November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಪೆರುವಾಯಿ ಘಟಕದ ವತಿಯಿಂದ ಪೆರುವಾಯಿ ಚರ್ಚ್ ಸಮುದಾಯ ಭವನದಲ್ಲಿ ಕೃಷಿ ಮಾಹಿತಿ ಶಿಬಿರ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಪೆರುವಾಯಿ ಘಟಕ, ಪೆರುವಾಯಿ ಚರ್ಚ್ ಪರಿಸರ ಆಯೋಗ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಬಂಟ್ವಾಳ ಮತ್ತು ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಸಮಗ್ರ ಕೃಷಿ ಮಾಹಿತಿ ಶಿಬಿರವು ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ಜುಲಾಯ್ 10ರಂದು ಗುರುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತಾ ದೇವಾಲಯದ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೆರುವಾಯಿ […]

News

ಅಪಘಾತ ಪ್ರಕರಣ ಆರೋಪಿ ಸುನಿಲ್ ಕುಮಾರ್ ದೋಷ ಮುಕ್ತ

ಸುಮಾರು ಮೂರು ವರ್ಷಗಳ ಹಿಂದೆ 2022 ಜೂನ್ 18ರಂದು ಆರೋಪಿ ಲಾರಿ ಚಾಲಕ ಸುನಿಲ್ ಕುಮಾರ್  ರವರು KA–26-A-7351ನೇ ನೋಂದಣಿ ನಂಬರಿನ ಲಾರಿಯನ್ನು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ ಚಲಾಯಿಸಿಕೊಂಡು ಹೋಗಿ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ದೋರ್ಮೆ ಎಂಬಲ್ಲಿ ಲಾರಿಯ ಮುಂದೆ ಬಾಲಕೃಷ್ಣರವರು ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ ರಸ್ತೆಯ ತೀರಾ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EE-8362ನೇ ನೋಂದಣಿ ನಂಬರಿನ ಸ್ಕೂಟರನ್ನು  ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಎದುರುಗಡೆಯಿಂದ […]

News

ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ – ಪ್ರಕರಣ ದಾಖಲು – ಆರೋಪಿ ವಶಕ್ಕೆ

ಬಾಕಿ ಇರಿಸಿದ ದಿನಸಿ ಖರೀದಿ ದುಡ್ಡನ್ನು ಕೇಳಿದ್ದಕ್ಕೆ ಬೆಳ್ತಂಗಡಿ ಕುವೆಟ್ಟು ಗ್ರಾಮದ 50 ವರ್ಷ ಪ್ರಾಯದ ಸದಕುತುಲ್ಲ ಎಂಬವರ ಅಂಗಡಿಗೆ ಉಮೇಶ್ ಬಂಗೇರ ಎಂಬಾತನು ಬೆಂಕಿ ಹಚ್ಚಿದ್ದರಿಂದ 3,000 ರೂಪಾಯಿ ನಷ್ಟ ಉಂಟಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜುಲಾಯ್ 9ರಂದು ಆರೋಪಿತ ಉಮೇಶ್ ಬಂಗೇರ ಅವರಲ್ಲಿ ಬೆಳ್ತಂಗಡಿ ಗುರುವಾಯನಕೆರೆ ಎಂಬಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡ ಅಂಗಡಿ ಮಾಲೀಕ ಸದಕುತುಲ್ಲ  ಎಂಬವರು ಈ ಮುಂಚೆ ದಿನಸಿ ಖರೀದಿಸಿ ಬಾಕಿ ಇರಿಸಿದ ಹಣವನ್ನು ಕೇಳಿದ್ದರು. […]

News

FATHER MULLER HOMOEOPATHIC MEDICAL COLLEGE TO HOST THE  RUBY JUBILEE FINALE ON 14th JULY 2025

Father Muller Homoeopathic Medical College (FMHMC), a unit of the Father Muller Charitable Institutions (FMCI), is proud to announce the Ruby Jubilee Celebrations of its 40 years of service to the society, on 14th July 2025, Monday from 5pm to 10pm at Father Muller Convention Centre, Kankanady under the able leadership of Rev. Fr Faustine […]

News

ಕರ್ನಾಟಕದಲ್ಲಿನ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  

ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಬಲ ನೀಡಲು LKG ಯಿಂದ PUC ತನಕ ಕರ್ನಾಟಕ ಸರಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಹಾಜರಾತಿ ಹಾಗೂ ಗುಣಮಟ್ಟ ಹೆಚ್ಚಿಸಲು, ಉಚಿತ ಬಸ್ ವ್ಯವಸ್ಥೆಯನ್ನು ನೀಡಲು ಕರ್ನಾಟಕ ರಾಜ್ಯ ಸರಕಾರವು ಉದ್ದೇಶಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಈ ಉಚಿತ ಬಸ್ ಪ್ರಯಾಣದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಕರ್ನಾಟಕ ರಾಜ್ಯ ಸರಕಾರದ ದಿಟ್ಟ ಹೆಜ್ಜೆಯೂ ಇದಾಗಿದೆ ಎಂದು ಅವರು ತಮ್ಮ ಎಕ್ಸ್ […]

News

ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ  

ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲಾಯ್ 13ರಂದು ಆದಿತ್ಯವಾರ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನರವರ ಸುಪುತ್ರ  ಫೈಝಲ್ ರವರ ಮದುವೆಯ ಪ್ರಯುಕ್ತ ಆರು ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭವು ಜುಲಾಯ್ 10ರಂದು ಗುರುವಾರ  ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು. ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನ ಅವರ ನೇತೃತ್ವದಲ್ಲಿ ನಡೆದ ನಿಖಾಹ್ ಕಾರ್ಯಕ್ರಮದಲ್ಲಿ ಸುರಿಬೈಲ್ ದಾರುಲ್ ಅಶ್ […]

