November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶಿಕ್ಷಣಕ್ಕೆ ಸರಕಾರದ ಆದ್ಯತೆ – ಸಚಿವ ದಿನೇಶ್ ಗುಂಡೂರಾವ್

ಬಂಟ್ವಾಳ :  ಸರ್ವರಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ಶಿಕ್ಷಕರ ನೇಮಕಾತಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಬಂಟ್ವಾಳ ತಾಲೂಕು ಬೊಂಡಾಲದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣಗೊಂಡ ಶ್ರೀ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಹಾಗೂ  ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ […]

News

ಬಜಾಲ್‍ನಲ್ಲಿ ಸಡಗರದ ಸೌಹಾರ್ದ ಕ್ರಿಸ್‍ಮಸ್ ಕಾರ್ಯಕ್ರಮ

ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಬಜಾಲ್‍ನ ಪಕ್ಕಲಡ್ಕದಲ್ಲಿ ಡಿಸೆಂಬರ್ 20ರಂದು ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಸ್‍ಮಸ್ ಆಚರಣೆ ಸಡಗರದಿಂದ ನೆರವೇರಿತು. ಸ್ಥಳೀಯ ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಹೋಲಿ ಸ್ಪಿರಿಟ್ ಚರ್ಚ್, ಮೊಹಿಯುದ್ದೀನ್ ಜುಮ್ಮಾ ಮಸೀದಿ, ಪಕ್ಕಲಡ್ಕ, ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ ವ್ಯಾಯಾಮ ಶಾಲೆ ಇವುಗಳ ಸಂಯುಕ್ತ ಭಾಗೀದಾರಿಕೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ದೈಯ್ಜಿ ವರ್ಲ್ಡ್‍ನ ಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಮಾನವೀಯತೆಯೇ ಶ್ರೇಷ್ಠ […]

News

ತುಂಬೆ ವಿದ್ಯಾ ಸಂಸ್ಥೆಗಳ 36ನೇ ವಾರ್ಷಿಕೋತ್ಸವ

ಬಂಟ್ವಾಳ : ತುಂಬೆಯಂತಹ ಗ್ರಾಮೀಣ ಪ್ರದೇಶದಲ್ಲಿ ಡಾ| ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್‌ ಇವರ ಕುಟುಂಬ ವರ್ಗದವರು ಕೂಡಿ ಸ್ಥಾಪಿಸಿದ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶಿಸ್ತು, ಕಲಿಕೆ, ಸಾಧನೆಗಳು ಅಭಿನಂದನಾರ್ಹ ಎಂದು ಕರ್ನಾಟಕ ರಾಜ್ಯದ ಸ್ಟೇಟ್ ಎಲೈಡ್ ಆಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ಚೆಯೆರ್‌ಮ್ಯಾನ್ ಡಾ| ಯು. ಟಿ. ಇಫ್ತಿಕಾರ್ ಫರೀದ್ ಹೇಳಿದರು. ತುಂಬೆ ಪದವಿ ಪೂರ್ವ ಕಾಲೇಜಿನ 36ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಓರ್ವ ಶಿಸ್ತುಬದ್ಧ ವ್ಯಕ್ತಿ ತನ್ನ ಕೌಟುಂಬಿಕ […]

News

ಕೊಡಾಜೆಯ ಪ್ರಸಿದ್ಧ ಬೆಲ್ಲದ ವ್ಯಾಪಾರಿ ನಾಗೇಶ್ ಶೆಟ್ಟಿ ನಿಧನ

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಕೊಡಾಜೆ ನಿವಾಸಿ ಪ್ರಸಿದ್ಧ ಬೆಲ್ಲದ ವ್ಯಾಪಾರಿ ನಾಗೇಶ್ ಶೆಟ್ಟಿ, ಇವರು ಇಂದು ಡಿಸೆಂಬರ್ 21ರಂದು ಬೆಳಿಗ್ಗೆ ತಮ್ಮ ಕೊಡಾಜೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಪತ್ನಿ ಸವಿತಾ, ಮಕ್ಕಳಾದ ಆದಿತ್ಯ ಹಾಗೂ ಅಭಯ್ ಇವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ರಾತ್ರಿ ಕೊಡಾಜೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.  

News

ಮಂಗಳೂರು ಕರಾವಳಿ ಉತ್ಸವದಲ್ಲಿ  ಹೆಲಿಕಾಪ್ಟರ್ ಮೂಲಕ ಕರಾವಳಿ ಪ್ರದಕ್ಷಿಣೆ

ಮಂಗಳೂರು ಡಿಸೆಂಬರ್ 20: ಈ ಬಾರಿಯ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ಕರಾವಳಿಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೆ ತಲಾ ರೂಪಾಯಿ 4500/- ವೆಚ್ಚದಲ್ಲಿ ಮಂಗಳೂರು ಪ್ರದೇಶವನ್ನು ಆಕಾಶ ಮಾರ್ಗದಲ್ಲಿ ಹೆಲಿಕಾಪ್ಟರ್  ಮೂಲಕ ಸುತ್ತ ಹಾಕಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಡಿಸೆಂಬರ್ 21ರಿಂದ 31ರವರೆಗೆ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಒಂದು ಬಾರಿ ಆರು ಮಂದಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬಹುದಾಗಿದೆ. ಈ […]

