ಒಬ್ಬ ವ್ಯಕ್ತಿ ಗ್ರಾಮ ಪಂಚಾಯತ್ ಸದಸ್ಯನಾದರೂ ಸಾಕು ಅಹಂ ಬರುತ್ತೆ, ಹತ್ತು ವರ್ಷ ಪ್ರಧಾನಿ ಆದರೂ ಡಾ. ಮನಮೋಹನ್ ಸಿಂಗ್ ಬಳಿ ಅಹಂ ಸುಳಿಯಲಿಲ್ಲ – ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ
ಒಬ್ಬ ವ್ಯಕ್ತಿ ಗ್ರಾಮ ಪಂಚಾಯತ್ ಸದಸ್ಯ ಅಥವಾ ಅಧ್ಯಕ್ಷನಾದರೂ ಸಾಕು, ಆತನಿಗೆ ತನ್ನಿಂದ ತಾನಾಗಿಯೇ ಅಹಂ ಬಂದು ಬಿಡುತ್ತದೆ. ಅದೆಲ್ಲವನ್ನೂ ಮೀರಿ ನಿಂತವರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಇವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, 10 ವರ್ಷ ಡಾ. ಮನಮೋಹನ್ ಸಿಂಗ್ ನಮ್ಮ ದೇಶದ ಪ್ರಧಾನಿಯಾಗಿದ್ದರೂ ಕೂಡ, ಅಹಂ ಅವರ ಬಳಿ ಸುಳಿಯಲಿಲ್ಲ. ನಯ ವಿನಯತೆ ಅವರಲ್ಲಿ ಎದ್ದು ಕಾಣುತ್ತಿತ್ತು. […]













