ರೂಪಾಯಿ 1.5 ಲಕ್ಷ ತನಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.   ಸದ್ಯದಲ್ಲೇ ದೇಶಾದ್ಯಂತ ಉಚಿತ ಚಿಕಿತ್ಸೆಯ ಯೋಜನೆ ಜಾರಿ ಬರಲಿದೆ. ರಸ್ತೆ ಅಪಘಾತದ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲು ಯೋಜನೆ […]

ಬೊವಿಕಾನ ಚರ್ಚ್ ನಲ್ಲಿ ‘ಚರ್ಚ್ ದಿನ’ ವಿಜೃಂಭಣೆಯಿಂದ ಆಚರಣೆ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬೊವಿಕಾನ ಘಟಕದ ಆಶ್ರಯದಲ್ಲಿ ರಿಸನ್ ಸೇವಿಯರ್ ಸಮರ್ಪಿತ ಬೊವಿಕಾನ ಚರ್ಚ್ ನಲ್ಲಿ ‘ಚರ್ಚ್ ದಿನ’ವನ್ನು ಸಪ್ಟಂಬರ್ 22ರಂದು ಭಾನುವಾರ ದಿವ್ಯ ಬಲಿಪೂಜೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಪೂಜೆಯ ಬಳಿಕ ಚರ್ಚ್ ಆವರಣದಲ್ಲಿ ಚರ್ಚ್ ವ್ಯಾಪ್ತಿಯ ಭಕ್ತಾಧಿಗಳಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚರ್ಚ್ ಧರ್ಮಗುರು ವಂದನೀಯ ಫಾದರ್ ಕ್ಲೋಡಿ ಸ್ಟ್ಯಾನಿ ವಾಸ್ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅತಿಥಿ ಗುರುಗಳಾದ ವಂದನೀಯ ಫಾದರ್ ಮನೋಹರ್ ರವರು ಹಾಜರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ವಿವಿಧ ಆಟೋಟ […]

ಅನಂತಾಡಿಯಲ್ಲಿ ಮಕ್ಕಳೊಂದಿಗೆ ಮಗುವಿನಂತೆ ಕೆಸರಿನಲ್ಲಾಡಿದ ಮಗು ಮನದ ಜಿಲ್ಲಾಧಿಕಾರಿ ಮುಲೈ ಮುಗಿಲನ್

ಬಂಟ್ವಾಳ : “ರೈತ ದೇಶದ ಬೆನ್ನೆಲುಬು. ಸಂತೋಷದೊಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು. ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ಆತನು ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ” ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು. ಅವರು ಸಪ್ಟಂಬರ್ 22ರಂದು ರವಿವಾರ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ.) ಅನಂತಾಡಿ ವತಿಯಿಂದ ಪಡಿಪಿರೆ […]

Study Session Held at Saint Philomena College Men’s Hostel Puttur

A study session was held at the Saint Philomena College Men’s Hostel, Puttur, with a focus on two key health and social issues: “The Importance of Cleanliness” and “The Impact of Alcohol and Tobacco Abuse.” The session was organized in collaboration with Patrao Hospital, Puttur, whose resource team brought valuable insights to the students. The […]

You cannot copy content of this page