News

ಧರ್ಮಸ್ಥಳ ಗ್ರಾಮ ಪಂಚಾಯತ್ ಐದು ವರ್ಷದ ಸಾಧನೆ ಬಗ್ಗೆ ಪತ್ರಿಕಾಗೋಷ್ಠಿ

ಧರ್ಮಸ್ಥಳ 8 ವಾರ್ಡ್ ಗಳನ್ನು ಹೊಂದಿದ್ದು 7083 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. 1150 ಎಕ್ರೆ ಕೃಷಿ ಭೂಮಿಯನ್ನು ಹೊಂದಿದ್ದು, ಮಂಡಲ ಪಂಚಾಯತ್ ನಿಂದ ಆರಂಭಿಸಿ ಗ್ರಾಮದ ಅಭಿವೃದ್ಧಿ ಜನಗಳಿಗೆ ಮುಟ್ಟುವ ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಪಾರದರ್ಶಕವಾಗಿ ಪರಿಣಾಮಕಾರಿಯಾಗಿ ಮಾಡಿದ್ದೇವೆ ಎಂದು ಜುಲಾಯ್ 9ರಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ಕೈಗೊಂಡಿದ್ದೇವೆ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಗ್ರಾಮ ಪಂಚಾಯತ್ ಮಾಡುವ ನೆಲೆಯಲ್ಲಿ ಮಹತ್ವದ ನಿರ್ಧಾರ […]

News

ಕಾನೂನು ಬದ್ಧವಾಗಿ ಮಾಡಬೇಕಾದ ಕೆಲಸಕ್ಕೆ ಲಂಚದ ಬೇಡಿಕೆ – ರೆಡ್ ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತ ಪೊಲೀಸರು

ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ – ಪ್ರಕರಣ ದಾಖಲು ಕಾನೂನು ಬದ್ಧವಾಗಿ ಮಾಡಬೇಕಾದ ಸರಕಾರಿ ಕೆಲಸಕ್ಕೆ ರೂಪಾಯಿ 50,000 ಲಂಚದ ಬೇಡಿಕೆ ಇಟ್ಟ ಕದ್ರಿ ಪೊಲೀಸ್ ಠಾಣೆಯ ತಸ್ಲೀಂ {ಸಿ.ಎಚ್.ಸಿ. – 322} ಅವರನ್ನು ರೂಪಾಯಿ 5,000 ಲಂಚ ಪಡೆದುಕೊಳ್ಳುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ. ನಂತೂರು ಬಳಿ ನಡೆದ ಕಾರು ಹಾಗೂ ಸ್ಕೂಟರ್ ಅಪಘಾತಕ್ಕೆ ಸಂಬಂಧಿಸಿ, ಕದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲೀಂ ಕಾರಿನ ದಾಖಲಾತಿಗಳನ್ನು ತೆಗೆದುಕೊಂಡು, ಕಾರನ್ನು ವಾಪಸ್ಸು ಕೊಡಲು ರೂಪಾಯಿ […]

News

ಉದ್ಘಾಟನೆಗೆ ಸಿದ್ಧಗೊಂಡಿರುವ ಪುತ್ತೂರಿನ ಹೊಸ ನ್ಯಾಯಾಲಯ ಸಂಕೀರ್ಣ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ನ್ಯಾಯಾಲಯ ಕಟ್ಟಡ ಸಿದ್ಧಗೊಂಡು ಉದ್ಘಾಟನೆಗಾಗಿ ಕಾಯುತ್ತಿದೆ. ಸದ್ಯ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಯಾಲಯವು ಉದ್ಘಾಟನೆ ಬಳಿಕ ಬನ್ನೂರಿನ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದೆ. 2022ರಲ್ಲಿ ಈ ಹೊಸ ನ್ಯಾಯಾಲಯ ಕಟ್ಟಡದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಇದೀಗ ಕಟ್ಟಡದ ಬಹುತೇಕ ಕಾಮಗಾರಿಗಳು ಮುಕ್ತಾಯವಾಗಿದೆ. ಅಂದಿನ ಶಾಸಕರಾಗಿದ್ದ ಸಂಜೀವ ಮಠಂದೂರು ಮೂಲಕ ಮಂಜೂರಾದ ಸುಮಾರು 50ಕೋಟಿ ರೂಪಾಯಿ ವೆಚ್ಚದ ನ್ಯಾಯಾಲಯ ಸಂಕೀರ್ಣ ಮತ್ತು 5 ಕೋಟಿ ರೂಪಾಯಿ ವೆಚ್ಚದ ವಕೀಲರ ಸಂಘದ […]

News

ಬೆಳ್ತಂಗಡಿ ಅಂಬೇಡ್ಕರ್ ಭವನ ನಿರ್ಮಾಣ ಯೋಜನೆ ಕಾಮಗಾರಿಗೆ ರೂಪಾಯಿ ಮೂರು ಕೋಟಿ ಅನುದಾನ

ಬೆಳ್ತಂಗಡಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣ ಯೋಜನೆ ಕಾಮಗಾರಿಗೆ ಕರ್ನಾಟಕ ರಾಜ್ಯ ಸರಕಾರ ರೂಪಾಯಿ ಮೂರು ಕೋಟಿ ಅನುದಾನ ಮಂಜೂರುಗೊಳಿಸಿದೆ. ಅನುದಾನ ಮಂಜೂರುಗೊಳಿಸುವಲ್ಲಿ ಸಹಕಾರ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾಲಾಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, […]

You cannot copy content of this page