News

ಬಂಟ್ವಾಳದಲ್ಲಿ ಕರಾವಳಿ ಕಲೋತ್ಸವ 2024-25 ಮತ್ತು ಬಹುಸಂಸ್ಕ್ರತಿ ಸಂಭ್ರಮಕ್ಕೆ ಅದ್ದೂರಿ ಚಾಲನೆ

ಬಂಟ್ವಾಳ : ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ , ಚಿಣ್ಣರ ಲೋಕ ಸೇವಾಬಂಧು (ರಿ) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 20 ರಿಂದ ಜನವರಿ 26 ವರೆಗೆ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯುವ ಕರಾವಳಿ ಕಲೋತ್ಸವ 2024-25 ಮತ್ತು ಬಹುಸಂಸ್ಕ್ರತಿ ಸಂಭ್ರಮಕ್ಕೆ ಅದ್ದೂರಿ  ಚಾಲನೆ ದೊರಕಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋಲ್ಡ್ ನ್ ಪಾರ್ಕ್ ಅಸೋಸಿಯೇಟ್ಸ್ ಪಾಲುದಾರ […]

News

ಬಂಧನದಿಂದ ಶಾಸಕ ಸಿ.ಟಿ. ರವಿ ತಕ್ಷಣ ಬಿಡುಗಡೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಆಕ್ಷೇಪಾರ್ಹ ಮತ್ತು ಅಶ್ಲೀಲ ಪದ ಬಳಕೆ ಮಾಡಿರುವ ಕುರಿತಂತೆ ವಿಧಾನ ಪರಿಷದ್ ಸದಸ್ಯ ಸಿ.ಟಿ. ರವಿ ಇವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳರ್ ವಿರುದ್ಧದ ಹೇಳಿಕೆ ವಿಚಾರದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯನ್ನು ಬಂಧಿಸಲಾಗಿತ್ತು. ಶಾಸಕ ಸಿ.ಟಿ. ರವಿ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ […]

News

ಬಜ್ಪೆ ಗುಂಡಾರಪದವು ಇಲ್ಲಿ ಮಹಿಳಾ ಸಬಲೀಕರಣ ಮತ್ತು ಅನರಕ್ಷತೆ ಕಾರ್ಯಕ್ರಮ

ಡಿಸೆಂಬರ್ 17ರಂದು ಸ್ಪೂರ್ತಿ ಚಾರಿಟೇಬಲ್ ಟ್ರಸ್ಟ್ ವಾಮಂಜೂರು ಮತ್ತು ಡಾ. ದಯಾನಂದ ಪೈ, ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಬಜ್ಪೆ ಏರ್‌ಪೋರ್ಟ್ ರೋಡ್ ಗುಂಡಾರಪದವು ಇಲ್ಲಿ ಧರ್ಮಜ್ಯೋತಿ ಸೇವಾ ಸಂಸ್ಥೆಯ ಕಾರ್ಯಕರ್ತೆ ರೆನಿಟಾ ಲೂವಿಸ್ ಇವರು ಮಹಿಳೆಯರ ಸಬಲೀಕರಣ ಮತ್ತು ಅನರಕ್ಷತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 34 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಎಮ್.ಎಸ್.ಡಬ್ಲ್ಯೂ. ವಿದ್ಯಾರ್ಥಿನಿ ನಿಶಾ ನಿರೂಪಿಸಿ, ಗೀತಾಶ್ರೀ ವಂದಿಸಿದರು. ಪ್ರಸನ್ನಾ ಮತ್ತು ಸುದೀಪ್ […]

News

ಧರ್ಮಸ್ಥಳದ ಡಾ. ಹೇಮಾವತಿ ಹೆಗಡೆ ಇವರಿಗೆ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ” ಪ್ರದಾನ

ಬಂಟ್ವಾಳ ತಾಲೂಕಿನ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ವತಿಯಿಂದ ನೀಡುವ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ” ಗೆ ಧರ್ಮಸ್ಥಳದ ಡಾ. ಹೇಮಾವತಿ ಹೆಗಡೆ ಇವರನ್ನು ಆಯ್ಕೆ ಮಾಡಲಾಯಿತು. ಡಾ. ಹೇಮಾವತಿ ಹೆಗಡೆ ಇವರನ್ನು ಡಿಸೆಂಬರ್ 19ರಂದು ಗುರುವಾರ ಸಮಿತಿಯ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭೇಟಿಮಾಡಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಇದರ ಮುಖ್ಯಸ್ತೆ ಪ್ರತಿಷ್ಟಿತ ಕರ್ನಾಟಕ […]

News

KSRTC ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಅಬ್ದುಲ್ ಕುಂಞ್ ಮೃತ್ಯು

KSRTC ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕು, ಕಬಕ ಗ್ರಾಮದ ಮುರ ಎಂಬಲ್ಲಿ ಡಿಸೆಂಬರ್ 19ರಂದು ಗುರುವಾರ ಸಂಭವಿಸಿದೆ. ಮೃತ ಬೈಕ್ ಸವಾರನನ್ನು 66ವರ್ಷ ಪ್ರಾಯದ ಅಬ್ದುಲ್ ಕುಂಞ್ ಎಂದು ಗುರುತಿಸಲಾಗಿದೆ. KSRTC ಬಸ್ ಪುತ್ತೂರು ಕಡೆಯಿಂದ ಕೆದಿಲ ಕಡೆಗೆ ಸಂಚರಿಸುತ್ತಿದ್ದ ಬೈಕಿಗೆ ಮುರ ಎಂಬಲ್ಲಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತ ತೀವ್ರತೆಗೆ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ […]

You cannot copy content of this page